ಕಲಬುರಗಿ: ಕೇವಲ ಇಂಜಿನಿಯರ್, ವೈದ್ಯರಾಗಬೇಕೆಂಬ ಪರಿಮಿತಿ ವಿಸ್ತರಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೇವರ್ಗಿ ರಸ್ತೆಯ ಕೋಟನೂರ ಮಠದ ಹತ್ತಿರದ ಗುರುಪಾದೇಶ್ವರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಧ್ಯಾರ್ಥಿಗಳ ಬೀಳ್ಕೊಡುಗೆ “ಸಂಭ್ರಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್, ಮೆಡಿಕಲ್ ಕೋಸ್9 ಹೊರತುಪಡಿಸಿ ಹತ್ತು ಹಲವು ಮಾರ್ಗಗಳಿವೆ. ವಿದ್ಯಾರ್ಥಿಗಳ ಆಯ್ಕೆ ಸರಿಯಾಗಿರಬೇಕು. ಬೇರೆಯವರನ್ನು ಅನುಸರಿಸಬಾರದು. ಈ ವಿಷಯದಲ್ಲಿ ಪಾಲಕರು ಕೂಡ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು.
ಮೂಲ ವಿಜ್ಞಾನದತ್ತ ಚಿತ್ತ ಹರಿಸಬೇಕು. ಕೇವಲ ನೌಕರಿಗಾಗಿ ಓದು ಅಲ್ಲ. ದೇಶಸೇವೆ, ಸಮಾಜ ಸೇವೆಯತ್ತ ಗಮನ ನೀಡಬೇಕು ಎಂದು ಸಲಹೆನೀಡಿದರು.
ಭಾರತೀಯ ಪ್ರಾಚೀನ ಜ್ಞಾನ ಪರಂಪರೆ ಅದ್ಭುತವಾಗಿದೆ. ಜೋತಿಷ್ಯ ಶಾಸ್ತ್ರ ಬಳಸಿ ವಿಜ್ಞಾನಿಗಳು ಶೆಟ್ ಲೈಟ್ ಹಾರಿಸಲು ಸಿದ್ಧತೆ ನಡೆಸಿದ್ದಾರೆ. ಪುರುಷ ಸೂಕ್ತದಲ್ಲಿ ವಿದ್ಯುತ್ ತಯಾರಿಸುವ ವಿಧಾನದ ಬಗ್ಗೆ ಉಲ್ಲೇಖವಿದೆ. ಪುರುಷ ಸೂಕ್ತ ಅಧ್ಯಯನ ಮಾಡಿ ಅದರಲ್ಲಿ ಉಲ್ಲೇಖಿಸಿದ ಮಾದರಿಯಲ್ಲಿ ಗುಜರಾತ ರಾಜ್ಯದಲ್ಲಿ ವಿದ್ಯುತ್ ತಯಾರಿಸಲು ಚಿಂತನೆ ನಡೆದಿದೆ.
ವಿಜ್ಞಾನಿಗಳು ಇಂದು ಸಂಶೋಧನೆ ಮಾಡಿದ ಅಂಶಗಳು ಸಹಸ್ರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬರೆದಿಟ್ಟಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮಾತನಾಡಿ, ಕಾಲೇಜಿನ ಉಪನ್ಯಾಸಕರ ನಿರಂತರ ಶ್ರಮದಿಂದ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿದ್ದಾರೆ. ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಉತ್ತಮ ಉಪನ್ಯಾಸಕರಿಂದ ಮಾತ್ರ ಸಾಧ್ಯ. ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿದರು.
ಕಾಲೇಜಿನ ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯ ದರ್ಶಿ ಗುರುಪ್ರಸಾದ್ ಅಂಬಲಗಿ, ನಿರ್ದೆಶಕರಾದ ಸಿದ್ರಾಮಯ್ಯ ಹಿರೇಮಠ, ಚನ್ನಬಸಯ್ಯ ಗುರುವಿನ್, ಮೋಹಿನಿ ಬೂದುರ, ಅನಘಾ ವ್ಯಾಸ ಮುದ್ರ್ , ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…