ಲೋಕದ ಅಂಕು ಡೊಂಕು ತಿದ್ದಿದ ಆನುಭಾವಿಕ ಕವಿ; ಸರ್ವಜ್ಞ ಕಾಲೇಜಿನಲ್ಲಿ ಸರ್ವಜ್ಞ ಜಯಂತಿ

0
22

ಕಲಬುರಗಿ: ನಾವಾಡುವ ಮಾತುಗಳು ಬೆಳಕಾಗಬೇಕು. ಬೆಂಕಿಯಾಗಬಾರದು. ಮಾತಿನಿಂದ ಗೆಳೆತನ ಉಂಟಾಗಬೇಕು ಹೊರತು ಹಗೆತನ ಉಂಟಾಗಬಾರದು ಎಂದು ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ ತಿಳಿಸಿದರು.

ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ  ಮಂಗಳವಾರ ಆಯೋಜಿಸಿದ್ದ ಕನ್ನಡದ ಶ್ರೇಷ್ಠ ಅನುಭಾವಿ ಕವಿ ಸರ್ವಜ್ಞ ಜಯಂತಿ ಹಾಗೂ ಸಾಮಾಜಿಕ ನ್ಯಾಯ ದಿನ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರಿಂದ ಮೌಲ್ಯಗಳನ್ನು ಕಲಿಯಬೇಕು. ಸಮಾಜಮುಖಿಯಾಗುವುದರ ಜೊತೆಗೆ ಬದುಕಿನ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಸರ್ವಜ್ಞರ ಬದುಕು ಬರಹ ಕುರಿತು ಮಾತನಾಡಿದ ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಮ್ಮ ಆನುಭಾವಿಕ ತ್ರಿಪದಿಗಳ ಮೂಲಕ ತಿದ್ದಲು ಬಯಸಿದ್ದ ಸರ್ವಜ್ಞ ಕವಿ ಸರ್ವರೊಳಗೊಂದು ನುಡಿ ಕಲಿತು ವಿದ್ಯೆದ ಪರ್ವತವೇ ಆಗಿದ್ದರು ಎಂದು ಅಭಿಪ್ರಾಯಪಟ್ಟರು.

ಸರ್ವಜ್ಞನ ಕಾವ್ಯ ಧೋರಣೆ ಜೀವಪರವಾಗಿದೆ. ಮ್ಯಾಥ್ಯೂ ಅರ್ನಾಲ್ಡ್  ಅವರ ಮಾತಿನಿಂತೆ ಸಾಹಿತ್ಯ ಜೀವನ ವಿಮರ್ಶೆ ಯಾಗಿದೆ. ಅದರಂತೆ ಸರ್ವಜ್ಞನ ವಚನಗಳಲ್ಲಿ ಜೀವನ ವಿಮರ್ಶೆ ಕಾಣಬಹುದಾಗಿದೆ  ಎಂದರು. ಯಾವುದೇ ಶಾಲಾ- ಕಾಲೇಜುಗಳ ಮೆಟ್ಟಿಲು ಹತ್ತದೆ, ಹೆತ್ತವರ, ಪೆÇೀಷಕರ  ಆಶ್ರಯವಿಲ್ಲದೆ, ದೇಶ ಸಂಚಾರ ಮಾಡಿದ ಸರ್ವಜ್ಞ ನಮ್ಮ ಬದುಕಿಗೆ ಬೇಕಾದ, ಬೆಳಕಾಗಬಲ್ಲ ಬುತ್ತಿಯನ್ನು ಕಟ್ಟಿದ್ದಾರೆ ಎಂದು ಹೇಳಿದರು.

ಪ್ರಾಚಾರ್ಯೆ ವಿನುತಾ ಆರ್., ಉಪ ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಪದವಿ ಕಾಲೇಜು ಪ್ರಾಚಾರ್ಯ ಪ್ರಭುಗೌಡ ಪಾಟೀಲ, ಲಕ್ಷ್ಮೀ ಕುಲಕರ್ಣಿ,  ಕಾಂಚನಾ ವೇದಿಕೆಯಲ್ಲಿದ್ದರು. ತ್ರಿವೇಣಿ ನಿರೂಪಿಸಿದರು. ಡಾ. ವಿದ್ಯಾವತಿ ಪಾಟೀಲ ಸ್ವಾಗತಿಸಿದರು.  ವೀರಶ್ರೀ ಸಂಗಡಿಗರು ಪ್ರಾರ್ಥನೆಗೀತೆ ಹಾಡಿದರು. ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಮಕ್ಕಳು, ಯುವ ಜನಾಂಗ ಹಾಗೂ ಸಮಾಜಕ್ಕೆ ದಾದೀಪವಾಗಿವೆ. 16ನೇ ಶತಮಾನದದಲ್ಲಿ ಬಾಳಿ ಬದುಕಿದ್ದ ಸರ್ವಜ್ಞನ ಮೇಲೆ 12ನೇ ಶತಮಾನದ ವಚನಕಾರರ ಪ್ರಭಾವ ಆಗಿದೆ. -ಚನ್ನಾರಡ್ಡಿ ಪಾಟೀಲ, ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here