ಯುವಕರು ದೇಶಸೇವೆಯ ಗುಣ ಮೈಗೂಡಿಸಿಕೊಳ್ಳಿ

0
24

ಕಲಬುರಗಿ: ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ. ದೇಶ ಉಳಿದರೆ ಮಾತ್ರ ದೇಶವಾಸಿಗಳು ಬದುಕಲು ಸಾಧ್ಯ. ದೇಶಕ್ಕೆ ಕಷ್ಟ, ಗಂಡಾಂತರ ಪರಿಸ್ಥಿತಿ ಬಂದಾಗ ಕೇವಲ ಸೈನಿಕರು ಮಾತ್ರ ಸೇವೆ ಸಲ್ಲಿಸಿದರೆ ಸಾಲದು. ಜೊತೆಗೆ ದೇಶದ ಯುವಶಕ್ತಿ ದೇಶ ಸೇವೆಯನ್ನು ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಸೇನಾ ನಿವೃತ್ತ ಕ್ಯಾಪ್ಟನ್ ಶರಣಪ್ಪ ಭೋಗಶೆಟ್ಟಿ ಯುವಕರಿಗೆ ಸಲಹೆ ನೀಡಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಹುತಾತ್ಮ ಮೇಜರ್ ಸಂದೀಪ ಉನ್ನಿಕೃಷ್ಣನ್ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ತಾಜ್ ಹೋಟೆಲ್ ಮೇಲೆ ನಡೆದ ದಾಳಿಯಲ್ಲಿ ಉಗ್ರರ ಜೊತೆ ಹೋರಾಡಿ ಉಗ್ರರನ್ನು ಸದೆಬಡೆದು, ಭಾರತೀಯರನ್ನು ರಕ್ಷಿಸಿ, ಜೀವವನ್ನು ನೀಡಿದ ಮೇಜರ್ ಸಂದೀಪ ಉನ್ನಿಕೃಷ್ಣನ್ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಯಾವುದೇ ಒಂದು ರಾಷ್ಟ್ರದ ರಕ್ಷಣೆ, ಅಭಿವೃದ್ಧಿಯಲ್ಲಿ ಅಲ್ಲಿನ ಸೈನಿಕರ ಪಾತ್ರ ಪ್ರಮುಖವಾಗಿದೆ. ಮಳೆ-ಚಳಿ, ಹಗಲು-ರಾತ್ರಿಯೆನ್ನದೇ, ಮನೆ-ಸಂಸಾರವನ್ನು ಬಿಟ್ಟು ದೇಶದ ಗಡಿಯನ್ನು ಕಾಯುವ ಪವಿತ್ರವಾದ ಕೆಲಸ ಮಾಡುವ ಯೋಧರ ಸೇವೆ ಸನನ್ಯವಾಗಿದೆ. ದೇಶದ ಸೈನಿಕರಿಗೆ, ನಾಗರಿಕರ ಸ್ಪೂರ್ತಿ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆಳಂದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಹಾಂತಪ್ಪ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಸೈಯದ್ ಹಮೀದ್, ಪೂಜಾ ಜಮಾದಾರ, ಪ್ರಮುಖರಾದ ಶರಣು ಧೋತ್ರೆ, ಬೀರಣ್ಣ ಪೂಜಾರಿ, ಅಭಿಶೇಕ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ದೇಶಭಕ್ತಿಯ ಜೈಘೋಷ ಮೊಳಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here