ಬಿಸಿ ಬಿಸಿ ಸುದ್ದಿ

ಕ್ರೀಯಾಶೀಲ ಸಂಶೋಧಕರಿಂದ ಮಾತ್ರ ನೈಜ ಇತಿಹಾಸ ರಚನೆ ಸಾಧ್ಯ : ಪ್ರೊ.ನಾಯಕವಾಡಿ

ಕಲಬುರಗಿ: ಸರಕಾರಿ ಕಾಲೇಜು ಕಲಬುರಗಿಯ ಇತಿಹಾಸ ವಿಭಾಗವು ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಇತಿಹಾಸ ರಚನೆ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.

ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ವ್ಹಾಯ್.ಎಚ್.ನಾಯಕವಾಡಿಯವರು ಮಾತನಾಡುತ್ತಾ ಪ್ರಾದೇಶಿಕ ಇತಿಹಾಸ ರಚನೆಯಾಗಬೇಕಾದರೆ ಕ್ರೀಯಾಶೀಲ ಸಂಶೋಧಕರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ವಸಹಾತು ಷಾಹಿ ಬರಹಗಾರಾಗಲಿ ಅಥವಾ ರಾಷ್ಟ್ರೀಯ ಬರಹಗಾರರಾಗಲಿ ಈ ಭಾಗದ ಇತಿಹಾಸ ರಚನೆಗೆ ಮಹತ್ವ ನೀಡದೆ ಇರುವುದರಿಂದ ಹೈದ್ರಾಬಾದ ಕರ್ನಾಟಕದ ಸಮಗ್ರ ಇತಿಹಾಸ ರಚನೆಯಾಗಲಿಲ್ಲ. ಇದರ ಹೊಣೆ ಸಂಶೋಧಕರು, ರಾಜಕಾರಣಿಗಳು ಹಾಗೂ ವಿದ್ವಾಂಸರದಾಗಿದೆ. ಈ ಭಾಗದ ಬಗ್ಗೆ ಅವರಲ್ಲಿ ನಕಾರಾತ್ಮಕ ದೊರಣೆ ಇತ್ತೇ ವಿನಹ ಸಕಾರಾತ್ಮಕ ದೊರಣೆ ಇರಲಿಲ್ಲ. ಧರ್ಮ, ಜಾತಿ, ಪಕ್ಷ, ಪ್ರಾದೇಶಿಕ ಭಾವನೆ ಇಟ್ಟುಕೊಂಡು ಇತಿಹಾಸ ರಚನೆ ಮಾಡಿದರೆ ಅದು ವಸ್ತು ನಿಷ್ಠೆ ಇತಿಹಾಸವಾಗುವುದಿಲ್ಲ ಎಂದು ಪ್ರೊ.ನಾಯಕವಾಡಿಯವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಚಾರ್ಯ ಡಾ.ನಂದಗಿ ರಾಚಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಈ ರೀತಿಯ ವಿಶೇಷ ಉಪನ್ಯಾಸಗಳ ಲಾಭ ಪಡೆದುಕೊಂಡು ಮುಂದಿನ ದಿನಗಳಲ್ಲಿ ತಾವುಗಳು ನಿಜ ಇತಿಹಾಸ ರಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಉದ್ಘಾಟಕರಾದ ಕಲಬುರಗಿ ಸರಕಾರಿ ಕಾಲೇಜಿನ ಕುಲಸಚಿವರಾದ ಡಾ.ಎಂ.ಎಸ್.ಕುಂಬಾರ ಇವರು ಮಾತನಾಡಿ ಇತಿಹಾಸ ಒಂದು ಆಕರ್ಷಕ ವಿಷಯ ಇದು ಎಲ್ಲರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತದೆ.

ಅಂತಹ ಒಂದು ಸಾಮರ್ಥ್ಯ ಈ ವಿಷಯಕ್ಕೆ ಇದೆ. ನಮ್ಮ ದೇಶ ಆರ್ಥಿಕ ರಂಗದಲ್ಲಿ ಹಿಂದೆ ಇದ್ದಿರಬಹುದು ಆದರೆ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮುಂಚುಣಿ ಸ್ಥಾನದಲ್ಲಿದೆ ಎಂದು ಹೇಳಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಶಂಭುಲಿಂಗ ಎಸ್. ವಾಣಿ ಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸುವ ಕೆಲಸ ನಮ್ಮ ವಿಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ ಅದೇ ರೀತಿ ಕೋಟೆ ದರ್ಶನ, ಐತಿಹಾಸಿಕ ಸ್ಮಾರಕಗಳ ಜಾಗೃತಿ ಅಭಿಯಾನಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಡಾ.ಟಿ.ಅಡಿವೇಶ ನಿರೂಪಣೆ ಹಾಗೂ ಪ್ರೊ.ಚಂದ್ರಶೇಖರ ಅನಾದಿ ವಂದನಾರ್ಪಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಪ್ರಾದ್ಯಾಪಕರು ಹಾಜರಿದ್ದರು.

emedialine

Recent Posts

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

16 mins ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

19 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

30 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago