ಕಲಬುರಗಿ: ಇದೇ ತಿಂಗಳ 26 ರಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಲಯದ ವಿದ್ಯುನ್ಮಾನ ಮತ್ತು ದೂರಸಂಪರ್ಕ ವಿಭಾಗದಲ್ಲಿ ಚಾಲನೆಗೊಂಡ ಟೆಕ್ಯೂಪ-೩ ಪ್ರಾಯೋಜಿತ ಐದು ದಿನಗಳ ರೋಬೋಟಿಕ್ಸ ಮತ್ತು ಆರ್ಡಿನೋ ಕಾರ್ಯಾಗಾರಕ್ಕೆ ಇಂದು ತೆರೆ ಎಳೆಯಲಾಯಿತು.
ಸತತ 2 ದಿನಗಳ ಆರ್ಡಿನೋ ಪ್ರೋಜೆಕ್ಟಗಳ ಮೇಲೆ ತರಬೇತಿಯನ್ನು ಪಡೆದ ವಿವಿಧ ವಿಭಾಗದ ಹಾಗೂ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಇಂದು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸತತ ೬ ಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯವನ್ನು ಬಳಸಿ ವಿವಿಧ ರೀತಿಯ ನೈಜ ಪ್ರಾಜೆಕ್ಟಗಳನ್ನು ತಯಾರಿಸಿದರು. ತೀರ್ಪುಗಾರರಾಗಿ ಆಗಮಿಸಿದ ವಿಭಾಗದ ಪ್ರಾಧ್ಯಾಪಕರುಗಳು ಬೆಳಿಗ್ಗೆಯಿಂದ ವಿದ್ಯಾರ್ಥಿಗಳ ಕಾರ್ಯವನ್ನು ಗಮನಿಸಿ ಸೂಕ್ತವಾದಂತಹ ಮೂರು ವಿದ್ಯಾರ್ಥಿಗಳ ಗುಂಪುಗಳಿಗೆ ಪ್ರಶಸ್ತಿಯನ್ನು ನೀಡಿದರು.
ಬಹುತೇಕ ಕಾರ್ಯಾಗಾರಗಳಲ್ಲಿ ಉನ್ನತ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಬಂದು ಕಾರ್ಯಾಗಾರವನ್ನು ನಡೆಯಿಸಿಕೊಡುವುದು ಸರ್ವೇಸಾಮಾನ್ಯ ಅದರೆ ಇಂದು ನಡೆದ ಈ ಕಾರ್ಯಗಾರಕ್ಕೆ ಹಿರಿಯ ವಿದ್ಯಾರ್ಥಿಗಳು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರನ್ನು ಸ್ಪರ್ಧೆಗೆ ಅರ್ಹರನ್ನಾಗಿ ಮಾಡಿದ್ದರು. ಈ ತರಹದ ಕಾರ್ಯಾಗಾರ ಪಿ.ಡಿ.ಎ. ಇತಿಹಾಸದಲ್ಲಿಯೇ ಮೊದಲಬಾರಿಗೆ ನಡೆದಿದ್ದು ತಮಗೆ ಹೆಮ್ಮೆ ಎನಿಸಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ತಮ್ಮ ಸಂತಹ ವ್ಯಕ್ತಪಡಿಸಿದರು.
ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೆಕ್ಯೂಪ್-೩ ರ ಸಂಚಾಲಕರು ಮಾತನಾಡಿ ವಿದ್ಯುನ್ಮಾನ ಮತ್ತು ದೂರಸಂಪರ್ಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷರು ತಮ್ಮ ನೂತನ ಪದ್ದತಿಯನ್ನು ಅನುಸರಿಸಿ ಆರ್ಡಿನೋ ಹೆಕಾಥಾನಗೆ ಪರಿಪೂರ್ಣ ಅರ್ಥವನ್ನು ನೀಡಿದ್ದಾರೆಂದು ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಿದರು.
ವಿಭಾಗದ ಹಿರಿಯ ವಿದ್ಯಾರ್ಥಿಗಳು ಆರ್ಡಿನೋ ತರಬೇತಿಯನ್ನು ಹೊಂದಿ ಪರಿಣಿತಿಯನ್ನು ಪಡೆದುಕೊಂಡು ಅದನ್ನು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಕೊಡುವ ನಿಟ್ಟಿನಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ವಿಭಾಗದ ಡಾ. ರಾಜು ಯಾನಮಶೆಟ್ಟಿ ಮತ್ತು ಪ್ರೊ. ಪದ್ಮಪ್ರೀಯಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿವಿಧ ರೀತಿಯ ಪ್ರೋಜೆಕ್ಟಗಳನ್ನು ಮಾಡಿ ನೂತನ ರೀತಿಯ ಕಾರ್ಯಾಗಾರಕ್ಕೆ ಅಣಿಯಾಗಿದ್ದರು ಅವರ ಈ ಶ್ರಮಕ್ಕೆ ಫಲದೊರಕಿದೆ ಎಂದು ವಿಭಾಗದ ಹಿರಿಯ ಪ್ರಾಧ್ಯಾಪಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪ್ರಥಮ ಮತ್ತು ದ್ವೀತಿಯ ಪ್ರಶಸ್ತಿಯನ್ನು ವಿದ್ಯುನ್ಮಾನ ಮತ್ತು ದೂರಸಂಪರ್ಕ ವಿಭಾಗದ ವಿದ್ಯಾರ್ಥಿಗಳಿಗೆ ಲಭಿಸಿದ್ದು ತೃತಿಯ ಸ್ಥಾನವನ್ನು ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ದೊರಕಿದೆ ಎಂದು ಕಾರ್ಯಾಗಾರದ ಪ್ರಮುಖ ಸಂಚಾಲಕರಾದ ಪ್ರೊ.ಪದ್ಮಪ್ರೀಯಾ ಪಾಟೀಲ ಅವರು ತಿಳಿಸಿದರು.
ಐದು ದಿನಗಳ ಈ ಕಾರ್ಯಾಗಾರದಲ್ಲಿ ಮೊದಲ ಎರಡು ದಿನಗಳು ರೋಬೋಟಿಕ್ಸ್ ವಿಚಾರ ಸಂಕಿರಣವಿದ್ದು ನಂತರದ ಮೂರು ದಿನಗಳು ಆರ್ಡಿನೋ ಕಾರ್ಯಾಗಾರಕ್ಕೆ ಮೀಸಲಿಡಲಾಗಿತ್ತು. ಇದರಲ್ಲಿ ಎರಡು ದಿನಗಳು ’ಬೂಟ್ ಕ್ಯಾಂಪ್ ತರಬೇತಿ ನಡೆಯಿಸಿ ವಿದ್ಯಾರ್ಥಿಗಳಿಗೆ ಪರಿಣಿತಿಯನ್ನು ಕೊಡಲಾಗಿತ್ತು. ಕೊನೆಯ ದಿನವಾದ ಇಂದು ವಿದ್ಯಾರ್ಥಿಗಳಿಗೆ ಹೆಕಾಥಾನ ಸ್ಪರ್ಧೇಯನ್ನು ಎರ್ಪಡಿಸಿ ಅವರ ತಾಂತ್ರಿಕ ಜ್ಞಾನವನ್ನು ಅಳಿಯಲಾಗಿತ್ತು ಎಂದು ವಿದ್ಯಾರ್ಥಿ ತರಬೇತುದಾರರು ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ಈ ಕಾರ್ಯಾಗಾರದ ಸಂಯೋಜಕರಾಗಿದ್ದು, ಪ್ರೊ. ಶ್ರೀಧರ ಕೆ. ಮತ್ತು ಪ್ರೊ. ಪದ್ಮಪ್ರೀಯಾ ಪಾಟೀಲ ಇವರು ಸಂಚಾಲಕರಾಗಿ ಕಾರ್ಯನಿರ್ವಹಿಸುವರು. ವಿಭಾಗದ ಪ್ರಾಧ್ಯಾಪಕರು, ಉಪ ಪ್ರಾಧ್ಯಾಪಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಹಾಗೂ ವಿದ್ಯಾರ್ಥಿಗಳು ಈ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…