ಅನಕ್ಷರಸ್ಥರಲ್ಲಿನ ಭಯವೇ ಜೀತಪದ್ಧತಿಗೆ ಮೂಲ ಕಾರಣ: ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟೆ

0
38

ಕಲಬುರಗಿ: ಗ್ರಾಮೀಣ ಪ್ರದೇಶದಲ್ಲಿ ಜೀತ ಪದ್ಧತಿ ಇನ್ನು ಕೂಡ ಜೀವಂತವಾಗಿರುವುದು ನಮ್ಮ ದುರದುಷ್ಟಕರ. ಅನಕ್ಷರಸ್ಥರಲ್ಲಿ ಇರುವ ಭಯವೇ ಇದಕ್ಕೆ ಮೂಲ ಕಾರಣ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟೆ ಹೇಳಿದರು.

ಅವರು ಕಲಬುರಗಿ ನಗರದ ಎಸ್.ಎಂ. ಪಡಿಂತ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜೀತ ಪದ್ಧತಿ ಸಮೀಕ್ಷೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಭಯದಿಂದ ಹೊರಗೆ ಬರಬೇಕು, ಸ್ವತಂತ್ರರಾಗಬೇಕು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕು ಎಂದರು. ಜೀತ ವಿಮುಕ್ತ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ತಿರುಳು ಗುಂಪಿನ ಸದಸ್ಯರಾದ ಕಿರಣ ಕಮಲ ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇನ್ನು ಜೀತ ಪದ್ದತಿ ಇದ್ದು, ಇದರ ನಿರ್ಮೂಲನೆಗೆ ಇಲ್ಲಿನ ಅಧಿಕಾರಿಗಳು ಶ್ರಮಿಸಬೇಕು. ರಾಜ್ಯ ಸರ್ಕಾರವು ಕರ್ನಾಟಕದಲ್ಲಿನ ಜೀತ ಪದ್ಧತಿ ನಿರ್ಮೂಲನೆಗಾಗಿ ತಾಲೂಕ ಮಟ್ಟ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರೂಪಿಸಿದ್ದು, ಈ ಕಾರ್ಯಪಡೆಗಳ ಮೂಲಕ ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸವಾಗಬೇಕೆಂದರು.

Contact Your\'s Advertisement; 9902492681

ಸಂವಿಧಾನದ ೨೩ ವಿಧಿ ಪ್ರಕಾರ ಬಲತ್ಕಾರದ ದುಡಿಮೆಯನ್ನು ನಿಷೇಧಗೊಳಿಸಿದ್ದರು ಅದು ರಾಜರೋಷವಾಗಿ ನಡೆಯುತ್ತಿರುವುದು ದುದೈವ. ೧೯೭೬ರಲ್ಲಿ ಕಾಯ್ದೆ ಜಾರಿಗೆ ತರುವ ಮೂಲಕ ಈ ಪದ್ಧತಿ ನಿಷೇಧಗೊಳಿಸಲಾಯಿತು. ಆದರೆ ವಾಸ್ತವವಾಗಿ ಸಂಪೂರ್ಣವಾಗಿ ಈ ಜೀತ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾಗಿಲ. ಎಂದರು.
ಅಧಿಕಾರಿಗಳು ಜೀತ ಪದ್ಧತಿ ನಿರ್ಮೂಲನೆ ಕಾನೂನಿನ ಅರಿವು ಮೂಡಿಸುವಲ್ಲಿ ಸಕ್ರಿಯರಾಗಬೇಕು. ಚಿಕ್ಕಮಗಳೂರು ಜಿಲ್ಲೆ, ಹುಣಸೂರು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜೀತ ಪದ್ಧತಿಗೆ ಒಳಪಟ್ಟ ಕುಟುಂಬಗಳಿಗೆ ಕಾನೂನಿನ ಅರಿವಿನಡಿ ಜೀತಪದ್ಧತಿ ಬಿಡುಗಡೆ ಪತ್ರ ನೀಡಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಪದ್ಧತಿ ಜಾರಿಯಲ್ಲಿದ್ದು, ಅಂತಹ ಜನರನ್ನು ಅಧಿಕಾರಿಗಳು ಗುರುತಿಸಿ ಜೀತ ಪದ್ಧತಿ ಬಿಡುಗಡೆ ಪತ್ರ ನೀಡಬೇಕು. ಕಾನೂನಿನ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಹಕರಿಸಬೇಕು ಎಂದು ಹೇಳಿದರು. ಜೀತದಾಳುಗಳನ್ನು ಗುರುತಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಆದೇಶ ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅಲ್ಲದೇ ಸರ್ವೋಚ್ಛ ನ್ಯಾಯಾಲಯ ೨೦೧೨ ರಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದು ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದರು.

ಈ ಕಾರ್ಯಗಾರದಲ್ಲಿ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಸೇಡಂ ಸಹಾಯಕ ಆಯುಕ್ತ ರಮೇಶ್ ಕೋಲಾರ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಿಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here