ಬಿಸಿ ಬಿಸಿ ಸುದ್ದಿ

ಶಹಿದ್ ಭಗತ್ ಸಿಂಗ್, ಸುಖದೇವ್, ರಾಜ್ ಗುರು ನೆನಪಿನಲ್ಲಿ ಪಂಜಿನ ಮೆರವಣಿಗೆ

ಕಲಬುರಗಿ: ಇಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜ್ ಗುರು ರವರಿಗೆ ಬ್ರಿಟಿಷ್ ಸರಕಾರ ಗಲ್ಲಿಗೆ ಏರಿಸಿ 94 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ AIDYO ಸಂಘಟನೆಯಿಂದ ಪಂಜಿನ ಮೆರವಣಿಗೆಯನ್ನು ಮಾಡಲಾಯಿತು.

ಸಮಾಜವಾದಿ ಭಾರತ ಶಹೀದ ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಎ ಐ ಡಿ ವೈ ಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ್ ಎಸ್ ಹೆಚ್ ಹೇಳಿದರು ಅವರು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ನಗರದಲ್ಲಿ ಹಮ್ಮಿಕೊಂಡಿರುವ ಶಹೀದ್ ಭಗತ್ ಸಿಂಗ್ ರವರ ೯೪ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಾಗಿ ಮಾತನಾಡಿದರು.

ಮುಂದುವರೆದವರು ಬ್ರಿಟಿಷರ ಒಡೆದಾಳುವ ನೀತಿಯನ್ನು ಗುರುತಿಸಿದರು ನಾವು ಜಾತಿ ಧರ್ಮ ಎಂದು ಬಡಿದಾಡದೆ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಬೇಕೆಂದಿದ್ದರೂ ಕೇವಲ ರಾಜಕೀಯ ಸ್ವಾತಂತ್ರ‍್ಯ ಅಲ್ಲದೆ ದುಡಿಯುವ ಕೈಗಳಿಗೆ ಸ್ವತಂತ್ರ ಸಿಗಬೇಕು ಅದು ಸಮಾಜವಾದಿ ಭಾರತದ ಕನಸಾಗಿತ್ತು ಎಂದರು ಮುಂದುವರೆದ ಅವರು ಬಹಳ ಸಣ್ಣ ವಯಸ್ಸಿನಲ್ಲಿ ಅಪಾರವಾದ ಜ್ಞಾನವನ್ನು ಗಳಿಸಿದ ಭಗತ್ ಸಿಂಗ್ ಅವರ ಇಡೀ ಜೀವನ ಯುವ ಜನರಿಗೆ ಮಾದರಿಯಾಗಿದೆ ಎಂದರು.

ಇಂದಿನ ಬೆಲೆ ಏರಿಕೆ ನಿರುದ್ಯೋಗ ಬಡತನ ಎಲ್ಲಾ ಸಮಸ್ಯೆಗಳಿಗೆ ಭಗತ್ ಸಿಂಗ್ ಅವರ ವಿಚಾರ ಬಹಳ ಅವಶ್ಯವಾಗಿದ್ದು ಈ ವಿಚಾರವನ್ನು ಯುವ ಜನರು ತಿಳಿದುಕೊಂಡು ಸಂಘಟಿತ ಆಂದೋಲನ ಕಟ್ಟಿ ಸಮಾಜವಾದಿ ಭಾರತ ನಿರ್ಮಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯಕಾರಿಣ ಸದಸ್ಯರಾದ ರಮೇಶ್ ದೇವಕರ್ ಅವರು ಮಾತನಾಡುತ್ತಾ ಸರ್ಕಾರವು ಭಗತ್ ಸಿಂಗ್ ಅವರ ಇತಿಹಾಸವನ್ನು ಕಡೆಗಣ ಸುತ್ತಿದ್ದು ವಿರೋಧಿಸಿದ ಅವರು ಕೂಡಲೆ ಸರ್ಕಾರವು ಇವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದರು ಎಂದು ಆಗ್ರಹಿಸಿದರು.

ಪಂಜಿನ ಮೆರವಣ ಗೆಯು ರೈಲು ನಿಲ್ದಾಣ ಎದುರುಗಡೆ ಪ್ರಾರಂಭವಾಗಿ SVP ಚೌಕ್ ವರೆಗೆ ಘೋಷಗಳು ಕೂಗುತ್ತಾ ಆಗಮಿಸಿ ಸಮಾರೋಪ ಗೊಂಡಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಿದ್ದು ಚೌದರಿ, ಕಾರ್ಯದರ್ಶಿಗಳಾದ ಈಶ್ವರ್ ಕೆ, ಜಿಲ್ಲಾ ಸಮಿತಿ ಸದಸ್ಯರಾದ ರಘು, ಪವಾರ್, ದೇವರಾಜ್, ಮಿರಲ್ಕರ್, ದತ್ತು ಹುರೆಡಕರ, ಮಲ್ಲಿಕಾರ್ಜುನ್ ಹಾಗೂ ಇನ್ನಿತರ ಯುವಕರು ಭಾಗವಹಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಪುಟ್ಟರಾಜ ಲಿಂಗಶಟ್ಟಿ ವಹಿಸಿದ್ದರು.

emedialine

Recent Posts

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ

ಕಲಬುರಗಿ: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ…

2 mins ago

ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು ಪೂರೈಕೆ

ವಾಡಿ: ಮಾಡುತ್ತಿರುವ ಕುಡಿವ ನೀರಿನಲ್ಲಿ ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು…

5 mins ago

ಬಸವರಾಜ್ ಎಸ್ ಜಿಳ್ಳೆಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಳ್ಳೆ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

5 hours ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

5 hours ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

5 hours ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

5 hours ago