ಕನ್ನಡಕ್ಕೆ ಮುನ್ನುಡಿ ಬರೆದ ಕಲ್ಯಾಣ ಕರ್ನಾಟಕ

0
52

ಕಲಬುರಗಿ: ಬಸವೇಶ್ವರರು ಸ್ಥಾಪಿಸಿದ ಬಸವಕಲ್ಯಾಣದ ಅನುಭವ ಮಂಟಪ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನವನ್ನು ನೀಡಿದೆ. ಶುದ್ದ ಕನ್ನಡದಲ್ಲಿ ವಚನಗಳನ್ನು ರಚಿಸಲಾಗಿದೆ. ಕವಿರಾಜಮಾರ್ಗ ನಾಡಿನ ಮೊದಲ ಗ್ರಂಥ, ಶಬ್ದಮಣಿದರ್ಪಣ ಪ್ರಥಮ ವ್ಯಾಕರಣ ಗ್ರಂಥವನ್ನು ನಾಡಿಗೆ ನೀಡುವ ಮೂಲಕ ಕಲ್ಯಾಣ ಕರ್ನಾಟಕವು ಕನ್ನಡಕ್ಕೆ ಮುನ್ನುಡಿ ಬರೆದ ಹೆಮ್ಮೆಯ ಪ್ರದೇಶ ನಮ್ಮದಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಮತಪಟ್ಟರು.

ತಾಲೂಕಿನ ಭೀಮಳ್ಳಿಯ ಆದರ್ಶ ವಿದ್ಯಾಲಯದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-15ರಲ್ಲಿ ‘ಕನ್ನಡ ನಾಡು-ನುಡಿಗೆ ಕಲ್ಯಾಣ ಕರ್ನಾಟಕದ ಕೊಡುಗೆ’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.

Contact Your\'s Advertisement; 9902492681

ಬಸವಾದಿ ಶರಣರು ರಚಿಸಿದ ವಚನಗಳು ಕನ್ನಡದ ಸಾಹಿತ್ಯದ ಹೃದಯವಾಗಿದೆ. ಮಹಾವೀರಾಚಾರ್ಯರು ಗಣೀತ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆಯನ್ನು ನೀಡಲು ರಾಷ್ಟ್ರಕೂಟ ಅರಸರ ಪ್ರೋತ್ಸಾಹ ನೀಡಿದರು. ಈಗಿನ ಕಲಬುರಗಿಗೆ ಮುಂಚೆ ಕಲ್ಲಂಬುರಗಿ ಎಂಬ ಹೆಸರಿರುವುದು ಹುಣಸಿ ಹಡಗಿಲ್ ಶಾಸನದಲ್ಲಿ ಉಲ್ಲೇಖವಾಗಿದೆ. ಶರಣಬಸವೇಶ್ವರರು, ಗವಿಸಿದ್ದೇಶ್ವರ, ಕಡಕೋಳ ಮಡಿವಾಳಪ್ಪ, ಏಕಾಂತ ರಾಮಯ್ಯ, ಗಜೇಶ ಮಸಣಯ್ಯ ಸೇರಿದಂತೆ ಅನೇಕ ಮಹನೀಯರ ಸ್ಥಳಗಳಿವೆ ಎಂದರು.

ಸೂಫಿ ಸಂತ ಖಾಜಾ ಬಂದಾನವಾಜ್, ಕಿಷ್ಕಿಂದಾ, ಸನ್ನತಿ, ಮಸ್ಕಿ, ಗುರಸಣಗಿ, ಹಂಪಿ, ವಿಜಯನಗರ ಸಾಮ್ರಾಜ್ಯ, ಕಾಳಗಿ, ಮಹುಮನಿ ಕೋಟೆ, ಬಿದ್ರಿ ಕಲೆ, ವೆಂಕಟಪ್ಪ ನಾಯಕರಂತಹ ಸ್ವಾತಂತ್ರ್ಯ ಹೋರಾಟಗಾರರು, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಭಾಗ, ವಿಜ್ಞಾನೇಶ್ವರ ಭವನ ಹೊಂದಿರುವ ಪ್ರದೇಶ ಇದಾಗಿದೆ. ವಿಶ್ವಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ನ್ಯಾಯವನ್ನು ನೀಡಿದ ಭಾಗ ನಮ್ಮದಾಗಿದೆ. ಕವಿರಾಜಮಾರ್ಗ ಗ್ರಂಥ ಕುವೆಂಪು, ಬೇಂದ್ರೆ ಅಂತಹ ಮಹಾನ ಸಾಹಿತಿಗಳಿಗೆ ಸ್ಪೂರ್ತಿ ನೀಡಿದ ಗ್ರಂಥವಾಗಿದೆ. ದಾಸ ಸಾಹಿತಿಗಳ ಕೊಡುಗೆ ಕೂಡಾ ಅನನ್ಯವಾಗಿದೆ. ಕಕ ಭಾಗದ ಜನರು ಧೈರ್ಯವಂತರು, ಶೂರರು, ತ್ಯಾಗಿಗಳು ಇದ್ದಾರೆ ಎಂದು ಕಕ ಭಾಗದ ಇತಿಹಾಸ ಹಾಗೂ ಅದು ನಾಡು-ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಅವರು ಸುದೀರ್ಘವಾಗಿ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಕಲ್ಯಾಣ ಕರ್ನಾಟಕ ಹೆಸರಿಗೆ ಮಾತ್ರವಾಗಬಾರದು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಭಾಗ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾಗಿದೆ. ಕೈಗಾರಿಕೆಗಳು ಸ್ಥಾಪನೆಯಾಗಬೇಕಾಗಿದೆ. ಕನ್ನಡ ಭಾಷೆ-ಸಾಹಿತ್ಯ ಉಳಿಸಿ, ಬೆಳೆಸುವಲ್ಲಿ ಶರಣಬಸವೇಶ್ವರ ಸಂಸ್ಥಾನ, ಬಾಲ್ಕಿ ಹಿರೇಮಠದ ಕೊಡುಗೆ ಮರೆಯುವಂತಿಲ್ಲ. ಕಕ ಭಾಗದಲ್ಲಿ ಅನೇಕ ಜನ ಶರಣರು, ಮಹನೀಯರು, ತತ್ವಪದಕಾರರು, ಜನಪದರು, ಬುದ್ದಿಜೀವಿಗಳು, ಕಲಾವಿದರು, ಸಂಗೀತಗಾರರು ಇದ್ದು, ಅವರು ಕಾಲ-ಕಾಲಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ಕಲಾಲಿಂಗ ದಿಕ್ಸಂಗಿಕರ್, ಪ್ರಮುಖರಾದ ಅಣ್ಣಾರಾಯ ಎಚ್.ಮಂಗಾಣೆ, ಶಾಂತಪ್ಪ ಜಮಾದಾರ, ಶಿವರಾಯ ಜಮಾದಾರ, ಸುಧಾಕರ ಹುಲಿಮನಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here