ಕಲಬುರಗಿ: ಇಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿ ರೈತ ಮತ್ತು ಪ್ರಗತಿಪರ ಒಕ್ಕೂಟದ ವತಿಯಿಂದ ಪ್ರತಿಭಟನೆ ಜರುಗಿತು. ಈ ವೇಳೆ ರೈತರು ಮತ್ತು ಪ್ರಗತಿಪರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
MSP, CAA, ELECTROL ಬಾಂಡ್ ಅವ್ಯವಹಾರ ವಿರೋಧಿಸಿ ರೈತರಿಗೆ ನರೇಗಾ ಕೂಲಿ ಕಾರ್ಮಿಕರ ವೇತನ ಬಿಡುಗಡೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಟ್ರೇಡ್ ಯೂನಿಯನ್ ಮುಖಂಡರಾದ ಶಹನಾಜ್ ಅಖ್ತರ್, ವೇಲ್ಫರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಮುಬಿನ್ ಅಹ್ಮದ್, ಸಿಪಿಐಎಂ ಮುಖಂಡರು, ಎಸ್.ಎಫ್.ಐ ಕಾರ್ಯಕರ್ತರು ಸೇರಿದಂತೆ ಹಲವರು ಇದ್ದರು.