ಸರ್ವಜ್ಞನ ವಚನದ ಸಂದೇಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು; ರಾಜು ಕುಂಬಾರ

0
16

ಸುರಪುರ: ತ್ರಿಪದಿಯ ಕವಿ ಸರ್ವಜ್ಞ ಅವರ ವಚನಗಳನ್ನು ಕೇವಲ ಓದಿಗೆ ಮಾತ್ರ ಸೀಮಿತಿಗೊಳಿಸದೆ ಅವರ ವಚನದ ಸಂದೇಶವನ್ನು ಬದುಕಿನಲ್ಲಿ ಅಳವಡಿಸಕೊಳ್ಳಬೇಕು ಎಂದು ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.

ನಗರದ ರಂಗಂಪೇಟೆಯ ಕವಿ ಸರ್ವಜ್ಞ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಇಂದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು 2016 ರಲ್ಲಿ ರಾಜ್ಯದ ಕುಂಬಾರ ಸಮುದಾಯದ ಅನೇಕ ಮುಖಂಡರು ಮನವಿ ಮಾಡಿದ್ದರಿಂದ ಅದೇ ವರ್ಷವೇ ಸರ್ವಜ್ಞನವರ ಜಯಂತಿಯನ್ನು ಸರಕಾರ ದಿಂದ ಆಚರಣೆ ಮಾಡುವುದಾಗಿ ಘೋಷಿಸಿದರು ಮತ್ತು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಸಮುದಾಯದ ಏಳಿಗೆಗಾಗಿ ಸಮುದಾಯ ಭವನವನ್ನು ನಿರ್ಮಿಸಿಕೊಡುವ ಮೂಲಕ ಕುಂಬಾರ ಸಮುದಾಯದ ಅಭಿವೃಧ್ಧಿಗೆ ಸಹಕಾರ ನೀಡಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಸರ್ವಜ್ಞನವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಘೋಷಣೆಗಳ ಕೂಗಿ ಜಯಂತಿ ಆಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕುಂಬಾರ ಸಂಘದ ಮುಖಂಡರಾದ ಈರಣ್ಣ ಕುಂಬಾರ,ಸಾಹೇಬಗೌಡ ಕುಂಬಾರ,ಮಲ್ಲು ಗುಳಗಿ,ವೀರಭದ್ರಪ್ಪ ಕುಂಬಾರ,ಅಮರೇಶ ಕುಂಬಾರ,ಭೀಮರಾಯ ಕುಂಬಾರ,ಆದಪ್ಪ ಕುಂಬಾರ,ನಾಗಭೂಷಣ ಯಾಳಗಿ,ಅಮರೇಶ ಪಾನಶಾಪ್,ನಿಂಗಣ್ಣ ವಡಗೇರಿ,ಆನಂದ ದೇವಾಪುರ,ಮಡಿವಾಳಪ್ಪ ಕುಂಬಾರ,ಆನಂದ ಮಲ್ಯಾ,ಶಿವಪುತ್ರ ಕುಂಬಾರ,ಬಸವರಾಜ ಕುಂಬಾರ,ನಗರಸಭೆ ಸಿಬ್ಬಂದಿ ದುರ್ಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here