ಬಿಸಿ ಬಿಸಿ ಸುದ್ದಿ

ಸುರಪುರ: ಗೋಲ್ಡನ್ ಕೇವ್ ಬುದ್ಧ ವಿಹಾರ ಆರ್.ವಿ ನಾಯಕಗೆ ಶ್ರದ್ಧಾಂಜಲಿ

ಸುರಪುರ:ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇವರು ಅಕಾಲಿಕವಾಗಿ ಬುದ್ಧವಾಸಿ ಯಾದ ಕಾರಣ ನುಡಿನಮನ ಪುಣ್ಯಾನುಮೋದನೆ ದಿನವನ್ನು ಆಚರಿಸಲಾಯಿತು.

ಮೊದಲಿಗೆ ಪೂಜ್ಯ ಸಂಘಜ್ಯೋತಿ ಭಂತೇಜಿಯವರಿಂದ ಪಂಚಶೀಲ ಪಠಣ ಮತ್ತು ವಿಶೇಷವಾಗಿ ಪುಣ್ಯಾನುನೋಧನೆಯ ಪೂಜೆಯನ್ನು ಮೇಣದ ಬತ್ತಿ ಹಚ್ಚಿ ಭಾವಚಿತ್ರಕ್ಕೆ ಪುಷ್ಫಾಚರಣೆಯನ್ನು ಮಾಡಿದರು.

ಕಾರ್ಯಾಕ್ರಮದಲ್ಲಿ ಬಾಗವಹಿಸಿದ್ದ ಟ್ರಸ್ಟ್ ಖಜಾಂಚಿ ಮತ್ತು ಬೌದ್ಧಸಾಹಿತಿ ಬುದ್ಧಘೋಷ ದೇವೇಂದ್ರ ಹೆಗ್ಗಡೆಯವರು ಮಾತನಾಡಿ ಶಾಸಕ ರಾಜಾ ವೆಂಕಟಪ್ಪ ನಾಯಕರು ರಾಜಕೀಯವಾಗಿ ಅಲ್ಲದೆ ಸಮಾಜಿಕ ಮತ್ತು ದಾರ್ಮಿಕವಾಗಿಯು ಸುರಪುರ ಜನತೆಗೆ ಕೊಡುಗೆಯನ್ನು ಕೊಟ್ಟಿದ್ದಾರೆ. ಅದರ ಭಾಗವಾಗಿ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರಕ್ಕೆ ಸ್ಥಳಿಯ ಸರಕಾರದ ಅನುದಾನದಲ್ಲಿ ಬಹುಪಾಲು ಕಾಮಾಗಾರಿಗಳನ್ನು ನೇರೆವೆರಲೂ ಮತ್ತು ಇಲ್ಲಿಯ ಸ್ವರ್ಣ ಹೆಬ್ಬಂಡೆಯ ಮೇಲೆ ಇವತ್ತು ಪಂಚಶೀಲ ದ್ವಜ ಶಾಶ್ವತವಾಗಿ ಹಾರಾಡುತ್ತಿದೆ ಎಂದರೆ ಅದಕ್ಕೆ ಅವರದು ಪಾಲೂ ಇದೆ ಎಂದರು.

ಇತ್ತೀಚಿಗೆ ವಿಹಾರಕ್ಕೆ ಬೇಟಿ ನೀಡಿದಾಗ ಟ್ರಸ್ಟ್ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಸಣ್ಣ ಪುಟ್ಟ ಅನುದಾನಗಳಿಂದ ಇಲ್ಲಿ ಏನು ಮಾಡಲಿಕ್ಕೆ ಆಗಲ್ಲ ಲೋಕಸಭೆ ಚುನಾವಣೆ ನಂತರ ಕನಿಷ್ಠ 5 ಕೋಟಿ ಅನುದಾನ ತರೋಣ ಒಂದು ಉತ್ತಮವಾದ ಬೌದ್ಧ ಧಾರ್ಮಿಕ ಕೇಂದ್ರನ್ನಾಗಿ ಮಾಡೋಣ ಎಂದು ಮಾತನಾಡಿದ್ದರು ಎಂದಾಗ ಕಾರ್ಯಾಕ್ರಮದಲ್ಲಿ ಬಾಗವಹಿಸಿದ್ದಎಲ್ಲರ ಕಣ್ಣಾಲಿಗಳು ತುಂಬಿದ್ದವು. ಹಾಗಾಗಿ ನಾವೂ ಯಾರು ಎದೆಗುಂದದೆ ಅವರ ಸರಳ ಸಜ್ಜನೆಕೆಯ ದಾರಿಯಲ್ಲಿ ನಾವೂ ಮುಂದೆ ಸಾಗೋಣ ಎಂದರು.

ದೇವಿಂದ್ರಪ್ಪ ಪತ್ತಾರ ಮಾತನಾಡಿ, ಅವರು ರೈತರ ಮತ್ತು ಕಾರ್ಮಿಕರ ಬಗ್ಗೆ ಸಾಕಷ್ಟು ಹೋರಾಟಮಾಡಿ ನುಡಿದಂತೆ ನಡೆದ ಜನನಾಯಕ ಎಂದು ಮಾತನಾಡಿದರು. ಟ್ರಸ್ಟ್ ಅದ್ಯಕ್ಷ ವೆಂಕಟೇಶ ಹೊಸಮನಿ,ಮಾತನಾಡಿ ನಾನು ನಗರ ಸಭೆಯ ಸದಸ್ಯನಾಗಿದ್ದಾಗ ಬುದ್ಧವಿಹಾರಕ್ಕೆ ಕೇಳಿದ ಅನುದಾನವೆಲ್ಲ ಕೊಟ್ಟಿದ್ದರು ನಮ್ಮೆಲ್ಲರನ್ನು ಅಣ್ಣ ತಮ್ಮ,ತಮ್ಮ ಮನೆಯ ಮಕ್ಕಳಂತೆ ಕಂಡಿದ್ದು ನಮ್ಮ ಜನ್ಮ ಸಾರ್ತಕವಾಗಿತ್ತು ಆದರೆ ಇವಾಗ ಅವರಿಲ್ಲ ಎನ್ನುವ ನೋವು ಅತೀಯಾಗಿ ಕಾಡತೋಡಗಿದೆ ಅವರೊಂದು ಮರೆಯದ ಮಾಣಿಕ್ಯ ಎಂದು ಮಾತನಾಡಿದರು.
ನೋವಿನಲ್ಲಿ ಅವರ ಅಭಿಮಾನಿಗಳಿಂದ ಭಾವಚಿತ್ರಕ್ಕೆ ಪುಷ್ಫಾರ್ಚಣೆ ಮಾಡಿ ಅಗಲಿದ ನಾಯಕನಿಗೆ ನಮನಗಳನ್ನು ಸಲ್ಲಿಸಲಾಯಿತು. ಕಾರ್ಯಾಕ್ರಮದ ನಿರುಪಣೆಯೊಂದಿಗೆ ರಾಹುಲ್ ಹುಲಿಮನಿ ಮಾತನಾಡಿ ಭಾವನಾತ್ಮಕ ಒಬ್ಬ ಸರಳ ಮತ್ತು ಧೀಮಂತ ನಾಯಕನ್ನು ಕಳೆದುಕೊಂಡ ಈ ನಾಡಿಗೆ ತುಂಬಲಾರದ ನಷ್ಠವೆಂದುರು.

ಭಿಮರಾಯ ಸಿಂದಗೇರಿ, ವೆಂಕಟೇಶ್ವರ ಸುರಪುರ, ಮಾಳಪ್ಪ ಕಿರದಳ್ಳಿ, ಶಿವಶಂಕರ್ ಹೊಸಮನಿ, ಶರಣಪ್ಪ ತಳವಾರಗೇರಾ, ಮಂಜುನಾಥ ಹೊಸಮನಿ, ಹಣಮಂತ ತೇಲ್ಕರ್, ವೈಜನಾಥ ಹೊಸಮನಿ, ಪರಶುರಾಮ್ ಗೋವಾ ಬಸವರಾಜ ಶೆಳ್ಳಗಿ, ನಾಗರಾಜ ಬೇವಿನಗೀಡ, ಭಿಮಶಂಕರ್ ಹೊಸಮನಿ, ಗುರು ಹುಲಿಕರ್, ಪ್ರಮೋದ, ಮಹಿಳಾ ಉಪಾಸಿಕಾರಾದ ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಸುನಿತಾ ಕಿರದಳ್ಳಿ, ಶಿವಮೊಗೆಮ್ಮ ಹೊಸಮನಿ, ಭೀಮಬಾಯಿ ಕಟ್ಟಿಮನಿ, ಇತರರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago