ವಾಡಿ: ಪಟ್ಟಣದ ಐದು ಕೋಟಿ ವೆಚ್ಚದ ಮುಖ್ಯ ರಸ್ತೆಯ ಕಳಪೆ ಕಾಮಗಾರಿ ತಕ್ಷಣ ತಡೆಯಿರಿ ಎಂದು ಜಿಲ್ಲಾಧಿಕಾರಿಗಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮನವಿ ಮಾಡಿದ್ದಾರೆ.
ಈ ಮುಖ್ಯ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ತಮಗೆ ಈಗಾಗಲೇ ಸುಮಾರು ಸಲ,ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದೇವೆ.
ಮತ್ತೆ ಕೆಲವು ದಿನಗಳಿಂದ ಈಗ ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಪಟ್ಟಣದ ಶ್ರೀನಿವಾಸ ವೃತ್ತದಿಂದ ಇಂದಿರಾ ಚೌಕ (ಕಾಕಾ ಚೌಕ್ )ವರಿಗ್ಗೆ ನಡೆಯುತ್ತಿರುವ ಮುಖ್ಯ ರಸ್ತೆಗೆ ಕಬ್ಬಿಣದ ರಾಡ, ಪ್ಲಾಸ್ಟಿಕ್, ಹಾಕದೆ, ಮಧ್ಯದಲ್ಲಿನ ಕಂಬಗಳನ್ನು ತೆಗೆಯದೇ ರಸ್ತೆ ನಿರ್ಮಿಸಿ ಅಭಿವೃದ್ಧಿ ನೆಪದಲ್ಲಿ ಮತ್ತೆ ಸಾರ್ವಜನಿಕ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.
ಮೇಲಾಧಿಕಾರಿಗಳ ಶಾಮೀಲಾಗಿರುವುದರಿಂದಲೇ ರಾಜಾರೋಷವಾಗಿ ಕಳಪೆಗೆ ಮುಂದಾಗಿರುವುದ ಸಾಬೀತಾಗುತ್ತಿದೆ.
ಈಗಲಾದರೂ ಸಾರ್ವಜನಿಕ ಹಣವನ್ನು ಹಾಳಾಗುವುದನ್ನು ತಡೆದು ಗುತ್ತಿಗೆದಾರ ಹಾಗೂ ಸಂಭಂದಿಸಿದ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮಕೈಗೊಂಡು ಸಾರ್ವಜನಿಕ ಸಂಪತ್ತನ್ನು ಉಳಿಸಬೇಕು ಎಂದು ಕೇಳಿಕೊಂಡಿದ್ದಾರೆ.