ಕಲಬುರಗಿ: ಭಾರತೀಯ ರೈಲ್ವೇ ತನ್ನ ಸೇವೆಗಳನ್ನು ಹೆಚ್ಚು ಅನುಕೂಲಕರವಾಗಿಸಲು ಮತ್ತು ವಿಕಲಚೇತನ ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಿದೆ. ಇತ್ತಿಚೆಗೆ ವಿಕಲಚೇತನರಿಗೆ ಅನುಕೂಲಕರವಾಗಿಸಲು ರಾಜಧಾನಿ, ಡುರಂಟೊ, ವಂದೇ ಭಾರತ, ಹಮ್ಸಪರ್ ಹಾಗೂ ಗತಿಮಾನ್ ವಿಶೇಷ ರೈಲುಗಳು ಸೇರಿದಂತೆ ಎಲ್ಲಾ ಕಾಯ್ದಿರಿಸಿದ ಮೇಲ್/ಎಕ್ಸಪ್ರೆಸ್ ರೈಲುಗಳಲ್ಲಿ ದಿವ್ಯಾಂಗ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಕಾಯ್ದಿರಿಸುವ ಆಸನಗಳಿಗೆ ಮೀಸಲಾತಿ ಕೋಟಾ ನೀಡಲು ನಿರ್ಧರಿಸಿದೆ.
ಈ ಮೊದಲು ವಿಕಲಚೇತನರು ವಂದೇ ಭಾರತ ಹಾಗೂ ಇನ್ನಿತರ ವಿಶೇಷ ರೈಲುಗಳಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಇರುತ್ತಿರಲಿಲ್ಲ. ಈಗ ಅವಕಾಶ ಮಾಡಿಕೊಟ್ಟಿದೆ. ವಿಶಿಷ್ಟ ಗುರುತಿನ ಚೀಟಿ ಪಡೆದ ವಿಕಲಚೇತನರಿಗಷ್ಟೇ ಮಾತ್ರ ಈ ಅವಕಾಶ ಪಡೆದುಕೊಳಬಹುದು ಎಂದು ರೈಲ್ವೆ ಮಂಡಳಿ ತಿಳಿಸಿದೆ. ರೈಲ್ವೆ ಇಲಾಖೆ ದಿವ್ಯಾಂಗ ಸ್ನೇಹಿಯಾಗಿರುವುದು ಹರ್ಷದಾಯಕವಾಗಿದೆ ಎಂದು ಸಕ್ಷಮ ಕಲಬುರಗಿ ಜಿಲ್ಲಾ ಶಾಖೆಯ ಅಧ್ಯಕ್ಷ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.