ಬಿಸಿ ಬಿಸಿ ಸುದ್ದಿ

ರಾಷ್ಟ್ರದ ಪ್ರಗತಿಗೆ ವಿಶ್ವೇಶ್ವರಯ್ಯನವರ ಚಿಂತನೆಗಳು ಅಗತ್ಯ: ಬಸವರಾಜ ಕುಲಕರ್ಣಿ

ಕಲಬುರಗಿ: ಪ್ರತಿಯೊಂದು ರಾಷ್ಟ್ರವೂ ಪ್ರಗತಿ ಹೊಂದಬೇಕಾದರೆ ಯೋಜನೆಗಳು ತುಂಬಾ ಅಗತ್ಯವಿದೆಯೆಂದು ಪ್ರತಿಪಾದಿಸಿ, ನಮ್ಮ ರಾಷ್ಟ್ರವನ್ನು ಯೋಜನಾಬದ್ಧವಾಗಿ ರೂಪುಗೊಳಿಸಿದ ವಿಶ್ವೇಶ್ವರಯ್ಯನವರ ಕೊಡುಗೆ ಬಹಳ ಅಮೂಲ್ಯವಾಗಿದೆ. ಅವರ ಚಿಂತನೆಗಳನ್ನು ಪ್ರತಿಯೊಂದು ರಾಷ್ಟ ಅಳವಡಿಸಿಕೊಂಡರೆ ಸಮೃದ್ಧವಾಗಲು ಸಾಧ್ಯವಿದೆಯೆಂದು ಖ್ಯಾತ ಸಿವಿಲ್ ಇಂಜಿನೀಯರ್ ಬಸವರಾಜ ಕುಲಕರ್ಣಿ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಆಳಂದ ರಸ್ತೆಯ ದೇವಿನಗರಲ್ಲಿರುವ ’ಎಮ್.ಎಮ್.ಎನ್. ಟ್ಯೂಟೋರಿಯಲ್ಸ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರಹಮ್ಮಿಕೊಳ್ಳಲಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡುತ್ತಿದ್ದರು.
ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿಗೆ ದೊಡ್ಡ ಗೌರವವನ್ನು ನೀಡಲು ತಮ್ಮ ಜನ್ಮದಿನವನ್ನು ’ಇಂಜಿನೀಯರ‍್ಸ್ ದಿನ’ವನ್ನಾಗಿ ಆಚರಿಸಲು ಹೇಳಿರುವುದು ತುಂಬಾ ಮಹತ್ವಪೂರ್ಣವಾಗಿದೆ. ಇಂತಹ ಅಮೂಲ್ಯವಾದ ಜ್ಞಾನರತ್ನ ಅರ್ಥಶಾಸ್ತ್ರಜ್ಞರಾಗಿ, ಇಂಜಿನೀಯರಾಗಿ, ತತ್ವಜ್ಞಾನಿಗಳಾಗಿ, ನಮ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಹಗಲು-ರಾತ್ರಿಯೆನ್ನದೇ ಶ್ರಮಿಸಿ, ದೇಶ ಎಂದಿಗೂ ಮರೆಯಲಾಗದ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದರು.

ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಮೈಸೂರು ಸಂಸ್ಥಾನದ ಮುಖ್ಯ ಇಂಜಿನೀಯರಾಗಿ, ಲೋಕೋಪಯೋಗಿ ಕಾರ್ಯದರ್ಶಿಯಾಗಿ, ರೈಲ್ವೆ ವಿಸ್ತರಣೆ, ಕಾವೇರಿ ನದಿಗೆ ಕನ್ನಂಬಾಡಿ ಅಣೆಕಟ್ಟು ಯೋಜನೆ ತಯಾರಿಕೆ ಮತ್ತು ನಿರ್ಮಾಣ, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ’ಕನ್ನಡ ಸಾಹಿತ್ಯ ಪರಿಷತ್’ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೈಸೂರು ಸಂಸ್ಥಾನದ ದಿವಾನರಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದರು. ಅವರ ಈ ಸೇವಾ ಅವಧಿಯಲ್ಲಿ ಮೈಸೂರು ಸಂಸ್ಥಾನ ಇಡೀ ಭಾರತದಲ್ಲಿ ಆದರ್ಶ ಸಂಸ್ಥಾನವಾಗಿ ರೂಪುಗೊಂಡಿತ್ತು ಎಂದರು.

ಪ್ರತಿಯೊಬ್ಬರು ತಪ್ಪದೇ ದಿನಕ್ಕೆ ಕನಿಷ್ಠ ೮ ಗಂಟೆ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು, ಎಲ್ಲರೂ ಶಿಕ್ಷಣ ಪಡೆದು ರಾಷ್ಟ್ರದ ಸೇವೆಯನ್ನು ಮಾಡಬೇಕು, ಪ್ರತಿಯೊಬ್ಬರು ಉತ್ಸಾಹದಿಂದ, ಸಹಕಾರ ಮನೋಭಾವದಿಂದ, ಪರಸ್ಪರ ನಂಬಿಕೆಯಿಂದ ಕೂಡಿ ಕೆಲಸ ಮಾಡುವುದನ್ನು ಬಳಿಸಿಕೊಳ್ಳಬೇಕು. ಗಳಿಕೆಯ ೧/೧೨ ಭಾಗ ಅಂದರೆ, ಒಂದು ವರ್ಷದ ವೇತನದಲ್ಲಿ ಒಂದು ತಿಂಗಳಿನ ವೇತನವನ್ನು ಉಳಿತಾಯ ಮಾಡಿರಿ, ಇದು ಭವಿಷ್ಯದ ಅನಿಶ್ಚಿತ ಘಟನೆಗಳಿಗೆ ಸಹಾಯವಾಗುತ್ತದೆಯೆಂದು ಹೇಳಿದ್ದಾರೆಂದರು.

ಕೈಗಾರಿಕೆಗಳನ್ನು ಅಧುನಿಕರಿಸಿ, ಕೆಲಸದ ವಿಧಾನವನ್ನು ಉತ್ತಮಗೊಳಿಸುವ ಮೂಲಕ ತಂತ್ರಜ್ಞಾನವನ್ನು ಹೆಚ್ಚಿಸಬೇಕು, ’ಕೈಗಾರೀಕರಣ ಇಲ್ಲವೇ ವಿನಾಶ’ ಎಂಬ ಹೇಳೀಕೆಯನ್ನು ನೀಡಿ, ಭಾರತೀಯರು ಹೆಚ್ಚಾಗಿ ಉದ್ದಿಮೆಗಳನ್ನು ಸ್ಥಾಪಿಸಿ, ಸ್ವಾಲಂಬನೆಯಾಗಬೇಕು, ಆಮದು ಕಡಿಮೆ ಮಾಡಿ,ರಫ್ತು ಹೆಚ್ಚು ಮಾಡಿದಾಗ ಮಾತ್ರ ನಮ್ಮ ದೇಶ ಪ್ರಗತಿ ಹೊಂದುತ್ತದೆ, ಜೀವನದಲ್ಲಿ ಶಿಸ್ತು, ನೀತಿ, ನಿಯಮ ಉತ್ತಮವಾದ ಸಾಮಾಜಿಕ ಪದ್ದತಿಗಳು ಇರಬೇಕು, ಚಿಂತನಾಶೀಲನಾಗಿರಿ ಮತ್ತು ಸಾಂಘಿಕವಾಗಿ ಕಾರ್ಯತತ್ಪರಾಗಿರಿ,ನಿಮ್ಮ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ರಾಷ್ಟ್ರದ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಿರಿ, ಕೆಲಸವೇ ಪೂಜೆಯೆಂದು ಕಾರ್ಯನಿರ್ವಹಿಸಿದರೆ ದೇಶ ಅಭಿವೃದ್ಧಿಯಾಗುತ್ತದೆಯೆಂಬುದು ವಿಶ್ವೇಶ್ವರಯ್ಯನವರ ಚಿಂತನೆಯಾಗಿತ್ತೆಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಮರ ಬಂಗರಗಿ, ನರಸಪ್ಪ ಬಿರಾದಾರ ದೇಗಾಂವ, ಲಕ್ಷ್ಮೀಪುತ್ರ ಬಿರಾದಾರ, ಪ್ರಭಾಕರ ಎನ್.ವಾಕಡೆ, ವಿವೇಕಾನಂದ ಮಠಪತಿ,ಕಲ್ಯಾಣರಾವ ಬಿರಾದಾರ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

4 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

13 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

13 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

24 hours ago