ಶಹಾಪುರ: ಇದೆ ತಿಂಗಳು ೧೫ ರಂದು ಸ್ಥಳೀಯ ಲಿಂ.ಸಿದ್ದಪ್ಪ ಆರಬೋಳ್ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಜಗದ್ಗುರು ಸಹಕಾರಿ ಸಂಘದ ವಾರ್ಷಿಕ ಸಭೆಯ ನಿಮಿತ್ಯ ಜರುಗಲಿರುವ ಬೇಡ ಜಂಗಮದ ಸಮಾವೇಶ ಹಾಗೂ ಸನ್ಮಾನ ಸಭೆಯ ಆಮಂತ್ರಣ ನಗರದಲ್ಲಿ ಬಹು ಚರ್ಚೆಯ ವಿಷಯವಾಗಿದೆ.
ಲಿಂಗಾಯತ ಸಮಾಜದ ಮುಖಂಡರು ಹಾಗೂ ಯುವ ಜನತೆ ಜಂಗಮ ಸಮಾಜ ಬೇಡ ಜಂಗಮ ಸಮುದಾಯಕ್ಕೆ ಸೇರ್ಪಡೆಗೊಳ್ಳಲು ತುದಿಗಾಲ ಮೇಲೆ ನಿಂತಿರುವುದನ್ನು ಕಳವಳದಿಂದ ಇದಿರು ನೋಡುತ್ತಿದೆ. ಕಾಲಾನು ಕಾಲದಿಂದ ಜಂಗಮ ಸಮಾಜದವರನ್ನು ಗುರುವಿನ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಭಕ್ತವರ್ಗ ಒಳಗೊಳಗೆ ತಲ್ಲಣಗೊಂಡಿದೆ.
ನಗರದ ಯುವಕರ ಗುಂಪೊಂದು ಮಠ ಮಠಗಳಿಗೂ ಭೇಟಿ ನೀಡಿ, ಅಲ್ಲಿನ ಮಠಾಧಿಪತಿಗಳೊಂದಿಗೆ ಚರ್ಚಿಸಿ, ಜಂಗಮರ ನಡೆಯನ್ನು ವಿರೋಧಿಸಿದ್ದಾಗಿ ತಿಳಿದು ಬಂದಿದೆ. ಲಿಂಗಾಯತ ಸಮುದಾಯದ ಮುಖಂಡರಾದ ಮಡ್ಡಿ ಮಲ್ಲಣ್ಣ, ಬಸವರಾಜೇಂದ್ರ ದೇಶಮುಖ ,ಸಿದ್ದಲಿಂಗಪ್ಪ ಆನೇಗುಂದಿ ಜಂಗಮರ ಈ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ಕಡಾಮುಡಿ ಮಾತಿಗೆ ಹೆಸರಾದ ಮಡ್ಡಿ ಮಲ್ಲಣ್ಣನವರಂತೂ ಯಾವ ಮುಲಾಜಿಗೂ ಬೀಳದೆ ಜಂಗಮ ಸಮುದಾಯದ ಮುಖಂಡರನ್ನು ತರಾಟೆಗೆ ತೆಗೆದುಕೊಂಡುದ್ದಾಗಿ ವಿಶ್ವಾಸನೀಯ ಮೂಲಕಗಳು ಮಾಹಿತಿ ಒದಗಿಸಿವೆ. ಪಂಚಾಚಾರ್ಯರನ್ನು ಒಪ್ಪಿ ನೀವೂ ವೀರಶೈವರೂ ಆಗಲಿಲ್ಲ. ಬಸವಣ್ಣನವರನ್ನು ಒಪ್ಪಿಕೊಂಡು ಲಿಂಗಾಯತರೂ ಆಗಲಿಲ್ಲ. ಈಗ ಏಕಾಏಕಿ ಬೇಡ ಜಂಗಮರೆಂದು ನೀವು ಹೊರಟರೆ ಭಕ್ತರು ಏನು ಮಾಡಬೇಕು ? ನಿಮ್ಮ ಗುರಿ ಬೇಡ ಜಂಗಮರೇ ಆಗಬೇಕೆಂದಿದ್ದರೆ ನಮ್ಮ ಲಿಂಗಾಯತ ಸಮಾಜದ ತೀವ್ರ ವಿರೋಧವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದು ತಿಳಿದು ಬಂದಿದೆ.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…
View Comments
R
ಜಂಗಮರು ಎಲ್ಲಾ ಸಮಾಜದ ನಡುವೆ ಸೇತುವಾಗಿ ಸಮಾಜ ಸೇವೆ ಮಾಡುವ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅಲ್ಲದೇ, ಜಂಗಮರು ಭಿಕ್ಷೆ ಬೇಡುವ ಪರಂಪರೆ ಸಂಪ್ರದಾಯದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಸೂರ್ಯನಾಥ ಕಾಮತ್ ವರದಿ ಪ್ರಕಾರ ಸಾಮಾನ್ಯ ಜಂಗಮರ ಪಂಚಪೀಠದ ಸಮುದಾಯಕ್ಕೆ ಸೇರಿದ ಎಲ್ಲಾ ಜಂಗಮರಿಗೆ ಬೇಡಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶವಾಗಿ ಎಷ್ಟೋ ದಶಕಗಳು ಉರುಳಿ ಹೋಗಿವೆ. ಸದರಿ ಜಾತಿ ಪ್ರಮಾಣ ಪತ್ರ ಪಡೆಯುವುದು ಜಂಗಮ ಸಮುದಾಯದ ಸಂವಿಧಾನಿಕ ಹಕ್ಕು. ಎಲ್ಲಾ ಇತರೆ ಸಮುದಾಯಕ್ಕೆ ಧೀಕ್ಷೆ ನೀಡುವ ಮತ್ತು ಅಂತಿಮವಾಗಿ ಮೋಕ್ಷ ನೀಡುವ ಸಂಪ್ರದಾಯದ ಅಧಿಕಾರ ಹೊಂದಿರುವುದು ಇದೇ ಜಂಗಮರು. ಈ ಸಮುದಾಯದ ಜಂಗಮರು ಅನುಸರಿಸುವುದು ಲಿಂಗಾಯತ ಮತ ಪಂಥದ ಸಂಪ್ರದಾಯ. ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆಯಲು ಜಂಗಮರಿಗೆ ಅವಕಾಶ ಇದೆ. ಕೆಲವರು ವಿರೋಧಿಸುತ್ತಿರುವುದು ಮತ್ತು ತಡೆ ಒಡ್ಡುವುದಕ್ಕೆ ಸಂಚು ಮಾಡುತ್ತಲೇ ಇರುವುದು ಅಕ್ಷಮ್ಯ. ಜಂಗಮರಿಗೆ ಅವರ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರದ ಆದೇಶಗಳಿವೆ.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಲಯಗಳ ಪೂರಕ ತೀರ್ಪುಗಳು ಇವೆ. ನಲವತ್ತು ವರ್ಷಗಳ ಹಿಂದೆ ಇದ್ದ ಸಂಪ್ರದಾಯದ ಆಚರಣೆಗಳ ಪ್ರಕಾರ ಈ ಸಮುದಾಯಕ್ಕೆ ಸಮಾಜ ನೀಡುತ್ತಿದ್ದ ರೈತನ ಬೆಳೆಯಲ್ಲಿನ ಜಂಗಮರ ಪಾಲು ಈಗ ಕೊಡಲಾಗುತ್ತಿದೆಯೇ..? ಇಲ್ಲ ಅಲ್ಲವೇ. ರೈತರು ಖಣದಲ್ಲಿ ಇಂದು ಬೆಳೆದ ಬೆಳೆಗಳ ಪೂಜೆ ಮಾಡುವ ಸಂಪ್ರದಾಯ ಪಾಲನೆ ಮಾಡುತ್ತಿದ್ದಾರೆಯೇ..? ಇಲ್ಲ ಅಲ್ಲವೇ..? ಲಿಂಗಾಯತ ಅಥವಾ ವೀರಶೈವ ಎನ್ನುವುದು ಮತ/ ಪಂಥ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದು ಗೊತ್ತಿಲ್ಲದ ಮೂರ್ಖರು ಜಂಗಮರ ಹಕ್ಕು ತಡೆದು ವಂಚನೆ ಮಾಡುತ್ತಿರುವುದನ್ನು ಖಂಡಿಸಲೇ ಬೇಕು. ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ. ಲಿಂಗಾಯತ ಅಥವಾ ವೀರಶೈವ ಮತ/ಪಂಥದಲ್ಲಿ ಹಿಂದೂ ಸಾದರು, ಪಂಚಮಸಾಲಿ ಸೇರಿದಂತೆ ನೂರಾರು ಉಪಜಾತಿಗಳಿವೆ.
ಲಿಂಗಾಯತ ಮತ/ಪಂಥದ ಬಹುತೇಕ ಜಾತಿಗಳು ರಾಜ್ಯ ಸರ್ಕಾರದ ಹಿಂ. ವರ್ಗದ ಪಟ್ಟಿಯಲ್ಲಿ ಮತ್ತು ಕೇಂದ್ರ OBC ಪಟ್ಟಿಯಲ್ಲಿ ಮೀಸಲಾತಿ ಪಡೆಯುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೆ..!? ಜಂಗಮ ಜಾತಿಯನ್ನು ಆ ಪಟ್ಟಿಯಲ್ಲಿ ಏಕೆ ಸೇರಿಸಿಲ್ಲವೆಂಬ ಕನಿಷ್ಟ ಜ್ಞಾನವಿಲ್ಲದೆ, ಜಂಗಮರ ಸಂವಿಧಾನ ಬದ್ಧ ಹಕ್ಕನ್ನು ಪ್ರಶ್ನಿಸುತ್ತಿರುವುದು ಶುದ್ಧ ಅವಿವೇಕ. ಈ ಕುರಿತು ಸಮರ್ಪಕ ಮಾಹಿತಿ ಪಡೆದು, ಪ್ರತಿಕ್ರಿಯಿಸುವುದು ವಿವೇಕದ ಲಕ್ಷಣ..
ಜಂಗಮರು ಕಾಲಾನುಕಾಲದಿಂದಲು ತಮ್ಮ ಕಾಯಕವನ್ನು ಬಿಟ್ಟಿಲ್ಲ, ಬಿಕ್ಷೆ ಬೇಡುವುದನ್ನು ಹೊರೆತು ಪಡಿಸಿ. ಈರೀತಿಯಾದ ವಿಚಾರದಿಂದಲೇ ಹಿಂದಿನ 80 ವರ್ಷಗಳಿಂದ ಸಂವಿಧಾನದ ಸವಲತ್ತುಗಳಿಂದ ವಂಚಿತನಾಗಿ, ಸಮಾಜದಿಂದಲು ಏನು ಸಿಗದೆ ವಿಲವಿಲ ಒದ್ದಾಡುತ್ತಿದ್ದಾನೆ. ದೇವರ ಜಗಲಿಯ ಮೇಲೆ ಕೂರಿಸಿಕೊಂಡು, ಪರಿವಾರಕ್ಕೆ ಹೊಟ್ಟೆಗೆ ಹಿಟ್ಟಿಲ್ಲದೆ ಬಳಲುತ್ತಿದ್ದಾನೆ. ಭಕ್ತರ ಭಕ್ತಿಯಿಂದ ಮೂಲ ಸೌಕರ್ಯ (ಅನ್ನ, ವಸತಿ, ಬಟ್ಟೆ) ಸಿಕ್ಕಿದ್ದರೆ ಈ ರೀತಿ ಮುಂದುವರೆಯುತ್ತಿರಲಿಲ್ಲ, *ಜಂಗಮ ಯಾವತ್ತಿಗೂ ಜಂಗಮನೇ* ಇಲ್ಲಿ ಯವರೆಗೂ ನಿಮ್ಮಿಂದಲಾದರೂ ನಾವು ಉದ್ಧಾರ ಆಗಿಲ್ಲ. ಈಗಲಾದರು ನಮ್ಮನ್ನು ಸ್ವತಂತ್ರವಾಗಿ ಬಿಡಿ, ಯಾವಗಲೂ ಸತ್ಯಕ್ಕೆ ಸಹಕರಿಸಿ ಜಂಗಮನಿಗೆ ಬೆಂಬಲ ನೀಡಿ. 🙏🙏🙏🙏
ದಯವಿಟ್ಟು ತಾವು ಸ್ವತಂತ್ರವಾಗಿ ಹೋಗಿ. ಆದರೆ ನೀವು ಬೇಡುವ ಜಂಗಮರಾಗಿ ನಮ್ಮ ತಕರಾರು ಇಲ್ಲ. ನೀವು ಲಿಂಗಾಯತ ಜಂಗಮರಂತೂ ಅಲ್ಲ.
ಕಡಾಮುಡಿ ಮಡ್ಡಿ ಮಲ್ಲಣ್ಣ ನವರಿಗೆ,
ತಾವು ಲಿಂಗಾಯತ ಮತದವರಾಗಿದ್ದರೆ ತಮ್ಮ ಜಾತಿ ಯಾವುದು? ಲಿಂಗಾಯತ ನಾ? ಹಾಗಾದರೆ ಲಿಂಗಾಯತ ಧರ್ಮದಲ್ಲಿಯ ೪೩ ಕ್ಕೂ ಅಧಿಕ ಜಾತಿಗಳಿವೆಯಲ್ಲವೇ ಅವುಗಳು ಯಾವ ಯಾವ ಯಾವ ಕೆಟಗರಿಯಲ್ಲಿ ಬರುತ್ತವೆ ತಾವು ಬಲ್ಲಿರಾ?ಬಣಜಿಗ, ಪಂಚಮಸಾಲಿ, ಗಾಣಿಗ, ಕೂಡು ಒಕ್ಕಲಿಗ, ನೊಣಬ, ಸಾದರು, ನೇಕಾರ, ಕುರುವಿನಶೆಟ್ಟಿ, ಕುಂಬಾರ, ......ಈ ಎಲ್ಲರೂ ಲಿಂಗಾಯತರಲ್ಲವೇ ಅವರು ಯಾಕೆ "ವೀರಶೈವ ಲಿಂಗಾಯತ" ಜಾತಿ ಪಡೆಯುವುದಿಲ್ಲ, ಯಾಕೆ ಅವರು ಲಿಂಗಾಯತರಲ್ಲವೇ? ಹೇಳಿ ಸ್ವಾಮಿ. ಇವರಿಗಿಲ್ಲದ ಕಾನೂನು ಜಂಗಮರಿಗೆ ಮಾತ್ರ ಯಾಕೆ? ಸರ್ಕಾರ ನಿಗಧಿಪಡಿಸಿದ C1,2A,2B,3A,3B ಇವುಗಳಲ್ಲಿ ಯಾವುದಾದರು ಒಂದಾದರು ನೀಡಬೇಕಲ್ಲವೇ ಯಾಕೆ ನೀಡೋದಿಲ್ಲ? ಕಾನೂನು ಗೊತ್ತೇ ನಿಮಗೆ ಎಲ್ ಜೆ ಹಾವನೂರರು ಎಲ್ಲೋ ಇದ್ದವರನ್ನು ಹುಡುಕಿ ತಂದು OBC ಪಟ್ಟಿಯಲ್ಲಿ ಸೇರಿಸಿದ್ದರ ಕುರಿತು ತಾವು ಕಣ್ಣಾಡಿಸಿ. ತಮಗೆ ಇದು ಬಹಿರಂಗ ಸವಾಲು ಅಂತೇ ತಿಳಿದುಕೊಳ್ಳಿ ಬೇಡಜಂಗಮರು ಯಾರು? ಹೇಳಿ ನಮಗೂ ಅದನ್ನು ತಿಳಿಯುವ ಕುತೂಹಲವಿದೆ. ನಿಮ್ಮ ಶ್ರೇಷ್ಠ ತೆಯ ವ್ಯಸನವು ನಿಮ್ಮ ಮನೆಯಲ್ಲಿಯೇ ಇರಲಿ, ಜಂಗಮರ ಕೊರಳಿಗೆ ಕಟ್ಟಿ ಅವರ ಹಕ್ಕಿಗೆ ಧಕ್ಕೆ ತರಬೇಡಿ.
ಜಂಗಮರ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ.. ಮಾತನಾಡಿದರೆ, ಅವು ಸಂವಿಧಾನದ ಪ್ರಾಥಮಿಕ ಅರಿವಿಲ್ಲದ, ಅಜ್ಞಾನಿ ಕೂಪ ಮಂಡೂಕಗಳಷ್ಟೆ..! ಯೋಗ್ಯತೆ ಇದ್ದರೆ, ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ದಾಖಲೆಗಳೊಂದಿಗೆ ಪಾರದರ್ಶಕ ಚರ್ಚೆಗೆ ಬರಲಿ.. ಲಿಂಗಾಯತ ಜಂಗಮರೇ ಬೇಡಜಂಗಮರು ಎನ್ನುವ ಅರಿವಿಲ್ಲದ ಹೊಣೆಗೇಡಿಗಳ ಹೇಳಿಕೆ ಅಕ್ಷ್ಯಮ್ಯ..