ಬಿಸಿ ಬಿಸಿ ಸುದ್ದಿ

ಅಂಚೆ ಇಲಾಖೆ ಎಡವಟ್ಟು ವಿದ್ಯಾರ್ಥಿನಿ ಪೇಚಿಗೆ; ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ನಿರ್ಧಾರ

ಆಳಂದ; ಅಂಚೆ ಇಲಾಖೆ ಸಿಬ್ಬಂದಿ ಮಾಡಿರುವ ಎಡವಟ್ಟಿಗೆ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಿಂದ (ಕೆಸೆಟ್) ವಿದ್ಯಾರ್ಥಿನಿಯೊರ್ವಳು ವಂಚಿತಳಾಗುವ ಪರಿಸ್ಥಿತಿ ಬಂದೊದಗಿದೆ.

ಸೆಪ್ಟೆಂಬರ್ 2023ರಲ್ಲಿ ಕರೆದ ಅರ್ಜಿಯಲ್ಲಿ ಆಳಂದ ತಾಲೂಕಿನ ವಿದ್ಯಾರ್ಥಿನಿಯೊರ್ವಳು ಆಂಗ್ಲ್ ಭಾಷಾ ವಿಷಯದಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ ಅದರ ಪರೀಕ್ಷಾ ಶುಲ್ಕ ತುಂಬಲು ಆಳಂದ ಶಾಖೆಯ ಪೋಸ್ಟ್ ಆಫೀಸ್‍ಗೆ ಹೋಗಿದ್ದಾಳೆ ಅಲ್ಲಿಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ವಿದ್ಯಾರ್ಥಿನಿಯ ಪರೀಕ್ಷಾ ಶುಲ್ಕ ಬೇರೊಬ್ಬ ವಿದ್ಯಾರ್ಥಿನಿಯ ಅರ್ಜಿ ಸಂಖ್ಯೆಗೆ ಹೊಂದಿಕೆಯಾಗಿದೆ. ಆದರೆ ಈಗ ಪರೀಕ್ಷಾ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಹೋದರೆ ಅಂಚೆ ಇಲಾಖೆ ನೀಡಿರುವ ರಸೀದಿಗೂ, ವಿದ್ಯಾರ್ಥಿಯ ಹತ್ತಿರ ಅರ್ಜಿ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಇದನ್ನು ಗಮನಿಸಿದ ವಿದ್ಯಾರ್ಥಿನಿಯ ಪೋಷಕರು ಸ್ಥಳೀಯ ಅಂಚೆ ಇಲಾಖೆಯ ಮುಖ್ಯಸ್ಥರನ್ನು ಭೇಟಿಯಾಗಿ ಅಂಚೆ ಇಲಾಖೆ ಸಿಬ್ಬಂದಿ ನೀಡಿರುವ ರಸೀದಿ, ಅರ್ಜಿಯನ್ನು ತೋರಿಸಿ ಲಿಖಿತ ದೂರು ಸಲ್ಲಿಸಿ ಬಂದಿದ್ದಾರೆ.

ವಿದ್ಯಾರ್ಥಿನಿ ಸಲ್ಲಿಸಿದ ಅರ್ಜಿ ಸಂಖ್ಯೆ ಕೆಎಸ್ 1137261 ಇದ್ದು ಆದರೆ ಅಂಚೆ ಇಲಾಖೆ ಸಿಬ್ಬಂದಿ ಕೆಎಸ್ 1137231 ಅರ್ಜಿ ಸಂಖ್ಯೆಯವರ ಹಣವನ್ನು ಶುಲ್ಕವನ್ನಾಗಿ ಪರಿಗಣಿಸಿದ್ದಾರೆ ಆದ್ದರಿಂದ ಈಗ ಪ್ರವೇಶ ಪತ್ರ ಡೌನ್‍ಲೋಡ್ ಆಗುತ್ತಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಅಂಚೆ ಇಲಾಖೆಯವರು ಮಾಡಿಕೊಂಡಿರುವ ಒಪ್ಪಂದದಂತೆ ಈಗ ಉದ್ಭವವಾಗಿರುವ ಸಮಸ್ಯೆಯನ್ನು ಬಗೆಹರಿಸಲು ಎರಡು ಇಲಾಖೆಗಳು ಗಮನಹರಿಸಿ ತಾಂತ್ರಿಕವಾಗಿ ಆಗಿರುವ ಅಡಚಣೆಯಿಂದ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸಬೇಕಾಗಿದೆ. ಕಲಬುರಗಿ ವಿಭಾಗದ ಅಂಚೆ ಇಲಾಖೆಯವರು ಕೆಇಎ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಇದಕ್ಕೊಂದು ಪರಿಹಾರ ಕಂಡು ಹಿಡಿದು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ವಿದ್ಯಾರ್ಥಿನಿಯ ಪೋಷಕರು.

ಈಗಾಗಲೇ ಪರೀಕ್ಷಾ ಅಕ್ರಮದಿಂದ ಕಲಬುರಗಿಯಲ್ಲಿದ್ದ ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. 13ನೇ ಜನೇವರಿ 2024 ರಂದು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದೆ.

ಅಂಚೆ ಇಲಾಖೆಯವರ ತಾಂತ್ರಿಕ ಸಮಸ್ಯೆಯಿಂದ ಈ ಸಮಸ್ಯೆ ಉಂಟಾಗಿದೆ. ಹಣ ಪಾವತಿ ವಿಧಾನ ಬಾರ್‍ಕೋಡ್ ವ್ಯವಸ್ಥೆಯ ಮೂಲಕ ಇದ್ದರೂ ಈ ಸಮಸ್ಯೆಯಾಗಿದೆ. ಇದು ಸ್ಪಷ್ಟವಾಗಿ ಅಂಚೆ ಇಲಾಖೆಯವರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇದರ ಕುರಿತು ಈಗಾಗಲೇ ಸ್ಥಳೀಯ ಅಂಚೆ ಇಲಾಖೆಯ ಮುಖ್ಯಸ್ಥರನ್ನು ಭೇಟಿಯಾಗಿ ಸಂಬಂಧಪಟ್ಟ ದಾಖಲೆ ಮತ್ತು ದೂರನ್ನು ನೀಡಲಾಗಿದೆ ದಿ. 11ನೇ ಜನೇವರಿ ಒಳಗಾಗಿ ಪರೀಕ್ಷಾ ಪತ್ರ ದೊರೆಯದಿದ್ದರೆ ಸೂಕ್ತ ವಕೀಲರ ಮೂಲಕ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರಕ್ಕಾಗಿ ಹೋರಾಟ ನಡೆಸಲಾಗುವುದು. – ಹಣಮಂತ ಶೇರಿ, ಖಜೂರಿ, ಕಸಾಪ ಅಧ್ಯಕ್ಷ ಆಳಂದ.

ನಾನು ಕೆಸೆಟ್ ಪರೀಕ್ಷೆಗಾಗಿ ಬಹಳ ತಯಾರಿ ಮಾಡಿಕೊಂಡಿದ್ದೆ ಆದರೆ ಅಂಚೆ ಇಲಾಖೆಯವರ ಎಡವಟ್ಟಿನಿಂದ ನನಗೆ ಈಗ ಪರೀಕ್ಷೆ ಬರೆಯಲಾಗುತ್ತಿಲ್ಲ. ಬಹಳ ನೋವಾಗುತ್ತಿದೆ ಇಷ್ಟು ದಿವಸ ಮಾಡಿದ ತಯಾರಿಯೆಲ್ಲ ವ್ಯರ್ಥವಾಯಿತಲ್ಲ ಎನಿಸುತ್ತಿದೆ. ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನನಗೆ ನ್ಯಾಯ ಒದಗಿಸಿ ಕೊಡುವ ಮೂಲಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ನಿಲ್ಲುವ ಕೆಲಸ ಮಾಡಬೇಕು. – ಶಶಿಕಲಾ, ನೊಂದ ವಿದ್ಯಾರ್ಥಿನಿ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago