ಸುರಪುರ: ಸಂವಿಧಾನವನ್ನು ಬದಲಿಸುವ ಕೆಲಸ ಹೆಗಡೆ ಅಲ್ಲಾ ಅವರಪ್ಪ ಹುಟ್ಟಿ ಬಂದರು ಸಾಧ್ಯವಿಲ್ಲ ಎಂದು ಸ್ವಪಕ್ಷದ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸಲು ಬಿಜೆಪಿ 400 ಸೀಟು ಗೆಲ್ಲಬೇಕು ಎಂದು ನೀಡಿದ್ದ ಹೇಳಿಕೆ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯ್ದರು
ನಗರದ ಬಿಜೆಪಿ ಕಾರ್ಯಾಲಯ ಆವರಣದಲ್ಲಿ ನಡೆದ ಫಲಾನುಭವಿಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಬದಲಿಸುವುದಲ್ಲ,ಸಂವಿಧಾನವನ್ನು ತಲೆಯ ಮೇಲಿಟ್ಟುಕೊಂಡು ಮೆರೆಸುವ ಕೆಲಸ ಯಾರಾದರು ಮಾಡಿದ್ದರೆ ಅದು ನರೇಂದ್ರ ಮೋದಿಯವರು ಮಾಡಿದ್ದಾರೆ.ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಾಗಲು ಸಂವಿಧಾನ ಕಾರಣ,ಹೆಗಡೆಯಂತವರು ಆರಿಸಿ ಬಂದ ನಂತರ ನಾಲ್ಕು ವರ್ಷ ಜನರ ಬಳಿಗೆ ಹೋಗುವುದಿಲ್ಲ,ಕೊನೆಯಲ್ಲಿ ಈರೀತಿಯ ಮಾತನಾಡಿ ಗೆದ್ದು ಬರುವುದನ್ನು ಕಲಿತಿದ್ದಾರೆ,ನಮ್ಮಂತಹ ಕ್ಷೇತ್ರದಲ್ಲಿದ್ದು ಚುನಾವಣೆ ಮಾಡಿದರೆ ಗೊತ್ತಾಗಲಿದೆ ಎಂದರು.ಅಲ್ಲದೆ ಯಾರೋ ಆಡುವ ಇಂತಹ ಮಾತಿನಿಂದ ನಮಗೆ ಸಮಸ್ಯೆಯಾಗುತ್ತಿದೆ,ಸಂವಿಧಾನದ ಕುರಿತು ಈ ರೀತಿ ಹೇಳಿಕೆ ನೀಡಿದವರಿಗೆ ಪಕ್ಷ ಯಾವ ರೀತಿಯ ಪಾಠ ಕಲಿಸುತ್ತದೆ ಎನ್ನುವುದು ಅವರಿಗೆ ಗೊತ್ತಾಗಲಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಲಬುರ್ಗಿ ವಿಭಾಗಿಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮಾತನಾಡಿ,ನರೇಂದ್ರ ಮೋದಿಯವರು ಮಾಡಿದ ಕೆಲಸವನ್ನು ಬೂತ್ ಕಮಿಟಿ ಪ್ರಮುಖರು ಎಲ್ಲಾ ಬೂತ್‍ಗಳಲ್ಲಿ ಸಂಚರಿಸಿ ಪೇಜ್ ಪ್ರಮುಖರ ಮೂಲಕ ಪ್ರತಿಯೊಬ್ಬರಿಗೂ ಕೇಂದ್ರ ಸರಕಾರ ಮಾಡಿದ ಕಾರ್ಯಗಳ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್‍ರೆಡ್ಡಿ ಪಾಟೀಲ್ ಯಾಳಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ,ಗುರು ಕಾಮಾ,ಮೇಲಪ್ಪ ಗುಳಗಿ, ಮುಖಂಡರಾದ ಯಲ್ಲಪ್ಪ ಕುರಕುಂದಿ,ರಾಜಾ ಮುಕುಂದ ನಾಯಕ,ಹೆಚ್.ಸಿ ಪಾಟೀಲ್,ಮಾನಪ್ಪ ಸಾಹುಕಾರ ಆಲ್ದಾಳ,ದುರ್ಗಪ್ಪ ಗೋಗಿಕೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…