ಸುರಪುರ: ನಾವು ಅನೇಕ ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೇವೆ,ಆದರೂ ಕೂಲಿಕಾರರಿಗೆ ಕೆಲಸ ಕೊಡುತ್ತಿಲ್ಲ,ಕೆಲಸ ಕೊಡದ ಅಧಿಕಾರಿಗಳು ಏಕೆ ಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಮಾತನಾಡಿದರು.
ನಗರದ ತಾಲೂಕು ಪಂಚಾಯತ ಕಾರ್ಯಾಲಯದ ಮುಂದೆ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ತಾಲುಕಿನ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳನ್ನು ಆರಂಭಿಸುತ್ತಿಲ್ಲ,ಅಲ್ಲದೆ ಕೆಲಸವನ್ನೂ ನೀಡುತ್ತಿಲ್ಲ,ಕೆಲಸ ನೀಡುವವರೆಗೆ ಪ್ರತಿಭಟನೆಯನ್ನು ನಿರಂತರವಾಗಿ ನಡೆಸೋಣ ಎಂದರು.
ಫಾರ್ಮ್ ನಂಬರ್ 6 ಕೆಲಸಕ್ಕಾಗಿ ತುಂಬಿ ಕೊಟ್ಟು 3 ತಿಂಗಳಾದರು ಕೆಲಸ ಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ,ಇದನ್ನು ಪಿಡಿಓ ಮತ್ತು ತಾಲುಕು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು. ಪ್ರಯೋಜನೆಯಾಗುತ್ತಿಲ್ಲ, ಶೆಳ್ಳಗಿ, ಮುಷ್ಠಳ್ಳಿ, ಹೆಗ್ಗಣದೊಡ್ಡಿ, ಏವೂರ,ಬೋನ್ಹಾಳ,ಚಿಕ್ಕನಹಳ್ಳಿ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ಎಲ್ಲ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ನಾವು ಇಂದು ಆಗ್ರಹಿಸುತ್ತಿದ್ದು,ಬೇಡಿಕೆ ಈಡೇರುವವರೆಗೆ ಇಲ್ಲಿಂದ ಕದಲುವುದು ಬೇಡ ಎಂದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಆಲ್ಹಾಳ ಮಾತನಾಡಿ,ಹೆಗ್ಗಣದೊಡ್ಡಿ ಗ್ರಾಮದ ಕೂಲಿಕಾರರ ಜಾಬ್ ಕಾರ್ಡ್ ನೀಡಬೇಕು,ಈಗಾಗಲೇ ಕೆಲಸ ಮಾಡಿದವರಿಗೆ ಕೂಲಿ ಹಣ ನೀಡಬೇಕು,ಸತತವಾಗಿ 100 ದಿನಗಳ ಕೆಲಸ ನೀಡಬೇಕು,ಮೆಟ್‍ಗಳಿಗೆ ನೊಂದಣಿ ಮಾಡಿ ಗೌರವ ಧನ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯತಿ ಇಓ ಬಸವರಾಜ ಸಜ್ಜನ್ ಆಗಮಿಸಿ ವiನವಿ ಆಲಿಸಿದರು,ಅಲ್ಲದೆ ಏವೂರ ಮತ್ತು ದೇವಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಳೆಯಿಂದ ಕೆಲಸ ಆರಂಭಿಸುವುದಾಗಿ,ಹಿಂದೆ ಕೆಲಸ ಮಾಡಿದವರಿಗೆ ಬಜೆಟ್ ಜಮೆ ಆದ ನಂತರ ಕೂಲಿ ಹಣ ನೀಡುವುದಾಗಿ ಹಾಗೂ ಜಾರ್ಬ್ ಕಾರ್ಡ್‍ಗಳನ್ನು ನೀಡಲು ಒಂದು ವಾರಗಳ ಕಾಲಾವಕಾಶ ಪಡೆದು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ವ್ಯವಸ್ಥಾಪಕ ರವಿಚಂದ್ರರೆಡ್ಡಿ,ಸಂಘಟನೆ ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನಸೂರ,ಸಹ ಕಾರ್ಯದರ್ಶಿ ಪ್ರಕಾಶ ಕಟ್ಟಿಮನಿ,ಬಸವರಾಜ ಬಡಿಗೇರ,ರೇಣುಕಮ್ಮ ಹೆಗ್ಗಣದೊಡ್ಡಿ,ಭಾಗಮ್ಮ,ಈಶಮ್ಮ ದೊಡ್ಮನಿ,ಬಸವರಾಜ ಏವೂರ,ದುರಗಮ್ಮ ಮುಷ್ಠಳ್ಳಿ,ಖಾಜಾಹುಸೇನ ನಾಗರಾಳ,ಯಲ್ಲಪ್ಪ ಚಿಕ್ಕನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…