ಕಲಬುರಗಿ; ನಗರದ ಬಸವ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುನಿಸೆಫ್ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ನೇತೃತ್ವದಲ್ಲಿ ಇಂದು ರಕ್ತ ಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಅವರು ಉದ್ಘಾಟಿಸಿದರು.
ವೇದಿಕೆಯ ಮೇಲೆ ಪ್ರಾಂಶುಪಾಲರಾದ ರಾಜು ಗುತ್ತೆದ್ದಾರ,ಎನ್ಎಸ್ಎಸ್ ಅಧಿಕಾರಿಗಳಾದ ಡಾ.ಶ್ರೀಮಂತ ಹೋಳಕರ,ಡಾ.ನಾಗಪ್ಪ ಗೋಗಿ,ಡಾ.ರವಿ ಬೌದ್ದೆ ಹಾಗೂ ಪ್ರೊ.ಮೇರಿ ಮೇಥ್ಯೂಸ್ ಮತ್ತು ಉಪನ್ಯಾಸಕಿ ಶೈಲಜಾ ಅವರು ಉಪಸ್ಥಿತಿ ಇದ್ದರು.