ಕಲಬುರಗಿ: ಆಂಧ್ರಪ್ರದೇಶದ ನಂದ್ಯಾಳ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬರುವ ಏಪ್ರಿಲ್ 6 ರಿಂದ 10ರ ವರೆಗೆ ಯುಗಾದಿ ಮಹೋತ್ಸವ ಜರುಗುತ್ತಿದ್ದು, ಈ ಅವಧಿಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ವಾಮಿಗಳ ಸ್ಪರ್ಶ ದರ್ಶನ ಬದಲಾಗಿ ಅಲಂಕಾರಿಕ ದರ್ಶನದ (ಲಘು ದರ್ಶನ) ವ್ಯವಸ್ಥೆ ಮಾಡಲಾಗಿದೆ.
ಯುಗಾದಿ ಮಹೋತ್ಸವ ಸಂದರ್ಭದಲ್ಲಿ ಸುಮಾರು 6 ಲಕ್ಷ ಭಕ್ತಾಧಿಗಳು ಈ ಮಹಾಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಕರ್ನಾಟಕದ ಉತ್ತರ ಕರ್ನಾಟಕ ಪ್ರಾಂತ್ಯದಿಂದ, ಮಹಾರಾಷ್ಟ್ರದ ಸೋಲಾಪೂರ, ಸಾಂಗ್ಲಿಯಿಂದ ಬರುವರು. ಕೆಲವರು ಪಾದಯಾತ್ರೆ ಮೂಲಕ ಸಹ ಆಗಮಿಸುವರು. ಸರ್ವ ಭಕ್ತರಿಗೆ ಸ್ವಾಮಿಗಳ ದರ್ಶನ ಭಾಗ್ಯ ಸಿಗಲೆಂದು ಈ ವ್ಯವಸ್ಥೆ ಮಾಡಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್ ಡಿ.ಪೆದ್ದಿರಾಜು ಮನವಿ ಮಾಡಿದ್ದಾರೆ.
ಉತ್ಸವದ ಮುನ್ನ ಮಾರ್ಚ್ 27 ರಿಂದ ಏಪ್ರಿಲ್ 5ರ ವರೆಗೆ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ 1500 ಜನರಂತೆ 4 ಹಂತಗಳಲ್ಲಿ ಮಾತ್ರ ಭಕ್ತಾದಿಗಳಿಗೆ ಸ್ವಾಮಿಗಳ ಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ದೇವಸ್ಥಾನದಲ್ಲಿ ಕರೆಂಟ್ ಬುಕ್ಕಿಂಗ್ ಮೂಲಕ 500 ರೂ. ದರದ ಟಿಕೆಟ್ ಪಡೆದು ಭಕ್ತಾದಿಗಳು ಸ್ವಾಮಿಗಳ ಸ್ಪರ್ಶ ದರ್ಶನ ಪಡೆಯಬಹುದಾಗಿದೆ.
ಇನ್ನೂ ಯುಗಾದಿ ಮಹೋತ್ಸವ ಸಂದರ್ಭದಲ್ಲಿನ ದರ್ಶನ ವ್ಯವಸ್ಥೆಯ ಬದಲಾವಣೆ ಮತ್ತು ಕಲ್ಪಿಸಿರುವ ವ್ಯವಸ್ಥೆ ಕುರಿತಂತೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬ್ಕವಿಯಲ್ಲಿ ಕಳೆದ ಮಾ.21 ರಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಭಕ್ತ ವೃಂದದ ವಿವಿಧ ವೃಂದ ಸಂಘಗಳ ಸಮನ್ವಯ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಕಲ ವ್ಯವಸ್ಥೆ: ಯುಗಾದಿ ಹಬ್ಬದ ಪ್ರಯುಕ್ತ ಬರುವ ಲಕ್ಷಾಂತರ ಭಕ್ತರಿಗೆ ಸ್ವಾಮಿಗಳ ದರ್ಶನದಿಂದ ಹಿಡಿದು ಅವರ ಅನೂಕೂಲಕ್ಕೆ ಪಾದಚಾರಿ ಮಾರ್ಗ, ವಿಶ್ರಾಂತಿ ಹೊರಾಂಗಣದ ಚಪ್ಪರಗಳು, ಕುಡಿಯುವ ನೀರು, ಅನ್ನಸಂತರ್ಪಣೆ, ಸ್ಥಳೀಯವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಕ್ಕೆ ಉಚಿತ ಸಾರಿಗೆ ಬಸ್, ಉಚಿತ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯಚಸ್ಥೆ ಕಲ್ಪಸಿದೆ. ಇದಲ್ಲದೆ ಸಂಪೂರ್ಣ ಶ್ರೀಶೈಲಂ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೈರ್ಮ್ಯಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…