ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ‘ಸಿ ಮತ್ತು ಡಿ’ ಗ್ರೂಪ್ ನೌಕರರ ಸಂಘದಿಂದ ವಿಭಾಗೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ ಸಿ.ಎಸ್ ನಾರಾಯಣ, ಎನ್. ರವಿ, ಕಾಶಿನಾಥ, ಸಾವಿತ್ರಿ, ಅಶೋಕ ಶಾಹಾಬಾದಿ, ಉಮಾದೇವಿ, ರವೀಂದ್ರ ರಾಠೋಡ, ಪೂರ್ಣಚಂದ, ರಾಮಲಿಂಗ, ರಾಜಶೇಖರ ಮಾನೆ ಸೇರಿದಂತೆ ನೌಕರರು ಉಪಸ್ಥಿತರಿದ್ದರು.