ಬಿಸಿ ಬಿಸಿ ಸುದ್ದಿ

ನಾರ್ಮಲ ಹೆರಿಗೆ ಆದ್ಯತೆಸಿಗಬೇಕು: ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ನಾರ್ಮಲ ಹೆರಿಗೆಗಳು ಕಡಿಮೆಯಾಗಿ ಸಿಸೆರಿಯನ ಹೆರಿಗೆಗಳು ನೋವು ರಹಿತ ಎಂಬ ನಂಬಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಮಹಿಳೆಯರು ನಾರ್ಮಲ್ ಹೆರಿಗೆ ಎಂದರೆ ಭಯ ಬೀಳುತ್ತಾರೆ. ಅಲ್ಲದೇ ಕೆಲವು ವೈದ್ಯರೇ ಸಿಸೆರಿಯನ ಬಗ್ಗೆ ಒತ್ತು ಕೊಡುತ್ತಾರೆ ಎಂದು ಖಾಜಾ ಬಂದನವಾಜ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ ನುಡಿದರು.

ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮತ್ತು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘವು ಶುಕ್ರವಾರ ಜಂಟಿಯಾಗಿ ಆಯೋಜಿಸಿದ ‘ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು’ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ರೋಗಿಗಳ ವಿಶ್ವಾಸಗೆಲ್ಲಬೇಕು. ಎಲ್ಲ ರೋಗಿಗಳ ಮನಸ್ಥಿತಿ ಒಂದೇ ರೀತಿ ಇರುವುದಿಲ್ಲ. ಅವರಿಗೆ ಸರಿಯಾದ ಸಮಾಲೋಚನೆ ಮಾಡಿದಲ್ಲಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಪ್ರಸೂತಿ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಗತಿ ಒಳ್ಳೆಯದು. ಜೊತೆಗೆ ನಾರ್ಮಲ್ ಹೆರಿಗೆ ಆದ್ಯತೆ ಆಗುವತ್ತ ವೈದ್ಯರ ಚಿತ್ತ ಇರಬೇಕು ಎಂದು ಹೇಳಿದರು. ಇಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಕ್ಕಾಗಿ ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಪಾಲದಿ ಮತ್ತು ತಂಡವನ್ನು ಅಭಿನಂದಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಆಶಾ, ಡಾ. ಹೇಮಾ ಮತ್ತು ಆಸ್ಟ್ರೇಲಿಯಾದ ಡಾ. ಸುನಂದಾ ರವರಿಗೆ ವಿವಿ ಪರವಾಗಿ ಧನ್ಯವಾದಗಳನ್ನು ಹೇಳಿದರು.

ವಿವಿಯ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಇವರು ವಿವಿ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಅಲ್ಲದೇ ಈ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಬಗ್ಗೆ ಹೇಳಿದರು. ಕೆಬಿಎನ್ ದಲ್ಲಿ ಸಂಶೋಧನೆಗೆ ಆದ್ಯತೆ ಇದ್ದು ಹೆಚ್ಚು ಸಂಶೋಧನೆಯಲ್ಲಿ ಪಾಲ್ಗೊಂಡು ಈ ವಿವಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕಾರ್ಯ ನಮ್ಮದಾಗಬೇಕು ಎಂದರು.

ಡಾ. ಆಶಾ ರಿಝಸಿಂಘಾನಿ ಪ್ಲೇಸ್ಮೆಂಟ ಅಕ್ರಿಟಾ ಸಿಂಡ್ರೋಮ ಮತ್ತು ನಿವರ ಟ್ರೆಂಡ್ ಇನ್ ಜನಟಿಕ್ ಸ್ಕ್ರೀನಿಂಗ್ ಫಾರ ಎ ಎನ್ ಸಿ ವಿಷಯದ ಬಗ್ಗೆ ಆನ್ಲೈನ್ ಮೂಲಕ ಮಾತನಾಡಿದರು.ಡಾ. ಸುನಂದ ಗರ್ಗೆಶ್ವರಿ ಇವರು” ಪ್ರಸೂತಿ ಮತ್ತು ಸ್ತ್ರೀರೋಗದ ಇತ್ತೀಚಿನ ಪ್ರವೃತ್ತಿಗಳು” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಡಾ ಜಯಪ್ರಕಾಶ ಪಾಟೀಲ ಮತ್ತು ರಾಜು ಗಿರಡ್ಡಿ ಮುಲೇರಿಯನ್ ಅನೋಮೂಲಿಸ: ಡಿಗ್ನೋಸಿಸ ಮತ್ತು ಮ್ಯಾನೇಜ್ಮೆಟ ವಿಷಯ ಬಗ್ಗೆ ಮಾತನಾಡುಡಿದರು. ಡಾ. ವಿದ್ಯಾ ಥೋಬ್ಬಿ ಗೌರವಾನ್ವಿತ ಮಾತೃತ್ವ ಆರೈಕೆ ಬಗ್ಗೆ ಉಪನ್ಯಾಸ ನೀಡಿದರೆ, ಡಾ ಹೇಮಾ ದಿವಾಕರ ಆನ್ಲೈನ್ ಮೂಲಕ ರಿಚಿಂಗ್ ದಿ ಅನರಿಚಡ ಟ್ರೂ ಟೆಕ್ನಾಲಜಿ, ಡಾ ರಾಜಶ್ರೀ ಪಾಲದಿ ಸೀಜರೆನ್ ಸ್ಕ್ಯಾರ ಡಿಫೆಕ್ಟ್ ಅಂಡ್ ಅಬ್ಬನಾರ್ಮಲ ಯುಟೇರೈನ್ ಬ್ಲೀಡಿಂಗ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದರು.

ನಂತರ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಡಾ. ಆಯಿಷಾ ಹುಮೆರಾ, ಡಾ. ಹರ್ಷ ರಾಮದುರ್ಗ, ಡಾ. ಸುಪ್ರಿಯಾ, ಡಾ. ಸ್ನೇಹಕೃಪಾ, ಡಾ. ಮೀತಾ, ಡಾ. ಫರ್ಹತ ಭಾಗವಹಿಸಿದರು.

ಅಲ್ಲದೇ ವೇದಿಕೆಯ ಮೇಲೆ ಹೆರಿಗೆಯ ಸಮಯದಲ್ಲಿ ಆಗುವ ರಕ್ತ ಸ್ರಾವದಿಂದ ಮತ್ತು ಬಿಪಿ ಹೆಚ್ಚಾಗಿ ರೋಗಿಗೆ ಸೆಳೆತ ಬಂದಾಗ ಹೇಗೆ ಪ್ರಾಣ ಕಾಪಾಡಬೇಕು ಎಂಬ ಪ್ರಕ್ರಿಯೆಯನ್ನು ಹಂತ ಹಂತವಾಗಿ ಅಣುಕು ಪ್ರದರ್ಶನ ನೀಡಿದರು. ಸುಮಾರು 280 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.

ಈ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪೇಂಟಿಂಗ್ ಮತ್ತು ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ಕೀರ್ತಿ ಮತ್ತು ನಬಿಲ ಪ್ರಾರ್ಥಿಸಿದರು.. ರಿಸರ್ಚ ಡೀನ ಡಾ. ರಾಜಶ್ರೀ ಪಾಲದಿ ಸ್ವಾಗತಿಸಿದರೆ, ಡಾ ಜೈನಬ ಘಝಲಾ ಮತ್ತು ಡಾ. ಸುಜಾತಾ ವಂದಿಸಿದರು. ಡಾ. ಇರಫಾನ ಅಲಿ ಮತ್ತು ಡಾ. ಶಿಲ್ಪಾ ನಿರೂಪಿಸಿದರು.

ಪ್ರಭಾರಿ ಕುಲಸಚಿವೆ ಡಾ. ರುಕ್ಸರ ಫಾತಿಮಾ, ಡಾ. ವಿದ್ಯಾ ಥೋಬ್ಬಿ, ಸಂಘಟನ ಅಧ್ಯಕ್ಷ ಡಾ. ರಾಜಶ್ರೀ ಪಾಲದಿ, ಡಾ. ಸಿದ್ದೇಶ್, ಡಾ ಗುರುಪ್ರಸಾದ, ಡಾ ಅಬ್ದುಲ್ ಬಸೀರ್,ಡಾ ಸಿದ್ಧಲಿಂಗ್ ಚೆಂಗ್ಟಿ, ಡಾ. ಜಮಾ ಮೂಸ್ವಿ, ಡಾ. ಸುಜಾತಾ, ಡಾ. ಚೇತನಾ ಮುಂತಾದವರು ಹಾಜರಿದ್ದರು.

emedialine

Recent Posts

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

5 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

6 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

6 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

17 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

17 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

17 hours ago