ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಲಬುರಗಿ ಹಾಗೂ ಕೇಂದ್ರಿಯ ವಿಶ್ವ ವಿದ್ಯಾಲಯ ಕರ್ನಾಟಕ ಕಲಬುರಗಿ ಜಂಟಿಯಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವು ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಸದ ಸದಸ್ಯರಾದ ಡಾ. ಉಮೇಶ ಜಾಧವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಾನು ಇವತ್ತು ಈ ಉನ್ನತ ಸ್ಥಾನದಲ್ಲಿರಲು ನನ್ನ ತಾಯಿಯ ಕೊಡುಗೆ ಅಪಾರವಾಗಿದೆ. ನನ್ನ ತಾಯಿಯೇ ನನಗೆ ಮಾದರಿ, ನನ್ನ ತಾಯಿಯು ನನಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿದ್ದಾಳೆ. ನಾವೆಲ್ಲರೂ ಮಹಿಳೆಯನ್ನು ಗೌರವಿಸಬೇಕು ಹಾಗೂ ಮಹಿಳೆಯಿಂದಲೇ ನಾವೆಲ್ಲರೂ ಎಂದು ಹೇಳುತ್ತಾ ಮಾನ್ಯ ಪ್ರಧಾನ ಮಂತ್ರಿ ಸನ್ಮಾನ್ಯನರೇಂದ್ರ ಮೋದಿ ಅವರು ಯಾವಾಗಲು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ.
ಮಹಾತ್ಮ ಬಸವಣ್ಣನವರ ತತ್ವದಲ್ಲಿ ನೂತನ ಸಂಸತ್ ಭವನವನ್ನು ಉದ್ಘಾಟಿಸಿ ಸಂಸತ್‍ನಲ್ಲಿ ಹಾಗೂ ವಿಧಾನ ಸಭೆಯಲ್ಲಿ 2029ರ ವೇಳೆಗೆ ಮಹಿಳೆಯರಿಗೆ ಶೇ. 33 ಮೀಸಲಾತಿ ವಿಧೇಯಕವನ್ನು ಮಂಡಿಸಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳು ಬಡವರಿಗೆ, ಯುವಕರಿಗೆ, ಅನ್ನದಾತ ಹಾಗೂ ಮಹಿಳಾ ಶಕ್ತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಪರಿಶಿಷ್ಟ ಪಂಗಡದ ಮಹಿಳೆಗೆ ಈ ದೇಶದ ರಾಷ್ಟ್ರಪತಿ ಹುದ್ದೆ ನೀಡಲಾಗಿದೆ. ಈ ಶ್ರೇಯಸ್ಸು ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಸಲ್ಲುತ್ತದೆ. ಡಾ. ಬಿ. ಆರ್ ಅಂಬೇಡ್ಕರ್ ಅವರು ಸಮಾಜದಲ್ಲಿ ಎಲ್ಲಾ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ್ದಾರೆ.
ಸಮಾಜದ ಕಟ್ಟ ಕಡೆಯ ಮಹಿಳೆಯ ಬಗ್ಗೆ ಕೂಡ ಚಿಂತಿಸಬೇಕಾಗುತ್ತದೆ. ಈ ಭಾಗದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ ಮಂಜೂರಾಗಿದ್ದು ಇದರಿಂದ ಅನೇಕ ಮಹಿಳೆಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ನಾವು ಅನಕ್ಷರಸ್ಥ ಮಹಿಳೆಯರಿಗೂ ಕೂಡ ತರಬೇತಿ ನೀಡಿ ಉದ್ಯೋಗ ನೀಡಲಾಗುವುದು. ವಿಮಾನಯಾನ ತರಬೇತಿ ಕೇಂದ್ರ ಪ್ರಾರಂಭವಾಗಿದ್ದು, ತಮ್ಮ ಮಕ್ಕಳಿಗೆ ತರಬೇತಿ ನೀಡಿ ಪೈಲೆಟ್ ಆಗಲು ಪ್ರೇರೆಪಿಸಬೇಕು. ಕಲಬುರಗಿಯಿಂದ ಬೆಂಗಳೂರುವರೆಗೆ ನಾಳೆ ನೂತನ ವಂದೇ ಭಾರತ ರೈಲು ಪ್ರಾರಂಭವಾಗುತ್ತಿದ್ದು, ಈ ಭಾಗದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ ಕಲಬುರಗಿ ಕುಲಪತಿಯಾದಬಟ್ಟು ಸತ್ಯನಾರಾಯಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಮಹಿಳೆ ಇಲ್ಲದೆ ಯಾವುದೇ ಅಭಿವೃದ್ದಿ ಬಗ್ಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರಧಾನ ಮಂತ್ರಿಗಳು “ಬೇಟಿ ಬಚಾವ್ ಬೇಟಿ ಪಢಾವ್” ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಭಾರತದ ಸಿಂದು ಕಣಿವೆ ನಾಗರಿಕತೆಯಿಂದಲೂ ಮಹಿಳೆಯರನ್ನು ಪೂಜನೀಯ ಹಾಗೂ ತಾಯಿ ಸ್ವರೂಪದಲ್ಲಿ ಕಾಣಲಾಗುತ್ತಿದೆ. ಮಹಿಳಾ ಮೀಸಲಾತಿಯಿಂದ ಸ್ಥಳೀಯ ಸರಕಾರದಿಂದ ಸಂಸತ್ತಿನವರೆಗೆ ಹಾಗೂ ಮಹಿಳಾ ಸಬಲೀಕರಣದ ನಿಜ ಸ್ವರೂಪವನ್ನು ಭಾರತ ದೇಶದಲ್ಲಿ ಕಾಣಲು ಸಾಧ್ಯವಾಗಲಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಹೆಚ್ಚಾಗಿದ್ದು, ಈಗ ಎಲ್ಲಾ ಕುಟುಂಬವು ಹುಡುಗಿಯರ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುತ್ತಿದೆ. 1980ರ ಸಾಲಿಗೆ ಹೋಲಿಸಿದಾಗ ಸಾಕಷ್ಟು ಬದಲಾವಣೆಯನ್ನು ಹೊಂದಿದೆ.
ಮಹಿಳೆಯರು ಎಲ್ಲಾ ವಲಯಗಳಲ್ಲಿ ಭಾಗವಹಿಸಿಕೆ ಹೆಚ್ಚಾಗಿರುವುದರಿಂದ ಭಾರತದ ಆರ್ಥಿಕ ಬೆಳವಣಿಗೆ ಹೊಂದುತ್ತಿದೆ. ಕೈಗಾರಿಕೋದ್ಯಮ ಅಭಿವೃದ್ಧಿಗೆ ಸನ್ಮಾನ ಪ್ರಧಾನ ಮಂತ್ರಿಗಳು ಮುದ್ರಾ, ಎಸ್.ಎಚ್.ಜಿ., ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಎಂಬ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕೇಂದ್ರಿ ವಿಶ್ವವಿದ್ಯಾಲಯ ಕರ್ನಾಟಕ ಕಲಬುರಗಿ ಹಾಗೂ ಕೆ.ಕೆ.ಸಿ.ಸಿ.ಐ ಕಲಬುರಗಿ ಮಧ್ಯೆ ಮೆಮೊರಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಲಬುರಗಿ ಅಧ್ಯಕ್ಷರಾದಶಶಿಕಾಂತ ಬಿ. ಪಾಟೀಲ ಅವರು ಮಾತನಾಡುತ್ತ ನಾವು ಮಹಿಳೆಯರಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿದರೆ ಆರ್ಥಿಕವಾಗಿ ಸಮಾಜ ಅಭಿವೃದ್ಧಿ ಹೊಂದಲು ಮಹಿಳೆಯು ಅನೇಕ ಕೊಡುಗೆಗಳನ್ನು ನೀಡುವಳು. ಇಂದಿನ ಮುಂದುವರೆದ ವೈಜ್ಞಾನಿಕ ತಂತ್ರಜ್ಞಾನದಲ್ಲಿ ಕೈಗಾರಿಕೋದ್ಯಮದಲ್ಲಿ ಮಹಿಳೆಯರ ಪಾತ್ರವು ಹೆಚ್ಚಾಗಿದೆ.
ಈ ಭಾಗದ ಮಹಿಳೆಯರು ಕೈಗಾರಿಕೋದ್ಯಮೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗಾಗಿ ಕೆ-ಲ್ಯಾಂಪ್ ಸಂಸ್ಥೆ ಸ್ಥಾಪಿಸಲಾಗಿದ್ದು ಇದರಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಕಾರ್ಖಾನೆಗಳನ್ನು ಆರಂಭಿಸಿದ್ದಾರೆ. ಕೈಗಾರಿಕೆಗಳ ಅಭಿವೃದ್ಧಿ, ತರಬೇತಿ ಮತ್ತು ಉದ್ಯೋಗಗಳ ನಿರ್ಮಿಸಲು ಕೇಂದ್ರಿಯ ವಿಶ್ವ ವಿದ್ಯಾಲಯ ಕರ್ನಾಟಕ ಕಲಬುರಗಿ ಜೊತೆಗೆ ಮೆಮೊರಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಲಬುರಗಿ ಗೌರವ ಕಾರ್ಯದರ್ಶಿಮಂಜುನಾಥ ಜೇವರ್ಗಿ ಅವರು ಸ್ವಾಗತಿಸಿ ಕೆ.ಕೆ.ಸಿ.ಸಿ.ಐ. ಬಗ್ಗೆ ಕಿರು ಪರಿಚಯ ನೀಡಿದರು. ಸಿ.ಯು.ಕೆ. ಪೆÇ್ರೀಫೆಸರ್ ಡಾ. ಮಹಮ್ಮದ್ ಜೋಹೆದ್ ಕೇಂದ್ರಿಯ ವಿಶ್ವ ವಿದ್ಯಾಲಯ ಕರ್ನಾಟಕ ಕಲಬುರಗಿ ಬಗ್ಗೆ ಕಿರು ಪರಿಚಯ ಹಾಗೂ ಮೆಮೊರಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ಬಗ್ಗೆ ವಿವರಣೆ ನೀಡಿದರು. ಪೆÇ್ರೀ. ಪುಷ್ಪ ಎಮ್. ಸವದತ್ತಿ, ಮತಿ ಮುಕ್ತ ಆರ್. ಜೇಗರಕಲ್, ಮತಿ ಚಂದನ್‍ಬಾಲಾ ಸೆಠೀಯಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಡಾ. ಗಣಪತಿ ಬಿ. ಸಿನ್ನೂರ, ಡಾ. ಶಿವಕುಮಾರ ಬೆಳ್ಳಿ, ಡಾ. ಸುಷ್ಮ ಹೆಚ್. ಡಾ. ಶೈಲಜಾ ಕೋನೆಕ್ ಮತ್ತು ಕೆ.ಕೆ.ಸಿ.ಸಿ.ಐ ಉಪಾಧ್ಯಕ್ಷರಾದರಾಮಕೃಷ್ಣ ಬೋರಾಳಕರ್, ಜಂಟಿ ಕಾರ್ಯದರ್ಶಿಸಂಗಮೇಶ ಕಲ್ಯಾಣಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದಶಿವರಾಜ ಇಂಗೀನ್ ಶೆಟ್ಟಿ,ರವಿಚಂದ್ರ ಕೆ. ಪಾಟೀಲ,ಕೇದರ್ ರಘೋಜಿ,ರವಿಶಂಕರ ಜಮದರಖಾನಿ,ಜಗದೀಶ ಕಡಗಂಚಿ,ಸಂತೋಷ ಲಂಗರ್ ಉಪಸ್ಥಿತರಿದ್ದರು. ಕೆ.ಕೆ.ಸಿ.ಸಿ.ಐ. ಖಜಾಂಚಿ ಸಿ.ಎ. ಉತ್ತಮ ಬಜಾಜ ವಂದನಾರ್ಪಣೆ ಸಲ್ಲಿಸಿದರು. ಫೆÇೀ. ಸಾಫೀಯಾ ಪರ್ವಿನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಿ.ಯು.ಕೆ ವಿದ್ಯಾರ್ಥಿಗಳು ಹಾಗೂ ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…