ಶಹಾಬಾದ:ಹನ್ನೇರಡನೇ ಶತಮಾನದ ಶರಣರಲ್ಲಿ ಚಾಟಿ ಏಟಿನ ಶರಣನೆಂದೆ ಖ್ಯಾತಿ ಪಡೆದ ಶರಣನೆಂದರೆ ಅಂಬಿಗರ ಚೌಡಯ್ಯನವರು ಎಂದು ಬಿಜೆಪಿ ಮುಖಂಡ ಸಾಯಬಣ್ಣ ಬೆಳಗುಂಪಿ ಹೇಳಿದರು.
ಅವರು ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದ್ದದನ್ನು ಇದ್ದ ಹಾಗೇ ಹೇಳುವ ಎದೆಗಾರಿಕೆ ಅವರಲ್ಲಿತ್ತು. ಮೂಢನಂಬಿಕೆ ,ಕಂದಾಚಾರದ ವಿರುದ್ಧ ತಮ್ಮ ವಚನದಲ್ಲಿ ಕಟುವಾಗಿ ಖಂಡಿಸಿದ ಶರಣರು.ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹಾಗೂ ಕನಕಪ್ಪ ದಂಡಗುಲಕರ್ ಮಾತನಾಡಿ,ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಅಂಬಿಗೆ ಚೌಡಯ್ಯನವರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.
ಮುಖಂಡರಾದ ಮಹಾದೇವ ಗೊಬ್ಬೂರಕರ, ಶ್ರೀಧರ ಜೋಶಿ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಚಂದ್ರಕಾಂತ ಗೊಬ್ಬೂರಕರ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ನಿಂಗಣ್ಣ ಹುಳಗೊಳಕರ, ಕಾಶಣ್ಣ ಚನ್ನೂರ, ಯಲ್ಲಪ್ಪ ದಂಡಗುಲಕರ, ಶರಣು ವಸ್ರ್ತದ, ರಾಜು ಕುಂಬಾರ, ಅಮರ ಕೋರೆ, ದತ್ತಾತ್ರೇಯ ಗಂಟಿ, ಶ್ರೀನೀವಾಸ ದೇವಕರ, ಮೊಹನ ಹಳ್ಳಿ, ನಿಂಗಾರೆಡ್ಡಿ ಗೊಳಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…