ಸರ್ವಜ್ಞ ಕಾಲೇಜಿನಲ್ಲಿ ಫೆಬ್ರುವರಿ 25 ರಂದು ಸ್ಕಾಲರಶಿಪ್ ಅಡಮಿಶನ್ ಎಂಟ್ರನ್ಸ್ ಟೆಸ್ಟ್

0
21

ಕಲಬುರಗಿ: ನೂರಾರು ವಿದ್ಯಾರ್ಥಿಗಳನ್ನು ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಅದೇಷ್ಟೊ ವೈದ್ಯರನ್ನು, ಇಂಜಿನಿಯರನ್ನು ಉತ್ತಮ ಶಿಕ್ಷಕರನ್ನು, ಕೃಷಿ ಪಂಡಿತರನ್ನು, ಮಾನವೀಯ ಮೌಲ್ಯಗಳ ಜೊತೆಗೆ ರೂಪಿಸಿದ ಸರ್ವಜ್ಞ ವಸತಿ ಪದವಿ ಪೂರ್ವ ಕಾಲೇಜು ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜು ಬಡ ಪ್ರತಿಭಾವಂತ ವಿದ್ಯಾರ್ಥಿಗಳ, ಆರ್ಥಿಕವಾಗಿ ಹಿಂದುಳಿದ ಹೆತ್ತವರ ಬೇಡಿಕೆಗೆ ಸ್ಪಂದಿಸಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ಮಾರ್ಗದರ್ಶನಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕರಾಗಿ, ವಿದ್ಯಾರ್ಥಿಗಳ ವಿಶೇಷó ಪ್ರೀತಿಗೆ ಪಾತ್ರರಾದ ಸಂಸ್ಥೆಯ ಸಂಸ್ಥಾಪಕರು ಪ್ರೊ ಚನ್ನಾರಡ್ಡಿ ಪಾಟೀಲರು ಸ್ಥಾಪಿಸಿದ ಸರ್ವಜ್ಞ ಕಾಲೇಜು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ ಹಾಗೆಯೇ ನೀಟ್, ಜೆ.ಇ.ಇ. ಸಿ.ಇ.ಟಿ ಫಲಿತಾಂಶಗಳಲ್ಲಿ ಕೂಡಾ ಮಹತ್ವದ ಸಾಧನೆಯನ್ನು ಮಾಡಿದೆ.

ಇದೀಗ ಎಸ್.ಎಸ.ಎಲ್.ಸಿ.-2024 ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸರ್ವಜ್ಞ ಸ್ಕಾಲರಶಿಪ್ ಅಡಮಿಶನ್ ಟೆಸ್ಟ್ ರವಿವಾರ 25ನೇ ಫೆಬ್ರುವರಿ ರಂದು ಬೆಳಗೆ 09:30 ಗಂಟೆಯಿಂದÀ ಪರೀಕ್ಷೆಯನ್ನು ಕಲಬುರಗಿಯ ಸರ್ವಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಎರ್ಪಡಿಸಲಾಗಿದೆ.

Contact Your\'s Advertisement; 9902492681

ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಸರ್ವಜ್ಞ ಕಾಲೇಜಿನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಪಿಯು ಶಿಕ್ಷಣ ಜೊತೆಗೆ ಐ.ಐ.ಟಿ’ಯನ್ ಅಭಿಷೇಕ್ ಪಾಟೀಲ ಇವರು ಉಚಿತವಾಗಿ ಜೆ.ಇ.ಇ, ನೀಟ್ ತರಬೇತಿ ನೀಡಲಿದ್ದಾರೆ ಎಂದು ಸರ್ವಜ್ಞ ಕಾಲೇಜಿನ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ತಿಳಿಸಿದ್ದಾರೆ.

ಪರೀಕ್ಷೆಗಾಗಿ ನೊಂದಾಯಿಸಲು 9844488138, 8310812348, 8050057184 ಗೆ ಸಂಪರ್ಕಿಸಲು ತಿಳಿಸಲಾಗಿದೆ ಅಥವಾ ಸರ್ವಜ್ಞ ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here