ವಾಡಿ; ಪಟ್ಟಣದಲ್ಲಿ ನಾಯಿಗಳ ಹಾಗು ಹಂದಿಗಳ ಕಾಟ ತಡೆಗಟ್ಟಿ ಪಟ್ಟಣದಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ನಡೆದಾಡಲು ಅನುವು ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮನವಿ ಮಾಡಿದ್ದಾರೆ. ನಾಯಿಗಳ ,ಹಂದಿಗಳ ಕಾಟದ ಜೋತೆಗೆ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಹಾಕಿರುವ ನೀರಿನ ಪೈಪ್ ದಿಂದ ಅವೈಜ್ಞಾನಿಕ ಚರಂಡಿ ಯಿಂದ ಸಾರ್ವಜನಿಕರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ವಾರ ಪಟ್ಟಣದ ಪಿಲಕಮ್ಮ ಬಡಾವಣೆಯಲ್ಲಿ ನಾಯಿ ಯಿಂದ ತಪ್ಪಿಸಿಕೊಳ್ಳಲು ಹೋಗಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗೆ ನೀರಿನ ಪೈಪ್ ಗೆ ಎಡವಿ ವಿದ್ಯಾರ್ಥಿ ಒಬ್ಬಳು ಬಿದ್ದು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದಾಳೆ.
ಇಂತಹ ವಿಷಯಗಳ ಬಗ್ಗೆ ಸಾಕಷ್ಟು ಸಲ ತಮಗೆ ಮನವಿ ಮಾಡಿ ಗಮನಕ್ಕೆ ತಂದರು ಅದನ್ನು ತಾವು ಪರಿಗಣಿಸದೆ ಇರುವಿರಿ ತಮ್ಮ ಈ ವರ್ತನೆಯಿಂದ ಸಾರ್ವಜನಿಕರು ಇಂತಹ ಅನೇಕ ತೊಂದರೆ ನಿರಂತರವಾಗಿ ಅನುಭವಿಸುವಂತಾಗಿದೆ.
ತಾವು ಇನ್ನಾದರೂ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಬದ್ದರಾಗಿ ಎಂದು ತಮ್ಮಲ್ಲಿ ವಿನಂತಿ ಮಾಡುತ್ತೇವೆ.
ಬಡ ವಿದ್ಯಾರ್ಥಿಗೆ ಚಿಕಿತ್ಸೆಗೆ ಸ್ಪಂದಿಸಿ ಪರಿಹಾರ ನೀಡಿ, ಚರಂಡಿ, ರಸ್ತೆಯ ಜೊತೆಗೆ ನೀರಿನ ಪೈಪಲೈನ್ ಗಳನ್ನು ತಕ್ಷಣ ಸರಿಪಡಿಸಿ ಇಲ್ಲದಿದ್ದರೆ ನಾವು ಮುಂದಿನ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.