ಕಲಬುರಗಿ: ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಮೂರನೇ ದಿನವು ಅಂತರ-ನೀಕಾಯ ಬಾಲಕಿಯರ ಥ್ರೋ ಬಾಲ ಪಂದ್ಯಗಳೊಂದಿಗೆ ಪ್ರಾರಂಭವಾಯಿತು.
ಥ್ರೋ ಬಾಲ ನಲ್ಲಿ ಮೆಡಿಕಲ್ ಸೈನ್ಸಸ್ ಫ್ಯಾಕಲ್ಟಿ (FOMS) ತಂಡವು ಟ್ರೋಫಿಯನ್ನು ಗೆದ್ದುಕೊಂಡಿತು. ಮತ್ತು ಫ್ಯಾಕಲ್ಟಿ ಆಫ್ ಸೈನ್ಸಸ್ (FOS) ರನ್ನರ ಅಪ ಆಗಿ ಹೊರ ಹೊಮ್ಮಿತು. ಪಂದ್ಯಕ್ಕೆ ಡಾ. ಶಾಜಿಯಾ ಫರ್ಹೀನ್ , ಡಾ. ಶೇಖ್ ತಬಸ್ಸುಮ್ , ಪ್ರೊ. ಮಂಜುನಾಥ್ ಡಿ.ಸಿ ಮತ್ತು ಡಾ. ಸುಧಾರಾಣಿ ತೀರ್ಪುಗಾರರಾಗಿದ್ದರು.
ಬಾಲಕಿಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ನಿಕಾಯದ ನಿಮ್ರಾ ಸಿದ್ದಿಕಾ ಪ್ರಥಮ ಸ್ಥಾನ ಮತ್ತು ಸೋನಿಯಾ ಸಾಬಾ ದ್ವಿತೀಯ ಸ್ಥಾನ ಪಡೆದರು.
ಅದೇ ರೀತಿ ಬಾಲಕರ ಪೈಕಿ ಮೆಡಿಕಲ್ ಸೈನ್ಸಸ್ ಫ್ಯಾಕಲ್ಟಿ ಮೊಹಮ್ಮದ್ ಸಾಹಿಲ್ ಉಮ್ಮರ್ ಪ್ರಥಮ ಹಾಗೂ ಮಂಜು ಪಿ ದ್ವಿತೀಯ ಸ್ಥಾನ ಪಡೆದರು. ಪಂದ್ಯವನ್ನು ಡಾ. ಫಹೀಮ್ , ಡಾ. ಸುನಿಲ್ ಮಾನೆ ,. ರಮೇಶ್ ಎನ್ ನಿರ್ಣಯಿಸಿದರು.
ಮುಖವರ್ಣಿಕೆ ಸ್ಪರ್ಧೆಯಲ್ಲಿ ಒಟ್ಟು 13 ಭಾಗವಹಿಸುವವರು ಸೃಜನಶೀಲತೆ ಮತ್ತು ಪ್ರತಿಭೆಯ ವರ್ಣರಂಜಿತ ಸಂಯೋಜನೆಯನ್ನು ಪ್ರದರ್ಶಿಸಿದರು.ವದೃಷ್ಟಿ ಸ್ಪರ್ಧೆಯ ವಿಷಯವಾಗಿತ್ತು. ವಿಶಿಷ್ಟ ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ಮೆಡಿಕಲ್ ಸೈನ್ಸಸ್ ಫ್ಯಾಕಲ್ಟಿ ಅಫೀಫಾ ಪ್ರಥಮ ಮತ್ತು ರೂಪೇಶ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಗೆ ಮೊಹಮ್ಮದ್ ಶುಜಾವುದ್ದೀನ್ ಸಫಿ , ಡಾ. ರಫಿಯಾ ಗುಲ್ಮೆಹರ್ , ಡಾ. ಶಿಲ್ಪಾ ನಂದಿ , ಮತ್ತು ಡಾ. ಶೇಖ್ ಫೆಹ್ಮಿದಾ ತೀರ್ಪುಗಾರರಾಗಿದ್ದರು.
ರಂಗೋಲಿ ಸ್ಪರ್ಧೆಯ ಥೀಮ ‘ಒಟ್ಟಿಗೆ ನಾವು ಹೋರಾಡುತ್ತೇವೆ’ ಇದರಲ್ಲಿ ಮೆಡಿಕಲ್ ಸೈನ್ಸಸ್ ಫ್ಯಾಕಲ್ಟಿ (FOMS) ವೈಭವಿ ಕುಲಕರ್ಣಿ, ಸಂಜನಾ, ಸೈಯದಾ, ಪ್ರೇರಣಾ ಹಾಗೂ ರನ್ನರ್ಸ್ ಅಪ್ ಫ್ಯಾಕಲ್ಟಿ ಆಫ್ ಲ್ಯಾಂಗ್ವೇಜಸ್, ಆರ್ಟ್ಸ್ ಹ್ಯುಮಾನಿಟೀಸ್, ಸೈನ್ಸಸ್, ಸಮಾಜ ವಿಜ್ಞಾನ, ಕಾನೂನು, ವಾಣಿಜ್ಯ ಮತ್ತು ಶಿಕ್ಷಣ ತಂಡದ ಗುಲ್ನಾಜ್ ಮತ್ತು ಸಲ್ಮಾ.ತೀರ್ಪು ಗಾರರು ಸುವರ್ಣಾ ಹುಲ್ಸೂರ್ಕರ್ , ಸವಿತಾ ಪಾಟೀಲ್ , ಡಾ. ನೀಲಂ ಮಿಶ್ರಾ , ಡಾ. ಸ್ವಾತಿ ಜಂಗಮ್.ಮೆಹೆಂದಿ ಸ್ಪರ್ಧೆಯಲ್ಲಿ ತಮ್ಮ ಕಲಾತ್ಮಕ ವಿನ್ಯಾಸಗಳನ್ನು ಪ್ರದರ್ಶಿಸಿದರು.
ಸ್ಪರ್ಧೆಯ ವಿಜೇತರು ಫ್ಯಾಕಲ್ಟಿ ಆಫ್ ಸೈನ್ಸಸ್ (FOS) ತಂಡದ ಜೊಹ್ರಾ, ರನ್ನರ್ ಅಪ್ ಫ್ಯಾಕಲ್ಟಿ ಆಫ್ ಲ್ಯಾಂಗ್ವೇಜಸ್, ಆರ್ಟ್ಸ್ ಹ್ಯುಮಾನಿಟೀಸ್, ಸೈನ್ಸಸ್, ಸಮಾಜ ವಿಜ್ಞಾನ, ಕಾನೂನು, ವಾಣಿಜ್ಯ ಮತ್ತು ಶಿಕ್ಷಣ (FOLAHSSLCE) ತಂಡದ ಆರಿಫಾ ಸುಲ್ತಾನಾ.ಸ್ಪರ್ಧೆಯ ಡಾ ಮಂದಾಕಿನಿ ಬಿ ಟೆಂಗ್ಲಿ , ಫಿರೋಜಾ , ಡಾ. ಸನಾ ಇಜಾಜ್, ಡಾ ಆಫಷಾ ದೇಶಮುಖ್ ತೀರ್ಪುನಿಡಿದರು.