ಸುರಪುರ: ತಾಲೂಕಿನ ದೇವಪುರ ಗ್ರಾಮದ ಬಳಿ ಬೀದರ-ಬೆಂಗಳೂರು ರಾಜ್ಯ ಹೆದ್ದಾರಿ ಮೇಲೆ ಪೈಪ್ ತುಂಬಿದ ಲಾರಿ ಮತ್ತು ವಿ ಆರ್ ಎಲ್ ಸಂಸ್ಥೆಗೆ ಸೇರಿದ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಬೆಳಗಿನ ಜಾವ ನಡೆದಿದೆ.
ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುರಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳಕ್ಕೆ 112 ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ರಾಜ್ಯ ಹೆದ್ದಾರಿಯ ಮೇಲೆ ಅಪಘಾತ ನಡೆದು ರಸ್ತೆ ಸಂಚಾರ ಬಂದಾಗಿದ್ದು ನೂರಾರು ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿತ್ಯವು ಈ ರಸ್ತೆಯಲ್ಲಿ ಒಂದಿಲ್ಲ ಒಂದು ಅಪಘಾತ ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.
ರಸ್ತೆ ತುಂಬ ಕಿರಿದಾಗಿದ್ದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿದ್ದು, ಶನಿವಾರ ಬೆಳಗ್ಗೆ ಹಳ್ಳದ ಬಳಿಯಲ್ಲಿ ಖಾಸಗಿ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿ 25 ಜನ ಗಾಯಗೊಂಡ ಘಟನೆ ನಡೆದ ಮರು ದಿನವೆ ಈ ಅಪಘಾತ ಸಂಭವಿಸಿದೆ.
ಅಪಘಾತಗಳು ತಪ್ಪಬೇಕಾದರೆ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪರಿಸಿದರು. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಯುತ್ತಿರುವುದು ವರದಿಯಾಗುತ್ತಿವೆ.
ಪ್ರಜ್ವಲ್,ಧೀರಜ್ ಸೋಲಿಸಿ ಗೆದ್ದು ಬೀಗಿದ ಬೊಬ್ರೋಬ್ ಹಾಗೂ ಸುಲ್ತಾನೋವ್ ಕಲಬುರಗಿ, ನವೆಂಬರ್ ೨೧ : ಐಟಿಎಫ್ ಕಲಬುರಗಿ ಓಪನ್ ಟೆನಿಸ್…
ಕಲಬುರಗಿ: ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಆಳಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದ ಡಾ.ಬಿ.ಆರ್. ಅಂಬೇಡ್ಕರ್ ಫಂಕ್ಷನ್ ಹಾಲ್‍ನಲ್ಲಿ ಆಡಿಟ್ ದಿವಸ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ…
ಕಲಬುರಗಿ: ಭಕ್ತರ ಭಾಗ್ಯವನ್ನು ಬದಲಾಯಿಸುವ ಮಹಾ ಮಹಿಮರು ಶ್ರೀಶಿವಚಿದಂಬರ ಗುರುಗಳು, ಚಿದಂಬರರ ಅನೇಕ ಲೀಲೆಗಳಿಂದ ಭಕ್ತ ವೃಂದ ಉದ್ದಾರವಾಗಿದ್ದಾರೆ. ಶಿವ…
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಡಾ. ಸುರೇಶ್…
ಕಲಬುರಗಿ: ಸ್ಪಂದನ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಗರ ಸಂದೀಪನಿ ಶಾಲೆಯ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ವಿತರಿಸಲಾಯಿತು. ಸಂಘದ…