ಕಾರ್ಯಕರ್ತರ ಕಡೆಗಣನೆ: ಚಿತ್ತಾಪುರದಲ್ಲಿ ಸಂಸದ ಡಾ. ಜಾಧವ್ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

0
165

ಚಿತ್ತಾಪುರ: ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರು ಶನಿವಾರ ಕರೆದ ಸುದ್ದಿಗೋಷ್ಠಿ ಮುಗಿದ ಬೆನ್ನಲ್ಲೇ ಪತ್ರಕರ್ತರ ಎದುರೇ ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಅವರು ಮಧ್ಯೆ ಪ್ರವೇಶಿಸಿ ಮಾತನಾಡಿ, ಬಿಜೆಪಿ ಮುಖಂಡರನ್ನು ಕಾರ್ಯಕರ್ತರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ನಿಷ್ಣಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಚುನಾವಣೆ ಬಂದಾಗ ಗ್ರಾಮಗಳಲ್ಲಿ ಜನರೊಂದಿಗೆ ಜಗಳವಾಡಿ ಮತ ಹಾಕಿಸುತ್ತೇವೆ. ಕಾರ್ಯಕರ್ತರನ್ನು ಕೇವಲ ಚುನಾವಣೆಗೆ ಬಳಸಲಾಗುತ್ತಿದೆ. ಹಿರಿಯರು, ಕಿರಿಯರು ಎಂಬ ಗೌರವ ಸಿಗುತ್ತಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆಯಲ್ಲ. ಪಕ್ಷದಲ್ಲಿ ಸಮಸ್ಯೆ ಹೀಗೆ ಮುಂದುವರೆದರೆ ಚುನಾವಣೆ ಎದುರಿಸುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಂತೆ ಅಯ್ಯಪ್ಪ ಅವರನ್ನು ಸಮಾಧಾನ ಪಡಿಸಲು ಶರಣಗೌಡ ಭೀಮನಳ್ಳಿ ಅವರು ಮುಂದಾದಾಗ ಶರಣಗೌಡರೇ ಇದು ನಿಮಗೆ ಸಂಬಂಧಿಸಿದ್ದಲ್ಲ ಎಂದು ದೂರ ಹೋಗಿ ಎನ್ನುತ್ತಿದ್ದಂತೆ, ನಾನಾ ನೀನಾ ಎಂಬ ವಾಗ್ವಾದ ಜೋರಾಯಿತು. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ ಎಂದು ಅನೇಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಷ್ಟರಲ್ಲಿ ಸಂಸದ ಡಾ. ಉಮೇಶ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಬಿಜೆಪಿ ಚುನಾವಣೆ ಉಸ್ತುವಾರಿ ಶರಣಪ್ಪ ತಳವಾರ್ ಅವರು ಮಧ್ಯೆ ಪ್ರವೇಶಿಸಿ ಮಾತನಾಡಿ, ಪತ್ರಿಕಾಗೋಷ್ಠಿ ಮುಗಿದ ನಂತರ ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸೋಣ ಎಂದು ಸಮಾಧಾನ ಪಡಿಸಿದರೂ ಅಯ್ಯಪ್ಪ ಅವರು ಸಮಸ್ಯೆ ಕೂಡಲೇ ಆಲಿಸಿ ಪರಿಹಾರ ಮಾಡಿರಿ ಎಂದರು.

ಕೆಲ ಕಾಲ ಗದ್ದಲ ಉಂಟಾಗಿದ್ದರಿಂದ ಪದಾಧಿಕಾರಿಗಳ ಸಬೆ ನಡೆಸಲು ಮುಖಂಡರು ಕಾರ್ಯಕರ್ತರನ್ನು ಕೂಡಿಸಲು ಹರಸಾಹಸಪಟ್ಟರು. ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಎಲ್ಲಿಯೂ ಸರಿಯಲ್ಲ ಎಂಬ ವಾತಾವರಣ ಕಂಡು ಬಂತು.

ಸಂಸದ ಡಾ. ಉಮೇಶ್ ಜಾಧವ್ ಅವರು ಪತ್ರಿಕಾಗೋಷ್ಠಿ ವೇದಿಕೆಗೆ ಬರುತ್ತಿದ್ದಂತೆ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಎಲ್ಲರೊಂದಿಗೆ ಕೈಮುಗಿಯುತ್ತಿದ್ದಂತೆ ಅಲ್ಲಿಯೇ ಇದ್ದ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೇನೋರ್ ಅವರನ್ನು ಮರೆತು ಮುಂದೆ ಸಾಗಿದರು. ಅಲ್ಲಿದ್ದ ಮುಖಂಡರೊಬ್ಬರು ಸಂಸದರ ಗಮನಕ್ಕೆ ತಂದಾಗ ಇದರಿಂದಾಗಿ ಕುಪಿತಗೊಂಡ ಎಮ್ಮೇನೋರ್ ಅವರು ಮಾತನಾಡಿ, ಕಳೆದ ಐದು ವರ್ಷದಿಂದ ನಮ್ಮೊಂದಿಗೆ ಹೀಗೆಯೇ ನಡೆದುಕೊಳ್ಳುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕೈಕುಲಕಲು ಬಂದಾಗ ದೂರದಿಂದಲೇ ಕೈಮುಗಿದು ಅಸಮಾಧಾನ ಹೊರಹಾಕಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here