ಸುರಪುರ: ತಾಲೂಕಿನ ತಿಮ್ಮಾಪುರದ ಶ್ರೀ ಮರಗಮ್ಮದೇವಿ ದೇವಸ್ಥಾನದ ಸೇವಾ ಸಮಿತಿಯಿಂದ ದೇವಸ್ಥಾನದ ಜಿರ್ಣೋದ್ಧಾರ ಕಾರ್ಯ ನಡೆಯುತ್ತೀದ್ದು, ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ದೇವಸ್ಥಾನದ ಜಿರ್ಣೋದ್ಧಾರಕ್ಕೆ ಸಹಾಯಧನ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯರಿಗೆ ಮನವಿ ಮಾಡಿದ್ದರಿಂದ ಶ್ರೀ ಮರಗಮ್ಮದೇವಿ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಸುಮಾರು 1.50 ಲಕ್ಷ ಮೊತ್ತವನ್ನು ಮಂಜೂರಾತಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿಯಾದ ಸಂತೋಷ್.ಎ.ಎಸ್ ರವರು ಶ್ರೀ ಮರಗಮ್ಮದೇವಿ ದೇವಸ್ಥಾನದ ಸಮಿತಿಯ ಪಧಾಧಿಕಾರಿಗಳಿಗೆ ಡಿ.ಡಿ ಯನ್ನು ಹಸ್ತಾಂತರ ಮಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಸಾವಿರಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರುವಾಗ ಪೂಜ್ಯ ಧರ್ಮಾಧಿಕಾರಿಗಳು ರಾಜ್ಯದೆಲ್ಲೇಡೆ ಧಾರ್ಮಿಕ ಕ್ಷೇತ್ರಗಳ ಜಿರ್ಣೋದ್ಧಾರಕ್ಕೆ ಪೂರಕವಾಗಿ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಸರ್ಕಾರಿ ಮತ್ತು ಅನಿದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಜ್ಞಾನದೀಪ ಕಾಂiÀರ್iಕ್ರಮದಡಿಯಲ್ಲಿ ಶಿಕ್ಷಕರನ್ನು ನೀಡುತ್ತೀದ್ದಾರೆ.
ಶಾಲೆಗಳ ಮಕ್ಕಳಿಗೆ ಅನುಕೂಲವಾಗುವಂತೆ ಡೆಸ್ಕ್ ಬೆಂಚ್‍ಗಳನ್ನು ನೀಡುತ್ತೀದ್ದಾರೆ. ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂಜ್ಯರ ಆಶಯದಂತೆ ನಿರ್ಮಾಣ ಮಾಡಲಾಗುತ್ತೀದೆ. ಹಿಂದೂ ರುಧ್ರಭೂಮಿಗಳಿಗೂ ಅನುದಾನವನ್ನು ಮಿಸಲಿಟ್ಟಿರುತ್ತಾರೆ. ನಮ್ಮ ಈ ಭಾಗದ ಸ್ವ-ಸಹಾಯ ಸಂಘಗಳ ರಚನೆಯ ಮೂಲಕ ಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ವಿಶೇಷ ಆಧ್ಯತೆ ನೀಡುತ್ತೀದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಡಾ. ಸುರೇಶ್ ಸಜ್ಜನ್ ಅವರ ಅನುಪಸ್ಥಿತಿಯಲ್ಲಿ, ಉಪಾಧ್ಯಕ್ಷರಾದ ಬಸವರಾಜ್ ಕೊಡೇಕಲ್, ಮಲ್ಲಿಕಾರ್ಜುನ್ ಕಡೆಚೂರ್, ವಾಸುದೇವ ಮಂಗಳೂರು, ಶಿವಶರಣಪ್ಪ ಶಾಬಾದಿ, ಶ್ರೀನಿವಾಸ ಯಾದವ್, ಶಿವಕುಮಾರ್ ಪತ್ತಾರ್, ಅವರಿಗೆ ಡಿ.ಡಿ ಯನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಹಣಕಾಸು ಪ್ರಬಂಧಕರಾದ ಶಿವಕುಮಾರ್ ಬೀದಿ, ವಲಯದ ಮೇಲ್ವಿಚಾರಕರಾದ ಬಸಮ್ಮರವರು ಉಪಸ್ಥಿತರಿದ್ದರು.