ಕಮಲ ಕಗ್ಗ ಕೃತಿ ಲೋಕಾರ್ಪಣೆ:ಸಂಗೀತ ಕಲಾವಿದರಿಗೆ ಸನ್ಮಾನ ಸಮಾರಂಭ

0
23

ಸುರಪುರ: ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಭಜನಾ ಮಂಡಳಿ ಸುರಪುರ ಹಾಗೂ ಚಂದಿರೇಶ ಪ್ರಕಾಶನ ಸುರಪುರ ಇವರ ಸಹಯೋಗದೊಂದಿಗೆ ಶ್ರೀ ಪರಾಂಕುಶ ಸ್ವಾಮಿಗಳ ಜಯಂತೋತ್ಸವದ ಪ್ರಯುಕ್ತ ಎ. ಕಮಲಾಕರ ಅವರ ಕಮಲ ಕಗ್ಗ ಕವನ ಸಂಕಲನವು ಲೋಕಾರ್ಪಣೆ ಡಹಾಗೂ ಸಂಗೀತ ಕಲಾವಿದರಿಗೆ ಸನ್ಮಾನ ಸಮಾರಂಭ ನಡೆಸಲಾಯಿತುಕಾರ್ಯಕ್ರಮವನ್ನು ಸುರಪುರ ಅರಸು ಮನೆತನದ ರಾಜಾ ಪಿಡ್ಡನಾಯಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಿ .ಸರೋಜಮ್ಮ ಪೆರುಮಾಳ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿಯ ಹೈಕೋರ್ಟ್ ವಕೀಲರಾದ .ಜೆ .ಅಗಸ್ಟಿನ್ ರವರು ಮಾತನಾಡುತ್ತ ಶ್ರೀ ಪರಾಂಕುಶ ಸ್ವಾಮಿಗಳ ಮಠದ ಪರಂಪರೆ ವಿವರಿಸುತ್ತ ಶ್ರೀಮಠವು ಸಂಸ್ಥಾನದ ಅರಸರಿಗೆ ಶಕ್ತಿ ಕೇಂದ್ರವಾಗಿತ್ತು ಸಾಹಿತ್ಯ ಸಂಗೀತ ಕೀರ್ತನೆ ಭಜನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕವಿ ಕಲಾವಿದರಿಗೆ ಆಶ್ರಯ ತಾಣವಾಗಿತ್ತು ಎಂದರು.

Contact Your\'s Advertisement; 9902492681

ಕಮಲಾಕರರವರ ಕಮಲಕಗ್ಗ ಕವನ ಸಂಕಲನವನ್ನು ಡಾ. ಅಂಬೇಡ್ಕರ್ ಕಾಲೇಜಿನ ಉಪನ್ಯಾಸಕರು. ಸಾಹಿತಿಗಳು ಆದ ಶರಣಗೌಡ ಪಾಟೀಲ ಜೈನಾಪುರವರು ಸಹೃದಯರಿಗೆ ಪರಿಚಯಿಸುತ್ತ. ಸುರಪುರದ ಕವಿರತ್ನ ಎ. ಕೃಷ್ಣರವರ ಸುಪುತ್ರರಾದ ಕಮಲಾಕರರವರ ಈ ಕೃತಿಯು ಅರಳುತ್ತಿರುವ ಮೊಗ್ಗು ಬೆಳಗುತ್ತಿರುವ ಚಂದಿರನ ಮುಖಪುಟದೊಂದಿಗೆ ಆಕರ್ಷಣೀಯವಾಗಿದೆ ತಂದೆಗೆ ತಕ್ಕ ಮಗನಾಗಿ ಅವರು ನಡೆದ ದಾರಿಯಲ್ಲಿಯೇ ಹೆಜ್ಜೆಗಳ ಇಡುತ್ತಾ ಮುಂದೆ ಸಾಗುತ್ತಿರುವುದು ಶ್ಲಾಘನೀಯವೆನಿಸುತ್ತದೆ ಬದುಕಿನ ವಿವಿಧ ಮಜಲುಗಳನ್ನು .ವಿಶಿಷ್ಟ ಆಯಾಮಗಳನ್ನು ರೀತಿ ನೀತಿಗಳನ್ನು ಸರಳವಾಗಿ ವಿವರಿಸುತ್ತ ಬದುಕುವ ದಾರಿಯನ್ನು ತೋರಿಸುವ ಶಕ್ತಿ ಕಾವ್ಯಕ್ಕೆ ಇದೆ ಎಂಬುದನ್ನು ಕೃತಿಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿದ್ದ ಪ್ರಕಾಶ ಅಂಗಡಿ ಕನ್ನೆಳ್ಳಿ,ಸೂಗುರೇಶ ವಾರದ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಡರಂಗಂಪೇಟೆ ಕನ್ನಡ ಸಾಹಿತ್ಯ ಸಂಘಕ್ಕೆ 2023ರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸೂಗುರೇಶ್ವರ ವಾರದ್ ಹಾಗೂ ಡಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಶರಣಯ್ಯಸ್ವಾಮಿ ಬಳ್ಳೂಂಡಗಿಮಠ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಕೃತಿಯ ಲೇಖಕರಿಗೆ 1994ರ ಗೆಳೆಯರ ಬಳಗದವರು ಸ್ನೇಹಿತರು ಕುಟುಂಬದವರು ಆತ್ಮೀಯರು ಸನ್ಮಾನಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸೌಭಾಗ್ಯ ವೇಣುಗೋಪಾಲ ಕುಮಾರಿ ತೇಜಸ್ವಿನಿ ಕುಮಾರಿ ಹರ್ಷಿಣಿ ತಂಡದವರಿಂದ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮ ಮತ್ತು ಸಿ ವೇಣುಗೋಪಾಲ ಅವರಿಂದ ಶಾಸ್ತ್ರೀಯ ಸಂಗೀತ ಗಜಲ್ ಗಾಯನವಾದರೆ ಹಿರಿಯ ಸಂಗೀತ ಕಲಾವಿದರಾದ ನಿರ್ಮಲಾ ರಾಜಗುರು ಹಾಗೂ ಗೀತಾ ಗಾಯತ್ರಿ ಚಕ್ರವರ್ತಿಯವರಿಂದ ಜುಗಲ್ ಬಂದಿ ಕಾರ್ಯಕ್ರಮಗಳು ನಡೆದವು ಶರಣಪ್ಪ ಕಮ್ಮಾರ , ನಬಿಲಾಲ್ ಮಕಾನದಾರ , ರಘುನಾಥ ಆಚಾರ್ಯ ರಾಜಗುರು ,ನಿಂಗಣ್ಣ ಚಿಂಚೋಡಿ ,ಯಲ್ಲಪ್ಪ ಹುಲಕಲ್ , ಶ್ರೀನಿವಾಸ ಜಾಲವಾದಿ, ಕುತುಬುದ್ದೀನ ಅಮ್ಮಾಪುರ, ಶ್ರೀಹರಿರಾವ ಕುಲಕರ್ಣಿ ಆದೋನಿ, ಶರಣುನಾಯಕ ಭೈರಿಮಡ್ಡಿ, ಮೃತ್ಯುಂಜಯ ಹೀರೆಮಠ, ಸೂಗುರೇಶ ಮಡ್ಡಿ , ಶಕುಂತಲಾ ಆಚಾರ್ಯ , ಸಾಹೇಬರೆಡ್ಡಿ ಇಟಗಿ , ಶಕುಂತಲಾ ಜಾಲವಾದಿ, ಪರಿಮಳಾ ಕುಲಕರ್ಣಿ, ಜಾನಪದ ಕಲಾವಿದ ಲಕ್ಮಣ ಗುತ್ತೇದಾರ, ಗಣೇಶ ಜಹಗೀರದಾರ , ಗಂಗಾಧರ ಜೋಷಿ ,ಪ್ರಕಾಶ ಬಣಗಾರ ಮುಂತಾದವರು ಉಪಸ್ಥಿತರಿದ್ದರು.

ಗಾಯಕ ಶ್ರೀಹರಿರಾವ ಕುಲಕರ್ಣಿ ಆದೋನಿಯವರು ಪ್ರಾರ್ಥನೆ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೊಡ್ಡ ಮಲ್ಲಿಕಾರ್ಜುನ ಉದ್ಧಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನ್ವರ ಜಮಾದಾರರವರು ಸ್ವಾಗತಿಸಿದರೆ ರಾಘವೇಂದ್ರ ಭಕ್ರಿಯವರು ವಂದನಾರ್ಪಣೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here