ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದ ತಿರುಪತಿ ತಿಮ್ಮಪ್ಪನ ಆರಾಧಕರಾದ. ಪರಮಪೂಜ್ಯ ಮಾನಶಪ್ಪ ಮುತ್ಯನವರ 26ನೇ ಪುಣ್ಯರಾಧನೆ ಪ್ರಯುಕ್ತ ಧಾರ್ಮಿಕ ಮತ್ತು ಭಾರ ಎತ್ತುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಅರ್ಚಕ ದೇವರು ಗೋವಿಂದ ರಾಜ ಮುತ್ಯಾ ಘಂಟಿ ತಿಳಿಸಿದ್ದಾರೆ.
ಇದೆ ಫೇ.22 ರಂದು ಬೆಳಗ್ಗೆ ಮುತ್ಯಾರ ಗದ್ದುಗೆ ಮೂರ್ತಿಗೆ ಅಭಿಷೇಕ. 7.30ಕ್ಕೆ ಧ್ವಜಾರೋಹಣ, 8ಕ್ಕೆ ಮಹಾ ಮಂಗಳಾರತಿ, 1.30ಕ್ಕೆ ಪ್ರಸಾದ. ಸಂಜೆ ದೀಪಾರಥಿ ಮತ್ತು ರಾತ್ರಿ 8.ಕ್ಕೆ ಬಲಭಿಮೇಶ್ವರ ಭಜನಾ ಮಂಡಳಿ ನೇತೃತ್ವದಲ್ಲಿ ಆರಧನೆ ಕಾರ್ಯಕ್ರಮ ನಡೆಯಲಿದೆ.
ಇನ್ನೂ ಪುಣ್ಯರಾಧನೆ ಪ್ರಯುಕ್ತ ಮದ್ಯಾಹ್ನ 12.30ಕ್ಕೆ ಉಸುಕಿನ ಚೀಲ ಮತ್ತು ಸಂಗ್ರಹಣಿ ಕಲ್ಲು ಎತ್ತುವ ಸ್ಪರ್ಧೆ ಆಯೋಜಿಸಲಾಗಿದ್ದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 11 ತೋಲೆ ಬೆಳ್ಳಿ ಖಡ್ಗ, ದ್ವಿತೀಯ ಬಹುಮಾನ 5 ತೋಲೆ ಬೆಳ್ಳಿ ಖಡ್ಗ. ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ 5 ತೋಲಿ ಬೆಳ್ಳಿ ಖಡ್ಗ, ದ್ವಿತೀಯ ಸ್ಥಾನ 2.5 ತೋಲಿ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಲಾಗಿದೆ. ಇನ್ನೂ ಗ್ರಾಮೀಣ ಪ್ರತಿಭೆಗಳಿಗೆ ಸಂಜೆ 5ಕ್ಕೆ ಸನ್ಮಾನಿಸಿ ಗೌರವಿಸಲಾಗುತ್ತಿದ್ದು ಸಕಲ ಭಕ್ತರು ಪುಣ್ಯರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ.