ಗುರು-ಹಿರಿಯರನ್ನು ಗೌರವಿಸುವ ಸಂಸ್ಕøತಿ ದೊಡ್ಡದು; ವಯೋವೃದ್ಧರಿಗೆ ಸತ್ಕಾರ, ಹಣ್ಣುಗಳ ವಿತರಣೆ

0
38

ಕಲಬುರಗಿ: ಮನೆ, ಸಮಾಜಕ್ಕೆ ಹಿರಿಯರು,ವೃದ್ಧರು ಭಾರವಲ್ಲ. ಅವರು ತಮ್ಮ ಕುಟುಂಬ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಇಳಿವಯಸ್ಸಿನಲ್ಲಿ ವಯೋವೃದ್ಧರು ಭಾರವೆಂದು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವುದು ಮಕ್ಕಳ ಅಂತಹ ಸಂಸ್ಕøತಿ ದೊಡ್ಡದಾಗಿದೆ ಎಂದು ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಹೇಳಿದರು.

ನಗರದ ಸಮೀಪದ ಮಹಾಗಾಂವ ಕ್ರಾಸ್ ಸಮೀಪವಿರುವ ‘ಸಂಜೀವಿನಿ ವೃದ್ಧಾಶ್ರಮ’ದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬಳಗದ ಅಧ್ಯಕ್ಷ, ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ 43ನೇ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಏರ್ಪಡಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ವಯೋವೃದ್ಧರಿಗೆ ಸತ್ಕಾರ ಮತ್ತು ಹಣ್ಣುಗಳ ವಿತರಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಮಾಜ ಸೇವಕ ಶರಣು ಪೂಜಾರಿ ಮಾತನಾಡಿ, ಸ್ವಾರ್ಥ ಜೀವನ ನಡೆಸುವವರೇ ಹೆಚ್ಚಾಗಿರುವಾಗ, ಸಮಾಜದ ಒಳಿತಿಗಾಗಿ ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಎಚ್.ಬಿ.ಪಾಟೀಲ ಅವರು ನಿರಂತರವಾಗಿ ಹತ್ತು-ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅವರಲ್ಲಿರುವ ಸಮಾಜಪರ ಕಾಳಜಿ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಸಮಾಜ ಸೇವಕ ಎಚ್.ಬಿ.ಪಾಟೀಲ, ವೃದ್ಧಾಶ್ರಮದ ವ್ಯವಸ್ಥಾಪಕಿ ಪೂಜಾ ಕೆ.ಲೇಂಗಟಿ, ಪ್ರಮುಕರಾದ ಶಿವಲಿಂಗಪ್ಪ ಪಾಟೀಲ, ಸುಭದ್ರಾ ನಾಗೂರ, ಶಿವಪುತ್ರ ಬೆಣ್ಣುರ, ಕಸ್ತೂರಬಾಯಿ ಸುಲ್ತಾನಪುರ, ಕಮಲಾಬಾಯಿ, ಸಿಕಶನಸಿಂಗ್, ಕಾಮಣ್ಣ ಮದಗುಣಕಿ, ಅರಣಮ್ಮ, ಶಶಿಕಲಾ ಕುಲಕರ್ಣಿ, ಇಂದುಮತಿ, ರಾಮರಾಯ ಹರಕಂಚಿ, ಮಲ್ಲಮ್ಮ, ನಿಜದೇವಿ ಜಮಾದಾರ, ರಾಜಶೇಖರ ಕುಂಬಾರ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here