ಬಿಸಿ ಬಿಸಿ ಸುದ್ದಿ

ಶರಣಬಸವಪ್ಪ ಅಪ್ಪಾ ಜನ್ಮದಿನೋತ್ಸವ; ಉಚಿತ ಅರೋಗ್ಯ ತಪಾಸಣೆ ಶಿಬಿರ

ಸುರಪುರ: ನಗರದ, ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಆವರಣದಲ್ಲಿ ಪರಮಪೂಜ್ಯ ಡಾ. ಶರಣಬಸವಪ್ಪಾ ಅಪ್ಪ ಹಾಗೂ ಮಾಥೋಶ್ರೀ ದಾಕ್ಷಾಯಿಣಿ ಅವ್ವಾಜಿಯವರ ಮತ್ತು ಪೂಜ್ಯ ಚಿ. ದೊಡ್ಡಪ್ಪ ಅಪ್ಪರವರ ಜನ್ಮದಿನೊತ್ಸವದ ಅಂಗವಾಗಿ ಉಚಿತ ಅರೋಗ್ಯ ತಪಾಸಣೆ ಶಿಬಿರವು ಕಾಲೇಜಿನ ಸದಸ್ಯರಾದ ಡಾ.ನಿದಿಶ್ ಎನ್ ನಿಷ್ಠಿ ರವರು ಚಾಲನೆ ನೀಡಿದರು.

ಡಾ. ವೆಂಕಪ್ಪ ನಾಯಕ್, ತಾಲೂಕ ಅರೋಗ್ಯ ಅಧಿಕಾರಿಗಳು ಸುರುಪುರು ಇವರು ಮುಖ್ಯ ಅಥಿತಿಗಳಾಗಿ ಆಗಮಿಸಿ ಕಲಬುರಗಿ ಶರಣರನ್ನ ನೆನೆದು ಪೂಜ್ಯ ಅಪ್ಪಾಜಿ, ಮಾತೋಶ್ರೀ ಅವ್ವಾಜಿ ಮತ್ತು ಚಿ. ದೊಡ್ಡಪ್ಪಾಜಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ ಕೋವಿಡ್ ಸಮಯದಲ್ಲಿ ಕೋವಿಡ್ ರೋಗಿಗಳಗೋಸ್ಕರ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ವಸತಿ ನಿಲಯವನ್ನು ಕೊಟ್ಟು ಸರಕಾರದ ಜೊತೆ ಕೈ ಜೋಡಿಸಿ ಸುಮಾರು ಐದುನೂರು ರಿಂದ ಸಾವಿರಾರು ಜನರ ಪ್ರಾಣ ಉಳಿಸಿದ ಕೀರ್ತಿ ಈ ಶರಣಬಸವೇಶ್ವರ ಸಂಸ್ಥೆಗೆ ಸಲ್ಲುತ್ತದೆ ಮತ್ತು ಸುರುಪುರು ಭಾಗದಲ್ಲಿ ಇಂಜಿನಿಯರ್ ಮಹಾವಿದ್ಯಾಲಯ ಸ್ಥಾಪಿಸಿ ಎಷ್ಟೋ ರೈತ ಮತ್ತು ಬಡ ಮಕ್ಕಳ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ ಕೀರ್ತಿ ನಿಷ್ಠಿ ಮನೆತನದವರಿಗೆ ಸೇರುತ್ತದೆ ಎಂದರು.

ಡಾ.ನಿದಿಶ್ ಎನ್ ನಿಷ್ಠಿ ಮಾತನಾಡಿದ ಅವರು,ನಾವು ಸೇವಿಸುವ ಆಹಾರ, ಕುಡಿಯುವ ನೀರು ಜೊತೆಗೆ ವಾಸಿಸುವ ಸ್ಥಳ ಸ್ವಚ್ಛವಾಗಿರಬೇಕು ಮತ್ತು ಸುತ್ತಮುತ್ತಲಿನ ವಾತಾವರಣದ ಬಗ್ಗೆಯೂ ನಮಗೆ ಅರಿವು ಇರಬೇಕು ಜೊತೆಗೆ ಆಗೋಗ್ಯ ತಪಾಸಣೆಯು ಕೂಡ ಕಾಲಕಾಲಕ್ಕೆ ಮಾಡಿಸುವುದು ತುಂಬಾ ವಳಿತು ಎಂದು ಕಿವಿ ಮಾತು ಹೇಳಿದರು.

ಡಾ. ವಿರೇಶ್ ಇಂಗಳೇಶ್ವರ ರವರು ಏನೇ ಆಗಿ ಮೊದಲು ಮಾನವನಾಗಿ ಮತ್ತು ಇಂತಹ: ಮಹತ್ವ ಕಾರ್ಯಕ್ರಮದಲ್ಲಿ ತುಂಬು ಮನಸಿನಿಂದ ಭಾಗವಸಬೇಕು ಮತ್ತು ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಶ್ರದ್ದೆ ಇರಬೇಕು ಎಂದು ಹೇಳಿದರು ಮತ್ತು ಒಳ್ಳೆ ಸುಸಜ್ಜಿತ ಮಹಾವಿದ್ಯಾಲಯಕ್ಕೆ ಶಕ್ತಿ ಎಂದರೆ ವಿದ್ಯಾರ್ಥಿಗಳ ಭಲ ಮತ್ತು ಪ್ರಾಧ್ಯಾಪಕ ಶಕ್ತಿ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದರು.

ಡಾ.ರವಿಕುಮಾರ್ ಡಾ. ಸುವರ್ಣದೇವಿ, ಸ್ತ್ರೀ ರೋಗ ತಜ್ಞರು ಸುರುಪುರು ಹಾಗೂ ಡಾ.ಪವನಕುಮಾರ್ ಜೋಶಿ ಸುರುಪುರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮತ್ತು ಎಲ್ಲ ವೈದ್ಯರು ಸುರುಪುರಿನ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿರುವ ಬಡ ರೋಗಿಗಳಿಗೆ ಉಚಿತ ಅರೋಗ್ಯ ತಪಾಸಣೆ ಮಾಡಿದರು.

ಡಾ. ಶರಣಬಸಪ್ಪ ಸಾಲಿ ಪ್ರಾಂಶುಪಾಲರು ಅತಿಥಿಗಳನ್ನು ಸ್ವಾಗತಿಸುವ ಮುಖಾಂತರ ಮಹಾಶರಣರ ಜನ್ಮದಿನೊತ್ಸವದ ಅಂಗವಾಗಿ ಉಚಿತ ಅರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿ ಈ ಮಹಾಕಾರ್ಯದಲ್ಲಿ ಎಲ್ಲರು ಪಾಲ್ಗೊಂಡು ಯಶಸ್ವೀಗೊಳಿಸಲು ಕೇಳಿಕೊಂಡರು.

ಈ ಕಾರ್ಯಕ್ರಮದಲ್ಲಿ ವಿವಿಧ ಭಾಗದ ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಪ್ರೊ.ಗೀತಾ ನಿರೂಪಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago