ಸುರಪುರ:ತ್ರಿಪದಿಯ ಕವಿ ಸರ್ವಜ್ಞನವರ ವಚನಗಳು ಕೇವಲ ಹೇಳಿಕೊಳ್ಳಲು ಮಾತ್ರ ಅಲ್ಲದೆ ಅವರ ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು,ಅವರು ತಮ್ಮ ವಿಚಾರವನ್ನು ಸರಳವಾದ ಆಡುಭಾಷೆಯ ಮೂಲಕ ಜನತೆಗೆ ಸಾರಿದ್ದು ಅವು ಇಂದಿಗೂ ಪ್ರಸ್ತುತ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.
ನಗರದ ತಹಸಿಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ದಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸರ್ವಜ್ಞನವರ ಜಯಂತಿಯನ್ನು ತುಂಬಾ ಅದ್ಧೂರಿಯಾಗಿ ಆಚರಿಸೋಣ,ಮುಂದಿನ ವರ್ಷ ದೊಡ್ಡ ಕಾರ್ಯಕ್ರಮವನ್ನು ಮಾಡೋಣ ಎಂದು ತಿಳಿಸಿದರು.
ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಹಾವೇರಿ ಜಿಲ್ಲೆಯ ಹಿರೆಕೇರೂರ ತಾಲುಕಿನ ಮಾಸೂರಿನಲ್ಲಿ ಜನಸಿದ ಸರ್ವಜ್ಞ ಕವಿ ತ್ರಿಪದಿಗಳಲ್ಲಿ ಸಮಾಜದ ಅನಿಷ್ಠಗಳನ್ನು ಟೀಕಿಸಿದರು.
ಈ ಮೂಲಕ ಸಮಾಜವನ್ನು ತಿದ್ದಿ ತೀಡಿ, ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಆದರ್ಶವನ್ನು ತೋರಿಸಿಕೊಟ್ಟರು. ಸಾಮಾಜಿಕ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ಸೂಕ್ಷ್ಮವಾಗಿ ತ್ರಿಪದಿಗಳಲ್ಲಿ ಪ್ರತಿಪಾದಿಸಿದ್ದಾರೆ. ಸಕಲ ಜ್ಞಾನದ ಸಂಗಮವೇ ಆಗಿದ್ದ ಅವರು ಸಮಾಜವನ್ನು ಎಚ್ಚರಿಸಿದರು. ಅವರ ತ್ರಿಪದಿಗಳಲ್ಲಿನ ವಿಚಾರಧಾರೆ, ಆದರ್ಶನೀಯ ಅಂಶಗಳು ಅದ್ಭುತವಾದವು. ಸುಲಭ, ಸರಳವಾಗಿರುವ ತ್ರಿಪದಿಗಳು ಓದುಗನ ಮನದಾಳದಲ್ಲಿ ನೆಲೆಸುತ್ತವೆ ಎಂದು ಹೇಳಿದರು.
ಉಪ ತಹಸಿಲ್ದಾರ್ ರೇವಪ್ಪ ತೆಗ್ಗಿನಮನಿ,ಚುನಾವಣಾ ಶಿರಸ್ತೇದಾರ್ ಅವಿನಾಶ ಪಡಶೆಟ್ಟಿ, ಕುಂಬಾರ ಸಮಾಜದ ಮುಖಂಡರಾದ ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ,ಮಲ್ಲಣ್ಣ ಹುಬ್ಬಳ್ಳಿ, ಈರಣ್ಣ ಕುಂಬಾರ, ಸಾಹೇಬಗೌಡ ಕುಂಬಾರ, ಅಮರೇಶ ಕುಂಬಾರ, ಭೀಮರಾಯ ಕುಂಬಾgಪೇಟೆ, ರವಿ ಕುಂಬಾರಪೇಟೆ, ಆನಂದ ಕುಂಬಾರ, ಮಡಿವಾಳಪ್ಪ ಕುಂಬಾರ, ನಿಂಗಣ್ಣ ವಡಗೇರಿ, ಅಂಬ್ರೇಶ್ ಪಾನಶಾಪ್,ರವಿ ಕುಂಬಾರ,ಸಿದ್ದಪ್ಪ ದಾರಿಮನಿ,ಸಿದ್ದಯ್ಯ ದಾರಿಮನಿ,ಚಂದಪ್ಪ ಕುಂಬಾರ,ಪರಮಣ್ಣ ದೇವಾಪುರ,ಶಿವರಾಜ ಕುಂಬಾರ,ಶಾಂತಪ್ಪ ಮುಂದಿನಮನಿ,ಅಯ್ಯಪ್ಪ ಮುಂದಿನಮುನಿ,ಹಣಮಂತ ಮುಂದಿನಮನಿ,ಸಾಯಿಬಣ್ಣ ದಾರಿಮನಿ ಸೇರಿ ಇತರರು ಇದ್ದರು.
ಸರ್ವಜ್ಞನ ಸಂದೇಶ ಸಮಾಜಕ್ಕ ತಲುಪಬೇಕು; ಸರ್ವಜ್ಞನೆಂಬುವನು ಗರ್ವದಿಂದಾದವನೆ ಸರ್ವರೊಳೊಂದೊಂದು ನುಡಿ ಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ ಎಂಬ ತ್ರಿಪದಿಯಂತೆ ಅವರು ಯಾವುದಕ್ಕೂ ಹೆದರಿದವರಲ್ಲ. ತಾವು ಕಂಡ ಸಮಾಜದ ಹುಳುಕುಗಳನ್ನು ನಿರ್ಭಯವಾಗಿ ಟೀಕಿಸಿದರು. ಅವರ ತ್ರಿಪದಿಗಳಲ್ಲಿ ನೀತಿ, ಸತ್ಯ, ತತ್ವ, ವಿವೇಕ, ವಿಡಂಬನೆ ಇದೆ,ಸರ್ವಜ್ಞನವರ ಜಯಂತಿ ಇನ್ನೂ ತುಂಬಾ ಅದ್ಧೂರಿಯಾಗಿ ಆಚರಿಸುವ ಮೂಲಕ ಅವರ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯ ತಾಲೂಕು ಆಡಳಿತ ಮಾಡಬೇಕು-ರಾಜು ಕುಂಬಾರ ಅಧ್ಯಕ್ಷರು ಸುರಪುರ ತಾಲೂಕು ಕುಂಬಾರ ಸಂಘ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…