ಶಹಾಪುರ: ಶಿವಶರಣೆ ಅಕ್ಕಮಹಾದೇವಿ ತಾಯಿಯವರ ಜೀವನದ ದೃಷ್ಟಿಕೋನ ಇಟ್ಟುಕೊಂಡು ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ನುಡಿದರು.
ಪಟ್ಟಣದ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಲಿಂ.ಸಿದ್ದಲಿಂಗಪ್ಪ ಸರಸ್ವತಿ ಕಾಕನಾಳೆ ಅವರ ಸ್ಮರಣಾರ್ಥ ಆಯೋಜಿಸಿದ್ದ ತಿಂಗಳ ಬಸವ ಬೆಳಕು -110 ಸಭೆಯಲ್ಲಿ ಬೆಟ್ಟದ ಮೇಲೊಂದು ಮನೆಯ ಮಾಡಿ ವಿಷಯ ಕುರಿತು ಅನುಭಾವ ನೀಡಿದ ಅವರು, ಅಕ್ಕ ಹೇಳುವಂತೆ ಸಮಾಧನ ಇಂದಿನ ಮೌಲ್ಯವಾಗಬೇಕು ಎಂದು ತಿಳಿಸಿದರು.
ಹನ್ನೆರಡನೆಯ ಶತಮಾನದಲ್ಲಿ ಅಕ್ಕಮಹಾದೇವಿ ತಾಯಿ ಪುರುಷತ್ವದ ಅಹಮಿಕೆಗೆ ಸವಾಲಾಗಿ ನಿಂತಳು. ಕಾಮಿಕ ಕಾಶಿಕ ಮಹಾರಾಜನ ಕಾಮದ ಮದವನ್ನು ಕಿತ್ತಿ ಬಿಸಾಡಿದಳು. ಅರಸನ ಮನೆಯಲ್ಲಿ ಅರಸಿಯಾಗುವುದಕ್ಕಿಂತ ಭಕ್ತರ ಮನೆಯ ತೊತ್ತಾಗಿಪ್ಪುದೆ ಕರಲೇಸು ಎಂಬ ಬಸವಣ್ಣನವರ ಆದರ್ಶವನ್ನು ಅಕ್ಕ ಬದುಕಿದಳು. ಅಮೇಧ್ಯದ ಮಡಕೆ, ಕಿವಿನ ಕುಡಿಕೆ ಎಂದು ದೇಹದ ಬಾಹ್ಯ ಸೌಂದರ್ಯ ಶಾಶ್ವತವಲ್ಲ ಎಂಬ ಸತ್ಯ ತಿಳಿಸಿದರು ಎಂದು ಮಾರ್ಮಿಕವಾಗಿ ನುಡಿದರು.
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನನ್ನು ಅರಸುತ್ತ ಹೊರಟ ಅಕ್ಕನಿಗೆ ಅಂದು ಸಮಾಜ ಅತ್ಯಂತ ತಿರಸ್ಕøತವಾಗಿ ಕಂಡಿತು. ಹದಿಹರೆಯದ ಚಲುವೆ ಆತ್ಮ ಸಂಗಾತಕೆ ನೀ ಎನಗುಂಟು ಎಂದು ಗಿರಿಗವ್ವರಗಳನ್ನು ಸುತ್ತಿನಡೆದಾಗ ಅಪನಿಂದೆ, ಟೀಕಿ- ಟಿಪ್ಪಣೆಗಳಿಗೆ ಈಡಾದಳು. ಆದರೆ ಆ ತಾಯಿ ಮಾತ್ರ ಸಂತೆಯ ಗದ್ದಲದ ಸದ್ದಿಗೆ ಹೆದರಿಲ್ಲ. ಬೆಟ್ಟದ ಮೇಲೆ ಮನೆ ಮಾಡಿದಾಗ ಸಹಜವಾಗಿ ಮೃಗ ಖಗಗಳು ಸಹಜ ಎಂದಳು. ಸಮುದ್ರದ ತಡಿಯಲ್ಲಿ ಮನೆ ಮಾಡಿದಾಗ ನೊರೆ ತೆರೆಗಳು ಸಹಜ ಎನ್ನುವ ಮೂಲಕ ಯಾವುದೆ ಪ್ರತಿಕ್ರಿಯೆಗೆ ಬೆದರದೆ ಬೆಚ್ಚದೆ ಸಮಾಧಾನ ಚಿತ್ತದಿಂದ ಬದುಕಿದಳು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಗುರುಬಸವಯ್ಯ ಗದ್ದುಗೆ ಮಾತನಾಡಿ, ಬಸವಮಾರ್ಗ ಪ್ರತಿಷ್ಠಾನ ಜನ ಮಾನಸದಲ್ಲಿ ಈಗಾಗಲೆ ಮೂಡಿರುವ ಮೌಢ್ಯ ಕಂದಾಚಾರಗಳನ್ನು ತೊಡೆದು ಹಾಕಿ ಸ್ವಸ್ಥ್ಯ ಸಮಾಜವನ್ನು ಕಟ್ಟಲು ಶ್ರಮಿಸುತ್ತಿದೆ. ಇದಕ್ಕೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಗುರುಮಠಕಲ್ ಸಿಪಿಐ ಸಂಜೀವಕುಮಾರ ಕುಂಬಾರಗೇರಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿದರು. ಶಾಂತಾ ಗಿರೀಶ್ ಭಂಡಾರಿ ವೇದಿಕೆಯಲ್ಲಿದ್ದರು.
ಇದೇವೇಳೆ ಕೆಪಿಎಸ್‍ಸಿ ಮಾಜಿ ಸದಸ್ಯ ಹಾಗೂ ಮಾಜಿ ಕುಲಪತಿ ಡಾ. ರಂಗರಾಜ ವನದುರ್ಗ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಶಿನ್ನೂರ ಸ್ವಾಗತಿಸಿದರು. ಫಜಲುದ್ದೀನಖಾಜಿ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು.
ಶಿವಲಿಂಗಪ್ಪ ಸಾಹು, ಬಸವರಾಜ ಧೂಳಾಗುಂಡಿ, ಮಲ್ಲಿಕಾರ್ಜುನ ಗುಡಿ ಹಳಿಸಗರ, ಶಿವಯೋಗಪ್ಪ ಹವಾಲ್ದಾರ, ಚಂದ್ರು ಮುಡಬೂಳ, ಪಂಚಾಕ್ಷರಿ ಹಿರೇಮಠ, ಶರಣು ಹುಣಸಗಿ, ಪಂಪಣ್ಣಗೌಡ ಮಳಗ, ಬಸವರಾಜ ಹೇರುಂಡಿ, ಸಿದ್ದರಾಮ ಹೊನ್ಕಲ್, ಹೊನ್ನಾರೆಡ್ಡಿ ವಕೀಲರು, ಅಡಿವೆಪ್ಪ ಜಾಕಾ, ಮರೆಪ್ಪ ಅಣಬಿ, ಕೃಷ್ಣಪ್ಪ ಹವಾಲ್ದಾರ, ಚೆನ್ನಪ್ಪ ಹರನೂರ, ರಕ್ಷಿತಾ ಮುಡಬೂಳ, ಶರಣಪ್ಪ ಹುಣಸಗಿ, ಭೀಮಣ್ಣ ಪಾಡಮುಖಿ, ಚಂದ್ರಶೇಖರ ಹೈಯಾಳಕರ್ ಮುಂತಾದವರು ಇದ್ದರು.
ಮೊಬೈಲ್ ಹಾಗೂ ಟಿ.ವಿ. ಧಾರವಾಹಿಗಳ ನಡುವೆ ಇಂದು ನಮ್ಮ ಅಮೂಲ್ಯ ಜೀವನ ಹಾಳುತ್ತಿದೆ. ನಿತ್ಯವೂ ಒಂದೊಂದು ವಚನಗಳನ್ನು ಕಂಠಪಾಠವನ್ನು ಮಾಡಬೇಕು. ವಚನಗಳು ಬದುಕಿನ ಬಹುದೊಡ್ಡ ಸಂಪತ್ತಾಗಿ ನಿಲ್ಲುತ್ತವೆ. ಭೌತಿಕ ಸಂಪತ್ತು ಬಳಸುತ್ತ ಕರಗುತ್ತದೆ. ಆದರೆ ಪುಸ್ತಕಗಳ ಓದಿನ ಮೂಲಕ ಪಡೆದ ಬೌದ್ಧಿಕ ಸಂಪತ್ತು ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ. – ಸಂಜೀವಕುಮಾರ ಕುಂಬಾರಗೇರಿ , ಸಿಪಿಐ, ಗುರುಮಠಕಲ್.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…