ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯ ಮುಕ್ತಾಯದ ಹಂತಕ್ಕೆ ತಲುಪಿದೆ: ಜಾಕಿರ್ ಹುಸೇನ್

0
70

ಮೈಸೂರು: ಮೌಲಿಕ ಶಿಕ್ಷಣಕ್ಕಿಂತ ಕಟ್ಟಡ ಕಟ್ಟುವ, ಅನಾವಶ್ಯಕ ನೇಮಕಾತಿ ಮಾಡುವ ದಂಧೆಯಲ್ಲಿ ಮುಳುಗಿ ಮುಕ್ತ ವಿ.ವಿ.ಯನ್ನು ಮುಚ್ಚುವ ಹಂತಕ್ಕೆ ತಲುಪಿದ್ದಾರೆ ಎಂದು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ  ಸಮಿತಿಯ ಅಧ್ಯಕ್ಷ ಜಾಕಿರ್ ಹುಸೇನ್ ತಿಳಿಸಿದ್ದಾರೆ.

ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ವಿ.ವಿ.ಯನ್ನು ಸರಿ ದಾರಿಗೆ ತಂದು ವಿದ್ಯಾರ್ಥಿಗಳಿಗೆ ಮುಕ್ತ ಶಿಕ್ಷಣವನ್ನು ನೀಡುವಂತಾಗಲು ಸಹಕರಿಸಬೇಕೆಂದು ಪತ್ರ ಚಳುವಳಿ ಆರಂಭಿಸಿ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ವಯೋಮಾನದ ಅಂತರವಿಲ್ಲದೆ ಎಲ್ಲರು ಉನ್ನತ ಶಿಕ್ಷಣವಂತರಾಗಬೇಕೆಂಬ ಆಶಯವನ್ನು ಇಟ್ಟುಕೊಂಡು ಆರಂಭವಾದದ್ದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಆರಂಭದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕೊನೆಯಿಲ್ಲದಂತಾಗಿದ್ದು, ದಿನ ಕಳೆದಂತೆ ಬರಿ ಹಣಗಳಿಸುವ ದಿಕ್ಕಿನಲ್ಲಿ ದಾಪುಗಾಲಿರಿಸುವಂತ ಸ್ಥಿತಿಯಲ್ಲಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆಗಿಂತ ಬೋದಕ, ಬೋದಕೇಥರ ಸಿಬ್ಬಂದಿಯನ್ನು ನೇಮಕಾತಿ ಮಾಡುತ್ತ ಅದರಿಂದ ಹಣ ವಸೂಲಿ ಮಾಡುವ ಕೃತ್ಯ ಈಗಾಗಲೇ ಬಹಿರಂಗ ವಾಗಿರುವುದು. ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ ಈ ಕೂಡಲೇ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು, ಕುಲಾಧಿಪತಿಗಳಾದ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ. ತಪ್ಪು ಹಾದಿಯಲ್ಲಿ ಸಾಗುತ್ತಿರುವ ಮುಕ್ತ ವಿ.ವಿ.ಯನ್ನು ಸರಿ ದಾರಿಗೆ ತಂದು ವಿದ್ಯಾರ್ಥಿಗಳಿಗೆ ಮುಕ್ತ ಶಿಕ್ಷಣವನ್ನು ಸಿಗುವ ದಿಕ್ಕಿನಲ್ಲಿ ನಡೆಸಬೇಕೆಂದು ಆಗ್ರಹಿಸದ್ದಾರೆ.

ಈ ಸಂದರ್ಭದಲ್ಲಿ ಡಿ ದೇವರಾಜ್ ಸಮಿತಿ ಗೌರವಾಧ್ಯಕ್ಷ ಎಂ ಚಂದ್ರಶೇಖರ್, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೂರರಾದ ಪುರುಷೋತ್ತಮ್,  ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ದೇವರಾಜ್ ಅರಸು ಪ್ರಜ್ಞೆ ಪ್ರತಿಷ್ಠಾಪನ ಸಮಿತಿಯ ಪ್ರಧಾನ ಸಂಚಾಲಕ ಪವನ್ ಸಿದ್ದರಾಮ, ಡೈರಿ ವೆಂಕಟೇಶ್, ಪ್ರದಿ ಉಲ್ಲಾಖಾನ್ಪ್ರ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕೇಂದ್ರ ಸಮಿತಿಯ ರಾಜ್ಯಾಧ್ಯಕ್ಷ ಪಿ ರಾಜು, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್ಎಸ್ ಯು ಐ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಅರ್ಯ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here