ಸಂಸ್ಕಾರಯುತ ಪ್ರತಿಭಾವಂತ ಮಕ್ಕಳು ದೇಶದ ಅಮೂಲ್ಯ ಆಸ್ತಿ

0
74

ಕಲಬುರಗಿ: ಮಕ್ಕಳು ಮುಗ್ದ ಮನಸ್ಸಿನವರಾಗಿದ್ದು, ಅವರಿಗೆ ಬಾಲ್ಯದಲ್ಲಿರುವಾಗಲೇ ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಇದು ಮುಂದೆ ಅವರ ಜೀವನ ಸುಂದರಗೊಳಿಸಿಕೊಳ್ಳಲು ಪೂರಕವಾಗುತ್ತದೆ. ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿದ್ದು, ಅದನ್ನು ಪಾಲಕ-ಪೋಷಕ ವರ್ಗ, ಶಿಕ್ಷಕರು ಗುರ್ತಿಸಿ ಪ್ರೋತ್ಸಾಹ ನೀಡಬೇಕು. ಸಂಸ್ಕಾರಯುತ ಪ್ರತಿಭಾವಂತ ಮಕ್ಕಳು ದೇಶದ ಅಮೂಲ್ಯ ಆಸ್ತಿಯಾಗಿದ್ದಾರೆ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಭಿಮತಪಟ್ಟರು.

ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ ಸುಪುತ್ರಿ ಬಸವಶ್ರೀಯ 5ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಗರದ ಸುಪರ್ ಮಾರ್ಕೆಟ್‍ನ ‘ನ್ಯೂ ಸಪ್ತಗಿರಿ ಅರೇಂಜ್ ಹೋಟೆಲ್’ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಸಂಜೆ ಜರುಗಿದ ಬಾಲ ಪ್ರತಿಭೆಗಳಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಮಾತನಾಡಿ, ಪ್ರಸುತ್ತ ದಿನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ, ಮಕ್ಕಳನ್ನೆ ದೊಡ್ಡ ಆಸ್ತಿಯನ್ನಾಗಿ ಮಾಡಬೇಕು. ಯಾವುದೇ ವ್ಯಕ್ತಿ ಜೀವನದಲ್ಲಿ ಶ್ರೇಷ್ಟ ವ್ಯಕ್ತಿತ್ವವನ್ನು ಹೊಂದಿ, ಉನ್ನತವಾದ ಸಾಧನೆಯನ್ನು ಮಾಡಬೇಕಾದರೆ, ನಿರಂತರವಾದ ಪ್ರಯತ್ನ ತುಂಬಾ ಅಗತ್ಯವಾಗಿದೆ. ಮಕ್ಕಳಿಗೆ ಸೋಮಾರಿ ಗುಣಗಳನ್ನು ಕಲಿಸದೆ, ಪ್ರಯತ್ನಶೀಲ ಗುಣಗಳನ್ನು ಬೆಳೆಸಬೇಕು. ಬಳಗವು ಪ್ರತಿಭಾವಂತ ಮಕ್ಕಳನ್ನು ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ವಿವೇಕ ಮಹಿಳಾ ಕಾಲೇಜಿನ ಅಧ್ಯಕ್ಷೆ ಡಾ.ಭಾಗಿರತಿ ಎಚ್.ಗುಡ್ಡೇವಾಡಿ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಮಹಿಳಾ ಚಿಂತಕಿ ಜಯಶ್ರೀ ಎಚ್.ಬಿ.ಪಾಟೀಲ, ಬಸವಶ್ರೀ ಎಚ್.ಪಾಟೀಲ, ಬಸವಭುವನ ಎಚ್.ಪಾಟೀಲ ವೇದಿಕೆ ಮೇಲಿದ್ದರು. ಪ್ರತಿಭಾವಂತ ಮಕ್ಕಳ ಪಾಲಕರಾದ ಡಾ.ಸುನೀಲಕುಮಾರ ಎಚ್.ವಂಟಿ, ಸಿದ್ದರಾಮ ತಳವಾರ, ಬಸವರಾಜ ಹೆಳವರ ಯಾಲಗಿ, ಅಸ್ಲಾಂ ಶೇಖ್, ಗುರುರಾಜ ಮೈಲ್ವಾರ, ಕಜಾಪ ಜಿಲ್ಲಾಧÀ್ಯಕ್ಷ ಎಂ.ಬಿ.ನಿಂಗಪ್ಪ, ಕೆಎಚ್‍ಬಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ವರ ಸರಡಗಿ, ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ, ಕ.ರಾ.ಪ್ರಾ.ಶಾ.ಶಿ.ಸಂ. ಜಿಲ್ಲಾ ಉಪಾಧಕ್ಷ ಪರಮೇಶ್ವರ ಬಿ.ದೇಸಾಯಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಾವಂತ ಮಕ್ಕಳಾದ ಸಮೀಕ್ಷಾ ಎಸ್.ತಳವಾರ(ಕ್ರೀಡೆÀ), ಸುದಿಕ್ಷಾ ಬಿ.ಹೆಳವರ(ಅಬಾಕಸ್), ಸಾನ್ವಿ ಡಾ.ಎಸ್.ವಂಟಿ(ಸಂಗೀತÀ), ಬೃಂದಾ ಜಿ.ಮೈಲ್ವಾರ (ಉತ್ತಮ ವಿದ್ಯಾರ್ಥಿ ಪ್ರಸಸ್ತಿ ಪುರಸ್ಕøತೆ), ಐಯೇಶಾ ಸಿದ್ದಿಕಾ (ಉತ್ತಮ ವಿದ್ಯಾರ್ಥಿ ಪ್ರಸಸ್ತಿ ಪುರಸ್ಕøತೆ) ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.

ಬಳಗದ ಸಹ ಸಂಚಾಲಕ ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ಸಂಚಾಲಕ ನಿರೂಪಿಸಿ, ವಂದಿಸಿದರು. ಶರಣ ಚಿಂತಕರಾದ ಸಿದ್ದರಾಮ ಯಳವಂತಗಿ ಮತ್ತು ರೇವಣಸಿದ್ದಪ್ಪ ಪಾಟೀಲ ಅವರು ಬಸವ ತತ್ವ ಪದ್ದತಿಯ ಹುಟ್ಟುಹಬ್ಬ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here