ಸೇವಾ ಮನೋಭಾವದಿಂದ ಮಾಡುವ ಕೆಲಸ ತೃಪ್ತಿ ನೀಡುತ್ತದೆ: ಲಕ್ಷ್ಮಣ ದಸ್ತಿ

0
132

ಕಲಬುರಗಿ: ಇತ್ತೀಚೆಗೆ ನಿಧನರಾದ ನಿವೃತ್ತ ಉಪ ಕೃಷಿ ನಿರ್ದೇಶಕರು,ಜಯನಗರ ಬಡಾವಣೆಯ ಹಿರಿಯರು ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರು ಆಗಿದ್ದ ದಿವಂಗತ ಸಿದ್ರಾಮಪ್ಪ ಸಿರಗಾಪೂರ ಅವರ ನೆನಪಿಗಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ಮಾತನಾಡಿದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಸೇವಾ ಮನೋಭಾವದಿಂದ ಕೆಲಸ ಮಾಡುವ ಜನರು ತ್ರಪ್ತಿ ಜೀವನ ನಡೆಸಲು ಸಾಧ್ಯ.ಸಿದ್ರಾಮಪ್ಪ ಸಿರಗಾಪೂರ ಸರಕಾರಿ ಅಧಿಕಾರಿಯಾಗಿದ್ದರೂ ಅವರು ತೆರೆಮರೆಯಲ್ಲಿ ಮಾಡಿದ ಸಮಾಜಮುಖಿ ಕೆಲಸಗಳು ಶ್ಲಾಘನೀಯ.ತಮ್ಮ ಜೀವನದುದ್ದಕ್ಕೂ ಸರಳತೆ,ನೇರ ಸ್ವಭಾವ ಮೈಗೂಡಿಸಿಕೊಂಡಿದ್ದರು.ಕೊಡುವ ಕೈ ಆಗಿತ್ತು ಹೊರತಾಗಿ ಎಂದಿಗೂ ಚಾಚಿದ ಕೈ ಆಗಿರಲಿಲ್ಲ ಎಂದರು.

Contact Your\'s Advertisement; 9902492681

ಸೂರ್ಯಕಾಂತ ಕೆ.ಬಿ,ಜಿ.ಜಿ.ವಣಿಕ್ಯಾಳ,ವಿಜಯಕುಮಾರ ಹಂಚಿನಾಳ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ,ಡಾ.ಎ.ಎಸ್.ಭದ್ರಶೆಟ್ಟಿ, ವಿಜ್ಞಾನೇಶ್ವರ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬಸವರಾಜ ಪಾಟೀಲ್ ಮರತೂರ, ನಿವೃತ್ತ ಉಪ ಕೃಷಿ ನಿರ್ದೇಶಕರಾದ ಅನಂತಪ್ಪ ಹುಂಪಳಿ, ಶಿವಲಿಂಗ ಪಾಟೀಲ್ ಮರತೂರ, ಬಸವರಾಜ ಅನ್ವರಕರ, ಅಶೋಕ ಗುರೂಜಿ,ಮಾತನಾಡಿ ಸಿರಗಾಪೂರ ಅವರ ದಕ್ಷ ಮತ್ತು ಪ್ರಾಮಾಣಿಕ ಸೇವೆಯನ್ನು ಕೊಂಡಾಡಿದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಉಪಸ್ಥಿತರಿದ್ದರು.ಟ್ರಸ್ಟ್ ಪದಾಧಿಕಾರಿಗಳಾದ ಶಿವಪುತ್ರಪ್ಪ ಮರಡಿ, ಬಂಡಪ್ಪ ಕೇಸೂರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಕುಮಾರ ಪಾಟೀಲ್, ಮಲ್ಲಿಕಾರ್ಜುನ ಡೊಣ್ಣೂರ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಮಲ್ಲಯ್ಯ ಸ್ವಾಮಿ ಬೀದಿಮನಿ, ಗುರುಪಾದಪ್ಪ ಕಾಂತಾ, ಬಸವರಾಜ ಪುರ್ಮಾ,ಪ್ರಭು ಪಾಟೀಲ್, ಅಪ್ಪಾಸಾಹೇಬ ಪಾಟೀಲ್ ಮರತೂರ, ಮಧುಸೂದನ ಕುಲಕರ್ಣಿ, ಮಲ್ಲಿಕಾರ್ಜುನ ಪಾಟೀಲ್ ಮಾಲಗತ್ತಿ,ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಪದಾಧಿಕಾರಿಗಳಾದ ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಗೀತಾ ಲಿಂಗರಾಜ ಸಿರಗಾಪೂರ ಸೇರಿದಂತೆ ಬಡಾವಣೆಯ ಹಿರಿಯರು, ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here