ಕಲಬುರಗಿ; ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ವಿರುದ್ಧ ಜಾತಿನಿಂದನೆ ಮಾಡಿರುವ ಆಳಂದ ಶಾಸಕ ಬಿ ಆರ್ ಪಾಟೀಲ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಳಂದ ಮಂಡಲ ಬಿಜೆಪಿ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿದರು.
ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಶಾಸಕ ಬಿ ಆರ್ ಪಾಟೀಲ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ, ಶಾಸಕ ಬಿ ಆರ್ ಪಾಟೀಲ ನಕಲಿ ಸಮಾಜವಾದಿಯಾಗಿದ್ದಾರೆ ಕೇವಲ ಚುನಾವಣೆ ಗೆಲ್ಲುವುದಕ್ಕಾಗಿ ಮಾತ್ರ ಬಣ್ಣದ ಬಣ್ಣದ ಮಾತುಗಳನ್ನು ಹೇಳುತ್ತಾರೆ. ಬಿ ಆರ್ ಪಾಟೀಲರಿಗೆ ಅಸಲಿಗೆ ಸಿದ್ಧಾಂತ ಎನ್ನುವುದೇ ಇಲ್ಲ ಎಂದು ಆರೋಪಿಸಿದರು.
ಬಿ ಆರ್ ಪಾಟೀಲ ರಾಜಕೀಯ ಜೀವನದುದ್ದಕ್ಕೂ ಮಾಡಿಕೊಂಡು ಬಂದಿರುವುದು ಇದನ್ನೇ ಅವರೊಬ್ಬ ಸಮಯಸಾಧಕ ರಾಜಕಾರಣಿ. ಸಮಾಜದ ಯಾವ ವರ್ಗದ ಬಗ್ಗೆಯೂ ಅವರಿಗೆ ಕಾಳಜಿಯಿಲ್ಲ. ಈ ಹಿಂದೆಯೂ ಅನೇಕ ಬಾರಿ ಸಮಾಜದ್ರೋಹಿ, ಸಮಾಜವನ್ನು ಒಡೆಯುವ ಹಾಗೂ ಸಮಾಜದ ಸಾಮರಸ್ಯ ಕೆಡಿಸುವ ಹೇಳಿಕೆ ನೀಡಿದ್ದಾರೆ ಇಂಥವರು ಶಾಸಕ ಸ್ಥಾನದಲ್ಲಿ ಮುಂದುವರೆಯಲು ಅರ್ಹತೆ ಹೊಂದಿಲ್ಲ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಬಸವರಾಜ ಬಿರಾದಾರ ಮಾತನಾಡಿ, ಆಳಂದ ಶಾಸಕ ಬಿ ಆರ್ ಪಾಟೀಲ ತಮ್ಮ ಕಾರ್ಯಕರ್ತರೊಡನೆ ದೂರವಾಣಿಯಲ್ಲಿ ಮಾತನಾಡುವಾಗ ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರರ ಜಾತಿ ನಿಂದನೆ ಮಾಡಿ ಅವಹೇಳನ ಮಾಡಿರುತ್ತಾರೆ. ಇದರಿಂದ ಅವರು ಸ್ಪಷ್ಟವಾಗಿ ಸಂವಿಧಾನ ವಿರೋಧಿ ನಡೆಯನ್ನು ಉಲ್ಲಂಘಿಸಿದ್ದು ಕಂಡು ಬರುತ್ತದೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲೆಂದೇ ಜಾತಿ ನಿಂದನೆ ಮಾಡಿರುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಫೆÇೀನ್‍ನಲ್ಲಿ, ಜಾತಿವಾದಿ ಟೀಕೆಗಳನ್ನು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತೀರ್ಪು ನೀಡಿದೆ.
ಆಳಂದ ಶಾಸಕ ಬಿ ಆರ್ ಪಾಟೀಲ ಸಂವಿಧಾನದತ್ತವಾಗಿ ಪ್ರಮಾಣ ವಚನ ಸ್ವೀಕರಿಸಿ ಜಾತಿನಿಂದನೆಯನ್ನು ಮಾಡಿ ಸಂವಿಧಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆ ಅವಮಾನ ಮಾಡಿರುತ್ತಾರೆ ಆದ್ದರಿಂದ ಇವರ ಮೇಲೆ ಜಾತಿನಿಂದನೆ ಪ್ರಕರಣವನ್ನು ದಾಖಲಿಸಲು ಸೂಕ್ತ ನಿರ್ದೇಶನ ನೀಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಒತ್ತಾಯಿಸಿದರು. ಮುಖಂಡರಾದ ಹಣಮಂತರಾವ ಕಾಬಡೆ, ಗೊರಖನಾಥ ದೊಡ್ಡಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಶಾಸಕ ಬಿ ಆರ್ ಪಾಟೀಲ ಪ್ರತಿಕೃತಿ ದಹಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕಂದಗೂಳೆ, ಮಲ್ಲಣ್ಣ ನಾಗೂರೆ, ಮಲ್ಲಿಕಾರ್ಜುನ ತಡಕಲ, ಚಂದ್ರಕಾಂತ ಭೂಸನೂರ, ರುದ್ರಯ್ಯ ಹಿರೇಮಠ, ಶ್ರೀಮಂತ ನಾಮಣೆ, ಶಿವಪುತ್ರ ಬೆಳ್ಳೆ, ಅಮೃತ ಬಿಬ್ರಾಣಿ, ಆದಿನಾಥ ಹೀರಾ, ಜಗನ್ನಾಥ ಹೊಸಕುರುಬ, ಗೌಡಪ್ಪ ಪಾಟೀಲ, ಪ್ರಭಾಕರ ರಾಮಜಿ, ಅಶೋಕ ಗುತ್ತೇದಾರ, ಶಿವಾನಂದ ಪಾಟೀಲ, ಶರಣಗೌಡ ಪಾಟೀಲ. ಸುಭಾಷ ಪಾಟೀಲ, ರಮೇಶ ಪಾಟೀಲ, ದತ್ತು ಪಾಟೀಲ, ರವಿ ಪಾಟೀಲ, ಸೋಮು ಹತ್ತರಕಿ, ಶ್ರೀಶೈಲ ಖಜೂರೆ, ಗಣೇಶ ಪಾಟೀಲ, ದಯಾನಂದ ಮಾಳಗೆ, ಸಿದ್ದು ಪಾಟೀಲ, ಸೀತಾರಾಮ ಜಮಾದಾರ, ಗುರು ಲಾವಣಿ, ಮಲ್ಲಿಕಾರ್ಜುನ ಸಾವಳಗಿ, ಸುನೀಲ ಹಿರೋಳಿಕರ, ಪ್ರಕಾಶ ಮಾನೆ, ಗಣೇಶ ಓಣಮಶೆಟ್ಟಿ, ಲಿಂಗರಾಜ ಉಡಗಿ, ಸಂಜಯ ಮೂಲಗೆ, ಸಿದ್ದಾರೂಢ ಬುಜುರ್ಕೆ, ಪ್ರಫುಲ ಬಾಬಳಸೂರೆ, ನಾಮದೇವ ಪವಾರ, ಶ್ರೀನಿವಾಸ ಗುತ್ತೇದಾರ, ತಿಪ್ಪಯ್ಯ ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.