ಆಳಂದ; ಪಟ್ಟಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಆಳಂದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಆರ್ ಬಿ ಎಸ್ ಕೆ . ಯೋಜನೆಯ ಸಂಯುಕ್ತಾಶ್ರಯದಲ್ಲಿ 0 – 18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆಗೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ಅರ್ ಸಿ ಹೆಚ್ ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ರವರು ಮೊದಲಿಗೆ ಸಿಸಿಗೆ ನೀರು ಏರಿಯುವ ಮೂಲಕ ಚಾಲನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಪ್ರತಿ ಒಬ್ಬಳು ತಾಯಿಂದಿಯರು ತಮ್ಮ ಮಗುವಿನ ಅರೋಗ್ಯದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಹೆಚ್ಚು ಇರಬೇಕು, ಪ್ರಪ್ರಥಮವಾಗಿ ತಾಲೂಕಾ ಮಟ್ಟದಲ್ಲಿ ತೊಂದರೆವುಳ್ಳ ಮಕ್ಕಳನ್ನು ಆರ್ ಬಿ ಎಸ್ ಕೆ ಶಿಬಿರದ ಮುಖಾಂತರ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಯೋಜನೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಆರ್ ಬಿ ಎಸ್ ಕೆ ತಂಡ ವೈದ್ಯಾಧಿಕಾರಿಗಳ ಮುಖಾಂತರ 4 ಆs ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಆಳಂದ ತಾಲೂಕಿನ ಆರ್ ಬಿ ಎಸ್ ಕೆ ತಂಡವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹೃದಯ ಸಂಬಂಧಿ ಕಾಯಿಲೆ, ಸೀಳು ತುಟಿ,ಇತ್ಯಾದಿ ತೊಂದರೆಯುಳ್ಳ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸುಶೀಲಕುಮಾರ ಅಂಬೂರೆ ರವರು
ಮಾತನಾಡಿ ಆರ್ ಬಿ ಎಸ್ ಕೆ ಕಾರ್ಯಕ್ರಮ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಸಲಹೆ ನೀಡಿದರು. ಮುಖ್ಯ ಅಥಿತಿ ಸ್ಥಾನವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ ಮಹಂತಪ್ಪಾ ಹಾಲಮಳ್ಳಿ, ಮಕ್ಕಳ ತಜ್ನ್ಯರಾದ ಡಾ ಉಮಾಕಾಂತ, ಡಾ ಯೋಗೇಶ್, ಡಾ ತೌಸಿಫ್, ಕಣ್ಣಿನ ತಜ್ನ್ಯರಾದ ಡಾ ಸುನೀಲ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಕಾಂತ ವಹಿಸಿಕೊಂಡಿದ್ದರು.
ಆರ್ ಬಿ ಎಸ್ ಕೆ ತಂಡದ ವೈದ್ಯಾಧಿಕಾರಿಗಳಾದ ಡಾ ವಿನಾಯಾಕ ತಾಟಿ, ಡಾ ಸುಶಾಂತ ಸಂಗಾ, ಡಾ ಸಂಘರ್ಶ್ ವಾಲಿ, ಡಾ ಅಶ್ವಿನಿ ಕೋಟಿ,ಡಾ ಆರತಿ ಪರಗೆ, ಡಾ ರೆಹಾನಾ, ಸಿಬ್ಬಂದಿಗಳಾದ ಅನಿತಾ, ಗುರುದೇವಿ, ಭಾಗ್ಯಶ್ರೀ, ರೇಣುಕಾ, ಅಪ್ಪಾರಾವ, ಜಿಲ್ಲಾ ಡಿ ಈಐಸಿ ವ್ಯವಸ್ಥಾಪಕರು ಕೃಷ್ಣಾ ವಗ್ಗಿ, ಆರ್ ಕೆ ಎಸ್ ಕೆ ಸಮಾಲೋಚಕರು ದೇವಾನಂದ ದೊಡ್ಡಮನಿ, ಚಂದ್ರಕಾಂತ ಕೊರೆ ಉಪಸ್ಥಿತರಿದ್ದರು.
ಶಿಬಿರದಲ್ಲಿ 257 ಮಕ್ಕಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಮಾಡಿಸಲಾಯಿತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಡಿಈಐಸಿ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಮಕ್ಕಳ ತಾಯಿಯಂದಿಯರು. ಭಾಗವಹಿಸಿ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು.