ಹಿಂದೂಗಳಿಗೆ ಪೂಜೆಗೆ ಅವಕಾಶ: ಸಂವಿಧಾನದ ಗೆಲುವು; ಹರ್ಷಾನಂದ ಗುತ್ತೇದಾರ

0
62

ಆಳಂದ; ಪಟ್ಟಣದಲ್ಲಿ ಮಹಾಶಿವರಾತ್ರಿಯಂದು ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ಆದೇಶ ಮಾಡಿಕೊಟ್ಟಿರುವುದು ಸಮಸ್ತ ಹಿಂದೂಗಳಿಗೆ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಸಿಕ್ಕ ಗೆಲುವಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಹಾಗೂ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ ಜಂಟಿಯಾಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಮತ್ತು ಜಿಲ್ಲಾಡಳಿತ ಹಿಂದೂ ವಿರೋಧಿ ನಿಲುವು ತಾಳಿ ಪೂಜೆಗೆ ಅವಕಾಶ ಕಲ್ಪಿಸಿರಲಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇಲ್ಲದ ನೆಪ ಹೇಳಿ ಪೂಜೆಗೆ ಅವಕಾಶ ನಿರಾಕರಿಸಿತ್ತು.

Contact Your\'s Advertisement; 9902492681

ಹೇಗಾದರೂ ಮಾಡಿ ಪೂಜೆಗೆ ಅವಕಾಶ ಕೊಡಬಾರದೆಂದು ನಿರ್ಧರಿಸಿ ಸರ್ಕಾರ ಸರ್ಕಾರದ ಸಹಾಯಕ ಸರ್ಕಾರಿ ಅಭಿಯೋಜಕರನ್ನು ಕರೆಯಿಸಿ ಪೂಜೆಗೆ ಅವಕಾಶ ಕೊಡಬಾರದೆಂದು ವಾದ ಮಂಡಿಸಿತ್ತು ಆದರೆ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರ ಸಮಿತಿ ಹೈಕೋರ್ಟ್‍ನಲ್ಲಿ ಸಮರ್ಥ ವಾದ ಮಂಡಿಸಿತ್ತು. ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ 15 ಜನ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿದೆ ಇದು ಸಮಸ್ತ ಹಿಂದೂಗಳಿಗೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.

ಸರ್ಕಾರ ಕೇವಲ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಗಡಿಪಾರು ಅದೇಶ ಮಾಡುತ್ತಿದೆ. ಈ ಹಿಂದೆ ಗಡಿಪಾರಾಗಿ ಜೈಲಿನಲ್ಲಿದ್ದುಕೊಂಡು ಬಂದ ಫೀರ್ದೋಶ್ ಅನ್ಸಾರಿಯನ್ನು ಗಡಿಪಾರು ಮಾಡಿದ್ದರೂ ಅದರ ಮಾಹಿತಿಯನ್ನು ಮಾಧ್ಯಮಗಳಿಗೆ ಮುಚ್ಚುಟ್ಟು ಕೇವಲ ಹಿಂದೂ ಕಾರ್ಯಕರ್ತರ ಮಾಹಿತಿಯನ್ನು ನೀಡಿದ್ದು ಯಾವ ಕಾರಣಕ್ಕೆ?. ಇದು ಹಿಂದೂಗಳನ್ನು ಬೆದರಿಸುವ ತಂತ್ರವಾಗಿದೆ ಎಂದಿದ್ದಾರೆ.

ಪೂಜೆ ಸಲ್ಲಿಸಲು ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 2 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಪೂಜೆಯಲ್ಲಿ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಶ್ರೀರಾಮ ಸೇನೆಯ ಅಧ್ಯಕ್ಷ ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ, ರಾಘವ ಚೈತನ್ಯ ಶಿವಲಿಂಗದ ಅರ್ಚಕ ಗುರುನಾಥ ಜೋಶಿ, ಹರ್ಷಾನಂದ ಗುತ್ತೇದಾರ, ನಾಗೇಂದ್ರ ಕಾಬಡೆ, ಮಾಜಿ ಶಾಸಕ ಅಪ್ಪುಗೌಡ ಪಾಟೀಲ, ಶಾಸಕ ಡಾ. ಅವಿನಾಶ ಜಾಧವ, ಶಿವರಾಜ ಪಾಟೀಲ ರದ್ದೇವಾಡಗಿ ಸಂತೋಷ ಹಾದಿಮನಿ, ಗುಂಡಪ್ಪ ಗೌಳಿ, ಈರಣ್ಣಾ ಹತ್ತರಕಿ, ಆನಂದಕುಮಾರ ಪಾಟೀಲ, ವಿಜಯಕುಮಾರ ರಾಠೋಡ ಪಾಲ್ಗೊಳ್ಳಲಿದ್ದಾರೆ.

ಪ್ರಯುಕ್ತ ಆಳಂದ ಪಟ್ಟಣದ ಹೊರ ವಲಯದ ಕಲಬುರಗಿ ರಸ್ತೆಯಲ್ಲಿರುವ ಪ್ರಗತಿ ಟೌನ್‍ಶಿಪನ್‍ನ ಆವರಣದಲ್ಲಿ ಮಾರ್ಚ 8ರಂದು ಮಧ್ಯಾಹ್ನ 12 ಗಂಟೆಗೆ ಮಹಾ ಮೃತ್ಯುಂಜಯ ಹೋಮ ಜರುಗಲಿದೆ. ಈ ಸಂದರ್ಭದಲ್ಲಿ ಭಕ್ತರು ಭಜನೆ, ಶಿವನಾಮ ಸ್ಮರಣೆ, ಧಾರ್ಮಿಕ ಪ್ರವಚನ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಕೊಡಲಿದ್ದಾರೆ ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ.

ಬಾಕ್ಸ್: ಮಹೇಶ ಗೌಳಿ ಕಳೆದ 6 ವರ್ಷಗಳಿಂದ ಆಳಂದ ನಿವಾಸಿಯಾಗಿರುವುದಿಲ್ಲ. ಅವರ ಮೇಲೆ ಇರುವ ಎಲ್ಲ ಪ್ರಕರಣಗಳಿಂದ ಅವರು ಖುಲಾಸೆಯಾಗಿರುತ್ತಾರೆ ಆದರೂ ಸರ್ಕಾರ ಹಿಂದೂ ವಿರೋಧಿ ನಿಲುವು ತಾಳಿ, ಒಂದು ವರ್ಗವನ್ನು ಒಲೈಸಿಕೊಳ್ಳುವುದಕ್ಕಾಗಿ ಅವರನ್ನು ಗಡಿಪಾರು ಮಾಡಿದೆ. ಅದಕ್ಕೂ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಇದು ಕೂಡ ಸತ್ಯಕ್ಕೆ, ನ್ಯಾಯಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಸಿಕ್ಕ ಜಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here