ಮೀಡಿಯಾದವರಿಗೆ ದೇಶಪ್ರೇಮ ಸಾಭೀತುಪಡಿಸಲು ಇದು ಸಕಾಲ ! ಪೊಲೀಸರು ಸಧ್ಯ ಎಫ್ಐಆರ್ ಮಾಡಿ ಶಂಕಿತ ವಿಡಿಯೊವನ್ನು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ. ಎಫ್ಎಸ್ ಎಲ್ ವರದಿ ಬರುವವರೆಗೆ ಪೊಲೀಸರು ಕಾಯಲೇಬೇಕು. ಅರ್ಜೆಂಟಾಗಿ ಆರೋಪಿಯನ್ನು ಬಂಧಿಸಬೇಕು ಎಂದಾದರೆ ಮಾಧ್ಯಮದವರು ದೂರು ಕೊಡಬೇಕು. ದೂರು ಕೊಡುವಾಗ ಕಾನೂನಿನ ಕೆಲವು ನಿಯಮಗಳನ್ನು ಪಾಲಿಸಿದರೆ ಆರೋಪಿಯ ಬಂಧನ ಮಾತ್ರವಲ್ಲ, ಶಿಕ್ಷೆಯೂ ಆಗುತ್ತದೆ.
ಪತ್ರಕರ್ತರು ಪೆನ್ ಡ್ರೈವ್/ ಸಿಡಿಯೊಂದಿಗೆ ದೂರು ಕೊಡುವಾಗ 65b ಸರ್ಟಿಫಿಕೇಟ್ ಅನ್ನು ಲಗತ್ತಿಸಬೇಕು. ಯಾವ ಕ್ಯಾಮರಾದಲ್ಲಿ ಶೂಟಿಂಗ್ ಮಾಡಿದ್ದೀರಿ ? ಕ್ಯಾಮರಾದ ಉತ್ಪಾದನಾ ಸಂಖ್ಯೆ ಏನು ? ಅದನ್ನು ಯಾವ ಕಂಪ್ಯೂಟರ್ ಮೂಲಕ ಡೌನ್ ಲೋಡ್ ಮಾಡಲಾಯಿತು ? ಆ ಕಂಪ್ಯೂಟರ್ ನ ಯಾವ ಡಿಸ್ಕ್ ನಲ್ಲಿ ಸೇವ್ ಮಾಡಿ ಆ ಬಳಿಕ ಯಾವ ಪೆನ್ ಡ್ರೈವ್ ಗೆ ಇಳಿಸಲಾಯಿತು ಎಂದು 65b ಸರ್ಟಿಫಿಕೇಟ್ ನಲ್ಲಿ ಉಲ್ಲೇಖಿಸಬೇಕು.
ಈ ರೀತಿ ದೂರಿನೊಂದಿಗೆ ನೀಡಿದ 65b ಯಲ್ಲಿ ಉಲ್ಲೇಖಿತವಾಗಿರುವ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಅನ್ನು ದೂರುದಾರರು ನ್ಯಾಯಾಲಯದಲ್ಲಿ ಕೇಸ್ ಮುಗಿಯುವವರೆಗೂ ತೆಗೆದಿಟ್ಟಿರಬೇಕು. ನ್ಯಾಯಾಲಯದ ವಿಚಾರಣೆಯ ವೇಳೆ “ಹೌದು ನಾನು ಘೋಷಣೆಯನ್ನು ಕೇಳಿಕೊಂಡಿದ್ದು, ನಾನು ದೂರಿನಲ್ಲಿ ಉಲ್ಲೇಖಿಸಿರುವ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಮೂಲಕ ಶೂಟಿಂಗ್, ಡೌನ್ ಲೋಡ್ ಮಾಡಿಕೊಂಡಿದ್ದೇನೆ” ಎಂದು ಒಪ್ಪಿಕೊಳ್ಳಬೇಕು. ನ್ಯಾಯಾಲಯದ ಪ್ರತೀ ಕಲಾಪದಲ್ಲೂ ಭಾಗವಹಿಸಿ ಸಿಡಬ್ಲ್ಯು 1 ಆಗಿ ಸಾಕ್ಷಿ ನುಡಿಯಬೇಕು. ಎದುರುದಾರರ ವಕೀಲರ ಪಾಟಿ ಸವಾಲುಗಳಿಗೆ ಉತ್ತರಿಸಬೇಕು. ಆ ಬಳಿಕ ನ್ಯಾಯಾಲಯದ ಮುಂದೆ ಆರೋಪಿ ಪರ ವಕೀಲರು CrPc section 391(2) r/w 207(v) ಅಡಿಯಲ್ಲಿ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಅನ್ನು ಕೇಳಿದಾಗ ನ್ಯಾಯಾಲಯದ ವಶಕ್ಕೆ ನೀಡಬೇಕು.
ವಿಪರ್ಯಾಸ ಎಂದರೆ ಯಾವ ಮಾಧ್ಯಮದವರೂ ಕೂಡಾ ಲಕ್ಷಾಂತರ ಮೌಲ್ಯದ ಕ್ಯಾಮರಾ, ಕಂಪ್ಯೂಟರ್ ಅನ್ನು ವರ್ಷಾನುಗಟ್ಟಲೆ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ನ್ಯಾಯಾಲಯಕ್ಕೆ ಹಾಜರಾಗಿ ಬಾಕ್ಸ್ ನಲ್ಲಿ ನಿಂತು ಸಾಕ್ಷಿ ಹೇಳುವುದಕ್ಕಂತೂ ಸುತರಾಂ ಒಪ್ಪಲ್ಲ. ಈ ವರೆಗೆ ಪತ್ರಕರ್ತರು ಇಂತದ್ದನ್ನು ಮಾಡಿಯೇ ಇಲ್ಲ.
ಹಾಗಾಗಿ, ದೇಶಪ್ರೇಮ ಎನ್ನುವುದು ಮಾತನಾಡಿದಷ್ಟು ಸುಲಭವಲ್ಲ. ದೇಶಪ್ರೇಮ ತ್ಯಾಗವನ್ನು ಬಯಸುತ್ತದೆ. ಬದುಕಿನ ಅಮೂಲ್ಯ ಅವಧಿಯ ಕೆಲ ಸಮಯವನ್ನು ಕೇಳುತ್ತದೆ. ಮಾತನಾಡುವ ದೇಶಪ್ರೇಮಿ ಮಾಧ್ಯಮದವರು ಸಣ್ಣ ತ್ಯಾಗಕ್ಕೆ ಸಿದ್ದರಿದ್ದಾರೆಯೇ ?
ಹಿರಿಯ ಪತ್ರಕರ್ತ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…