ಮಾಜಿ ವಿದ್ಯಾರ್ಥಿಗಳಿಂದ ಗುರುವಂದನೆ

0
39

ಕಲಬುರಗಿ; ಸೇವಾ ನಿವೃತ್ತಿಯಾದ ವ್ಯಕ್ತಿ ರಾಷ್ಟ್ರದ ಸಂಪನ್ಮೂಲ ಉತ್ಪತ್ತಿಸುವ ಶಕ್ತಿಯಾಗಿರುತ್ತಾರೆ ಎಂದು ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಡಾ. ಸುರೇಶ ಸಜ್ಜನ ಹೇಳಿದರು.

ನಗರದ ಗಂಜ ಪ್ರದೇಶದಲ್ಲಿರುವ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯ ಅನುದಾನಿತ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಗಳಿಂದ ಸೇವಾ ನಿವೃತ್ತಿ ಪ್ರಯುಕ್ತ ಶ್ರೀ ಸಿದ್ದಣ್ಣ ಚಂದ್ರಶೇಖರ ಸಜ್ಜನ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸರಕಾರಿ ಸೇವೆಯಿಂದ ನಿವೃತ್ತಿಯಾದರು, ಸಾಮಾಜಿಕ ಸೇವೆಗೆ ನಿವೃತ್ತಿ ಇಲ್ಲ. ಅಪಾರ ಜ್ಞಾನ ಹೊಂದಿದ ನಿವೃತ್ತ ಶಿಕ್ಷಕರು ಸಮಾಜದ ಆಸ್ತಿ. ಅಂಥವರ ಮಾರ್ಗದರ್ಶನ  ಯುವಕರಿಗೆ ಅವಶ್ಯಕತೆ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಶಿಕ್ಷಣ ಪ್ರೇಮಿ ರಾಮಚಂದ್ರ ಡಿ.ರಘೋಜಿ ಮಾತನಾಡುತ್ತಾ ಸಾಧನೆಗೆ ಶಿಸ್ತು ಅಗತ್ಯ, ಬದುಕಿಗೆ ನೆಮ್ಮದಿ ಅತ್ಯಗತ್ಯ, ಸಾಧನೆಗೆ ಮುಖ್ಯವಾಗಿ ಬೇಕಾಗಿರುವದು ಗುರಿ ಎನ್ನುವುದೇ ಕಟು ಸತ್ಯ. ಯುವಕರು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದರೆ ಸಾಧನೆಯ ಶಿಖರವೇರಬಹುದು ಎಂದು ಮಾರ್ಮಿಕವಾಗಿ ನುಡಿದರು.

ನಿವೃತ್ತ ಶಿಕ್ಷಕರಾದ ಸಿದ್ದಣ್ಣ ಸಜ್ಜನ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳು ಇಂದಿನ ಸಂದರ್ಭದಲ್ಲಿ ಬಹಳ ಅವಶ್ಯಕತೆ ಇದೆ, ಏಕೆಂದರೆ ಗುರು ಶಿಷ್ಯರ ಸಂಬಂಧಗಳು ಗಟ್ಟಿಯಾಗಬೇಕಾದರೆ ಗುರುಗಳಿಗೆ  ಗೌರವಿಸಬೇಕು. ಶಿಕ್ಷಕರ ವೃತ್ತಿ ನೌಕರಿ ಅಲ್ಲ ಅದು ಕಾಯಕ ಎಂದು ತಿಳಿದು ನಡೆದರೆ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಹೇಳಿದರು.

ಹೊನ್ನ  ಕಿರಣಗಿಯ ಪೂಜ್ಯರಾದ ಚಂದ್ರಗುಂಡ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಮುಖ್ಯ ಅತಿಥಿಗಳಾಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಸೋಮಶೇಖರ ಹಂಚನಾಳ, ಕಲಬುರಗಿ ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷರಾದ ಶರಣಕುಮಾರ ಬಿಲ್ಲಾಡ, ಖ್ಯಾತ ಉದ್ದಿಮೆದಾರರಾದ ಸುಶೀಲಕುಮಾರ ಮಾಮಡಿ, ಗುಲಬರ್ಗಾ ದಾಲ ಮಿಲ್ಲರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ವಿಷ್ಣುದಾಸ ತಪಾಡಿಯ, ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿಗಳಾದ ಓಂಕಾರೇಶ್ವರ ಗೋಸಿ ಮಠ ಆಗಮಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ವಹಿಸಿದರು. ಇದೇ ಸಂದರ್ಭದಲ್ಲಿ  ಶ್ರೀಮತಿ ಕಲ್ಯಾಣಮ್ಮ ಹಾಗೂ ಸಿದ್ದಣ್ಣ ಸಜ್ಜನ ಮತ್ತು ನಿವೃತ್ತ ಶಿಕ್ಷಕರಾದ ಶರಣಗೌಡ ಕಿರಣಗಿ, ಶಿವಾನಂದ ಬಿರಾದಾರ, ದಿನಕರ ಮುಲಗೆ, ಚನ್ನಮಲ್ಲಯ್ಯ ಹಿರೇಮಠ ಅವರಿಗೆ ಗೌರವಿಸಿ ಸನ್ಮಾನ ಪತ್ರ ನೀಡಲಾಯಿತು.

ವೀರೇಶ ಹೂಗಾರ, ಶ್ರವಣಕುಮಾರ ಮಠ ಪ್ರಾರ್ಥಿಸಿದರು. ವೀರೇಶ ಬೋಳಶೆಟ್ಟಿ ನಿರೂಪಿಸಿದರು. ಗಣಪತರಾವ ಅಂಕಲಗಿ ಸ್ವಾಗತಿಸಿದರು. ಶಿವಶಂಕರ ಕೊಂಬಾಡೆ ವಂದಿಸಿದರು.

ಮಾಜಿ ವಿದ್ಯಾರ್ಥಿಗಳಾದ ನಾಗಣ್ಣ ಶಹಾಬಾದ, ಶಿವಕುಮಾರ ಜಾಬಶೆಟ್ಟಿ, ಸಂಗಮೇಶ ನಾಗೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಚಂದ್ರಕಲಾ ಉಕಲಿ, ಚಂದ್ರಶೇಖರ ಚಂಡ್ರಕಿಮಠ, ಶಿಕ್ಷಕರು, ಮಾಜಿ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here