ಬಿಸಿ ಬಿಸಿ ಸುದ್ದಿ

ಕಲಬುರಗಿ; ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಸಲು ಹತ್ತಿ ಖರೀದಿ ಕೇಂದ್ರ ಪ್ರಾರಂಭ

ಕಲಬುರಗಿ; 2023-24ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹತ್ತಿಯನ್ನು ಪ್ರತಿ ಕ್ವಿಂಟಲ್‍ಗೆ (ಉದ್ದನೆಯ ಎಳೆ) 7,020 ರೂ. ಹಾಗೂ (ಮಧ್ಯಮ ಎಳೆ) 6,620 ರೂ. ಗಳ ದರದಲ್ಲಿ ಖರೀದಿಸಲು ಅನುಕೂಲವಾಗುವಂತೆ ಭಾರತೀಯ ಹತ್ತಿ ನಿಗಮ ವತಿಯಿಂದ ಕಲಬುರಗಿ ತಾಲೂಕಿನ ಫಿರೋಜಾಬಾದ ಗ್ರಾಮದ ಹತ್ತಿರ ಇರುವ ಶ್ರೀ ರಾಮಕೃಷ್ಣ ಆಗ್ರೋ ಇಂಡಸ್ಟೀಸ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಮೇಲ್ಕಂಡ ಸ್ಥಳದಲ್ಲಿ ಈ ಹತ್ತಿ ಖರೀದಿ ಕೇಂದ್ರವನ್ನು ನವೆಂಬರ್ 21 ರಂದು ಪ್ರಾರಂಭಿಲಾಗಿದ್ದು, ಕಲಬುರಗಿ ತಾಲೂಕಿನ ಹತ್ತಿ ಬೆಳೆಯುವ ರೈತರು ಇದರ ಲಾಭ ಪಡೆಯಬಹುದಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಬಕ್ಷ ಬಿಜಾಪುರ, ಸಹಾಯಕ ಕಾರ್ಯದರ್ಶಿ ಸಂತೋಷ ಬುಡಗೆ, ಭಾರತೀಯ ಹತ್ತಿ ನಿಗಮದ ಹತ್ತಿ ಅಧಿಕಾರಿ ಚಂದ್ರಕಾಂತ ಪಕಡೆ ಹಾಗೂ ಹತ್ತಿ ಫ್ಯಾಕ್ಟರಿಯ ಮಾಲೀಕರಾದ ರವಿ ಮೂಡಬೂಳ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ವಾಡಿ; ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ವಾಡಿ:ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಆಚರಿಸಲಾಯಿತು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ…

15 mins ago

ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕ ಡಿ. ದೇವರಾಜ ಅರಸು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಜಿಲ್ಲಾ ಹಿಂದುಳಿದ…

16 mins ago

“ಸದ್ಭಾವನಾ ದಿನಾಚರಣೆ”

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ…

21 mins ago

371ಜೆ ಕಾಯ್ದೆ ದಶಮಾನೋತ್ಸವ ಹಿನ್ನೆಲೆ,ಸಂಭ್ರಮಾಚರಣೆಗೆ ಚಿಂತನೆ; ಡಿ.ಕೆ.ಶಿವಕುಮಾರ

ಕಲಬುರಗಿ; ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಭಾಷೆಯನ್ನೆ ಬರೆದ 371ಜೆ ಕಾಯ್ದೆ ಜಾರಿಗೆ ಬಂದು ಇದೀಗ ದಶಮಾನೋತ್ಸವ ಆಚರಿಸುತ್ತಿದ್ದು, ಈ…

27 mins ago

ಕಲಬುರಗಿ: 25 ರಂದು ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ

ಕಲಬುರಗಿ, ಆ. 20 - ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ವತಿಯಿಂದ ಸಹಕಾರದೊಂದಿಗೆ ಇದೇ ಆಗಸ್ಟ್ 25 ರಂದು ಒಂದು…

30 mins ago

ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಕಲಬುರಗಿ: ಮುಡಾ ಹಗರಣದ ತನಿಖೆಗೆ ಮುಖ್ಯಮಂತ್ರಿಗಳೇ ನ್ಯಾಯಾಂಗ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದ್ದಾರೆ. ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು…

33 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420