ಕಲಬುರಗಿ: ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿ(ಎಸ್) ಹಾಗೂ ಕಾಂಗ್ರೆಸ್ ಮೈತ್ರಿಕೂಟವು ಸುಮಾರು ೪೬೦೦೦ ಕೋಟಿ ರೂ.ಗಳ ರೈತರ ಸಾಲ ಮನ್ನಾಕ್ಕೆ ಕ್ರಮ ಕೈಗೊಂಡಿದ್ದು, ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಆ ನೀತಿಯನ್ನು ಮಾರ್ಪಡಿಸಿ ರೈತರ ಸಾಲ ಮನ್ನಾ ಪ್ರಮಾಣದಲ್ಲಿ ಸುಮಾರು ೧೮೦೦೦ ಕೋಟಿ ರೂ.ಗಳನ್ನು ಉಳಿಕೆ ಮಾಡಿಕೊಂಡಿದ್ದು ಒಂದು ಘೋರ ಅಪರಾಧವಾಗಿದ್ದು, ಕೂಡಲೇ ರೈತ ವಿರೋಧಿ ಮಾರ್ಪಾಡು ನೀತಿಯನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರು ಇಲ್ಲಿ ಒತ್ತಾಯಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ನಿಬಂಧನೆಗಳನ್ನು ಹಾಕಿ, ಉಳಿಕೆ ಹಣ ಎಂದು ತಾವೇ ಸೃಷ್ಟಿಸಿ ಕುಮಾರಸ್ವಾಮಿ ಸರ್ಕಾರದಲ್ಲಿನ ರೈತರ ಸಾಲ ಮನ್ನಾ ಪ್ರಮಾಣವನ್ನು ಯಡಿಯೂರಪ್ಪ ಸರ್ಕಾರವು ಅರ್ಧದಷ್ಟು ಪ್ರಮಾಣಕ್ಕೆ ಮೊಟಕುಗೊಳಿಸಿದೆ ಎಂದು ಆರೋಪಿಸಿದರು.
ಈ ಹಿಂದೆ ಕುಮಾರಸ್ವಾಮಿ ಅವರ ಕಿವಿ ಹಿಂಡಿ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿ ಹೇಳುತ್ತಿದ್ದರು. ಈಗ ತಾವೇ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಪ್ರಮಾಣದಲ್ಲಿ ಭಾರೀ ಖೋತಾ ಮಾಡಿದ್ದು ಅವರಿಗೆ ಯಾರು ಕಿವಿ ಹಿಂಡುವವರು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ರೈತರ ಸಾಲ ಮನ್ನಾ ನೀತಿಯಲ್ಲಿ ಸಾಕಷ್ಟು ಸಮಸ್ಯೆಯನ್ನು ಹುಟ್ಟುಹಾಕಲಾಗಿದೆ. ೨ ಲಕ್ಷ, ಒಂದು ಲಕ್ಷ, ಇದರಲ್ಲಿ ಯಾವುದು ಕಡಿಮೆ ಇರುವುದೋ ಅದನ್ನು ಮಾತ್ರ ಮನ್ನಾ ಮಾಡಲಾಗುತ್ತದೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ಆಗದು ಎಂದು ಅವರು ಹೇಳಿದರು.
ವಾಣಿಜ್ಯ ಬ್ಯಾಂಕುಗಳಲ್ಲಿ ಸುಮಾರು ೧೦,೭೦,೬೭೧ ರೈತರ ಸುಮಾರು ೧೬.೩೭೬ ಕೋಟಿ ರೂ.ಗಳು ಮನ್ನಾ ಆಗಬೇಕು. ಅದರಲ್ಲಿ ಕೇವಲ ೮೨೦೯ ಕೋಟಿ ರೂ.ಗಳನ್ನು ಮನ್ನಾ ಮಾಡಲಾಗುತ್ತಿದ್ದು, ಶೇಕಡಾ ೫೦ರಷ್ಟು ಕಡಿತ ಮಾಡಲಾಗಿದೆ. ಇನ್ನು ಸಹಕಾರಿ ಕ್ಷೇತ್ರದಲ್ಲಿ ೧೯,೧೦,೧೪೪ ರೈತರು ಸಾಲ ಪಡೆದಿದ್ದು, ಅದರಲ್ಲಿ ಮನ್ನಾಕ್ಕೆ ೧೭,೪೧,೪೧೨ ರೈತರು ಅರ್ಹರಿದ್ದಾರೆ. ಒಟ್ಟು ೧೧.೦೧೨ ಕೋಟಿ ರೂ. ಗಳ ಮನ್ನಾ ಕೈಬಿಟ್ಟು ಕೇವಲ ೮,೮೧೩ ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಸುಮಾರು ೧೪,೫೬,೨೬೨ ರೈತರ ೬,೬೧೩ ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಅದರಲ್ಲಿ ೫೦೦೦ ಕೋಟಿ ರೂ.ಗಳ ಉಳಿಕೆ ಮಾಡಿದ್ದೇ ಸಾಧನೆಯೆಂದು ಪರಿಗಣಿಸಿದ್ದಾರೆ. ರೈತರ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿದ್ದರೆ ಅಂತಹ ರೈತರ ಸಾಲ ಮನ್ನಾ ಮಾಡದೇ ಅಪರಾಧ ಎಸಗಿದ್ದಲ್ಲದೇ ಆ ಹಣವೇ ಉಳಿಕೆ ಎನ್ನುವುದು ಒಂದು ದೊಡ್ಡ ಅಪರಾಧವಾಗಿದೆ ಎಂದು ಅವರು ಆರೋಪಿಸಿದರು.
ಸಾಪ್ಟವೇರ್‌ನಲ್ಲಿ ಒಟ್ಟು ೩೬೦೦೦ ಕೋಟಿ ರೂ.ಗಳ ಸಾಲ ಮನ್ನಾ ಆಗಬೇಕಿತ್ತು. ೨೨ ಲಕ್ಷ ರೈತರು ಸಾಲ ಪಡೆದಿದ್ದು, ಆ ಸಾಲದ ಪ್ರಮಾಣವನ್ನು ೧೬ ಲಕ್ಷ ರೈತರಿಗೆ ಮಾತ್ರ ಸೀಮಿತಗೊಳಿಸಿದೆ. ಸುಮಾರು ೨೭೦೦೦ ಕೋಟಿ ರೂ.ಗಳು ಕಡಿಮೆ ಆಗಿದ್ದು, ಇಲ್ಲಿಯೂ ಒಂಭತ್ತೂವರೆ ಸಾವಿರ ಕೋಟಿ ರೂ.ಗಳು ಉಳಿತಾಯ ಎಂಬ ಸಾಧನೆ ತೋರಿಸಿದ್ದಾರೆ. ಇನ್ನೊಂದರಲ್ಲಿಯೂ ಸಹ ಮೂರುವರೆ ಸಾವಿರ ಕೋಟಿ ರೂ.ಗಳು ಉಳಿತಾಯ ಎಂಬ ಸಾಧನೆ ತೋರಿಸಿದ್ದಾರೆ. ಇದೆಲ್ಲವನ್ನು ನೋಡಿದಲ್ಲಿ ರೈತರ ಸಾಲ ಮನ್ನಾ ನೀತಿಯನ್ನು ಮಾರ್ಪಡಿಸಿ ಯಡಿಯೂರಪ್ಪ ಅವರ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸಿ ಸಾಲ ಪ್ರಮಾಣದ ಕುಗ್ಗಿಸಿದೆ ಎಂದು ಅವರು ದೂರಿದರು.
ಕೂಡಲೇ ಕುಮಾರಸ್ವಾಮಿ ಸರ್ಕಾರದ ರೈತರ ಸಾಲ ಮನ್ನಾ ನೀತಿಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ರೀತಿಯಲ್ಲಿ ಸಾಲದ ಪ್ರಮಾಣವನ್ನು ಕುಗ್ಗಿಸಬಾರದು. ಈ ಕುರಿತು ಬೇಕಾದರೆ ಸೆಪ್ಟೆಂಬರ್ ೧೭ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮಾರುಕಟ್ಟೆಯಲ್ಲಿ ಹೆಸರು ಮತ್ತು ಉದ್ದಿನ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕೂಡಲೇ ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಂಡುರಂಗ್ ಮಾವಿನ, ಅಶೋಕ್ ಮ್ಯಾಗೇರಿ, ಶಾಂತಪ್ಪ ಪಾಟೀಲ್, ಸುಧಾಮ್ ಧನ್ನಿ ಚಿಂಚನಸೂರ್ ಮುಂತಾದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…