ಕಲಬುರಗಿ ಕಸಾಪದಿಂದ ಸಂಕಥನ ಕೃತಿಯ ಅವಲೋಕನ ಮಾ. 23ಕ್ಕೆ

0
95

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳ ಪರಿಚಯನ್ನೊಳಗೊಂಡ ಸಂಕಥನ ಕೃತಿಯ ಒಂದು ಅವಲೋಕನ ಕಾರ್ಯಕ್ರಮವನ್ನು ಮಾ. 23 ರ ಸಾ. 4.15 ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆದಿರುವ ವಿವಿಧ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಜೀವನ ಸಾಧನೆಯನ್ನು ಹಿಡಿದಿಡುವ ಕಾರ್ಯ ಈ ಕೃತಿ ಮಾಡಿದೆ. ಈ ಕೃತಿ ನಾಡಿನ ಸಾಂಸ್ಕøತಿಕ ಪರಂಪರೆಗೆ ದಾಖಲೆಯಾಗಲಿದ್ದು, ಇದರ ಒಂದಿಷ್ಟು ಅವಲೋಕನ ಮಾಡುವ ಚಿಕ್ಕ ಪ್ರಯತ್ನವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

Contact Your\'s Advertisement; 9902492681

ಹಿರಿಯ ಲೇಖಕಿ ಡಾ. ವಿಜಯಲಕ್ಷ್ಮೀ ಕೋಸಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ನೂತನ ಸದಸ್ಯ ಬಸವರಾಜ ಎಲ್ ಜಾನೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸೇಡಂ ನ ಸಾಹಿತಿ ಜಗನ್ನಾಥ ಎಲ್ ತರನಳ್ಳಿ ಅವರು ಕೃತಿ ಅವಲೋಕನ ಮಾಡಲಿದ್ದಾರೆ. ಲೇಖಕರಿಗೆ ಗೌರವ ಪುರಸ್ಕಾರ ನೀಡಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here