ವಾಡಿ; ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಅವರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದಲ್ಲಿನ ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಬಹುತೇಕ ಎಲ್ಲಾ ವಾರ್ಡಗಳಲ್ಲಿ ಇನ್ನು ಹೆಚ್ಚಿನ ಸ್ವಚ್ಚತಾ ಕಾರ್ಯ ಕೈಗೊಳ್ಳುಬೇಕು,ಎಲ್ಲಾ ವಾರ್ಡ್ ಗಳಲ್ಲಿ ಚರಂಡಿಗಳು ತುಂಬಿದ್ದ ಜನಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಕಾಣಬಹುದು.
ವಾರ್ಡ್ ನಂ 01,04 ,18,20,23 ರಲ್ಲಿ ಬೀದಿ ದೀಪಗಳಿಲ್ಲದೆ ಪಟ್ಟಣದ ಜನ ರಾತ್ರಿ ಕತ್ತಲಲ್ಲೇ ಸಂಚರಿಸುವಂತಾಗಿದೆ, ನೀರು ಸರಬರಾಜು ಪೈಪ್ ನಲ್ಲಿ ಪಾಚಿ ಬರುತ್ತಿದ್ದು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಿ ಅದರಂತೆ ನಾಯಿ ಹಂದಿಗಳ ಕಾಟದ ಬಗ್ಗೆ ತಮಗೆ ಈಗಾಗಲೇ ಎರಡು ಬಾರಿ ದಾಖಲೆ ಸಹಿತ ತಮ್ಮ ಗಮನಕ್ಕೆ ತಂದಿದ್ದೇವೆ.
ವಾರ್ಡ್ ನಂ 01 , 04,18,22,23 ಸೇರಿದಂತೆ ಬಹುತೇಕ ಎಲ್ಲ ವಾರ್ಡ್ ಗಳಲ್ಲಿನ ಮೂಲಭೂತ ಸಮಸ್ಯೆಗಳನ್ನು ತಮಗೆ ಈಗಾಗಲೇ ವಿವರಿಸಿದ್ದೇವೆ ಆದಷ್ಟೂ ಬೇಗ ಪರಿಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸಮುದಾಯ ಸಂಘಟಕ ಮುತ್ತಣ್ಣ ಭಂಡಾರಿ, ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಅಯ್ಯಣ್ಣ ದಂಡೋತಿ ಇದ್ದರು.