ಬಿಸಿ ಬಿಸಿ ಸುದ್ದಿ

ಪ್ರಿಯಾಂಕ್ ಖರ್ಗೆಗೆ ಮೋದಿ – ಜಾಧವ್ ಭಯ ಶುರುವಾಗಿದೆ: ಸಂಸದ ಡಾ. ಉಮೇಶ್ ಜಾಧವ್

ಕಲಬುರಗಿ: ಈ ಲೋಕಸಭಾ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿಯ ಜನಪ್ರಿಯತೆ ಕಂಡು ಮೋದಿ ಮತ್ತು ಜಾಧವ್ ಭಯ ಶುರುವಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಬಣ್ಣಿಸಿದ್ದಾರೆ.

ಉತ್ತರ ಮಂಡಲದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ರಾಷ್ಟ್ರದಾದ್ಯಂತ ಮೋದಿ ಗಾಳಿ ಬೀಸುತ್ತಿದ್ದು ಕಾಂಗ್ರೆಸ್ಸಿಗೆ ತೀವ್ರ ಭಯ ಹುಟ್ಟಿಕೊಂಡಿದೆ ಕಲಬುರ್ಗಿಯಲ್ಲಿ ಪ್ರಜ್ಞಾವಂತ ಮತದಾರರು ಮೋದಿ ಅವರಿಗೆ ತೋರಿಸುತ್ತಿರುವ ಬೆಂಬಲ ಹಾಗೂ ನನ್ನ ಬಗ್ಗೆ ತೀವ್ರ ಭಯ ಆವರಿಸಿಕೊಂಡು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಜೊತೆಗೆ ನಮ್ಮ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ತೊಂದರೆ ಕೊಡುವ ಹೀನ ಮಟ್ಟಕ್ಕೆ ಇಳಿದಿದ್ದಾರೆ ಎಂದು ಜಾಧವ್ ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಅಸ್ತ್ರದ ವಿರುದ್ಧ ಪ್ರತಿ ಅಸ್ತ್ರದೊಂದಿಗೆ ಹೋರಾಡಲು ನಿಷ್ಠಾವಂತ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ಆ ಬಗ್ಗೆ ಎಳ್ಳಷ್ಟೂ ಚಿಂತಿಸದೆ ಉಸ್ತುವಾರಿ ಸಚಿವರು ನಾಪತ್ತೆಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸುವುದೇ ಉಸ್ತುವಾರಿ ಸಚಿವರ ಗುರಿಯಾಗಿದ್ದು ಜನ ಸೇವೆಯನ್ನು ಮರೆತಿರುವುದರಿಂದ ಈ ಚುನಾವಣೆಯಲ್ಲಿ ಪ್ರಜ್ಞಾವಂತ ನಾಗರಿಕರು ತಕ್ಕ ಉತ್ತರ ನೀಡಲಿದ್ದಾರೆ.  ಸುಳ್ಳುಗಳ ಕಂತೆಗಳನ್ನು ಪೋಣಿಸಿ ಕಟ್ಟುಕಥೆಯನ್ನು ಕಟ್ಟಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವಾಗಿಸಲು ಹೆಣಗಾಡುತ್ತಿದ್ದಾರೆ ಎಂದು ದುರಿದರು.

ಭಾರತ ದೇಶದಲ್ಲಿ ತಲಾ ಆದಾಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಕಲ್ಬುರ್ಗಿಯಾಗಿದ್ದು ಸುಮಾರು 50 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಇದಕ್ಕೆ ಉತ್ತರ ನೀಡಬೇಕು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು ರಾಷ್ಟ್ರದಲ್ಲಿ ಹಾಗೂ ಕಲ್ಬುರ್ಗಿಯಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ನೋಡಿ ಜೀರ್ಣಿಸಿಕೊಳ್ಳಲಾಗದೆ ವೃಥಾರೋಪ ಮಾಡಿ ಕಾಲಹರಣ ಮಾಡುತ್ತಿದೆ. ಕರೋನಾ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಕಾಣ ಸಿಗದೇ ಕರೋನ ಲಸಿಕೆ ಹಾಕಿಸಿಕೊಂಡರೆ ಅಂಗವಿಕಲರು ಹುಟ್ಟುತ್ತಾರೆ ಎಂಬ ಅಪಪ್ರಚಾರವನ್ನು ಎಸಗಿದರು ಕಾಂಗ್ರೆಸ್ ನವರು ಮುಗ್ಧ ಜೀವಗಳೊಂದಿಗೆ ಚೆಲ್ಲಾಟವಾಡಿದರು ಎಂದು ಆರೋಪಿಸಿದರು.

ಕಾಂಗ್ರೆಸಿಗರು ತಾವು ಮಾತ್ರ ಸದ್ದಿಲ್ಲದೆ ಲಸಿಕೆ ಹಾಕಿಸಿಕೊಂಡು ಸಾಮಾನ್ಯ ಜನರು ಲಸಿಕೆ ತೆಗೆದುಕೊಳ್ಳದಂತೆ ಪ್ರಚಾರ ಮಾಡಿದ್ದು ಕಾಂಗ್ರೆಸ್ಸಿಗರ ಕೆಟ್ಟ ಮನಸ್ಸಿಗೆ ಪ್ರತ್ಯಕ್ಷ ನಿದರ್ಶನವೆಂದರು. ಈ ಭಾಗ ಮತ್ತು ಇಲ್ಲಿನ ಜನರು ಮುಂದುವರಿದರೆ ತಮಗೆ ಮತ್ತೆ ಏನು ಕೆಲಸವಿಲ್ಲವೆಂದು ಮನಗಂಡು ಕಾಂಗ್ರೆಸ್ ಅಭಿವೃದ್ಧಿಯನ್ನು ವಿರೋಧಿಸುತ್ತಿದೆ. ಜನ ಹುಷಾರಾಗಬಾರದು ಎನ್ನುವುದೇ ಕಾಂಗ್ರೆಸ್ಸಿನ ಮನೋಧರ್ಮ ವಾಗಿದೆ. ನೂರಾರು ಅಭಿವೃದ್ಧಿಗಳನ್ನು ಮಾಡಿದರೂ ಸುಖಾಸುಮ್ಮನೆ ಟೀಕೆ ಮಾಡಿ ಆತ್ಮ ಸಂತೋಷ ಪಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ಸಿನ ಈ ಎಲ್ಲಾ ಅಕ್ರಮಗಳನ್ನು ಬಯಲಿಗೆ ಎಳೆದು ಮತದಾರರ ಮುಂದಿಡಲು ಕಲ್ಬ ಉತ್ತರದಲ್ಲಿ ಚಂದು ಪಾಟೀಲ್ ಹಾಗೂ ಕಲ್ಬುರ್ಗಿ ದಕ್ಷಿಣದಲ್ಲಿ ದತ್ತಾತ್ರೇಯ ಪಾಟೀಲ್ ಸಾರಥ್ಯದಲ್ಲಿ ಕಾರ್ಯಕರ್ತರ ಪಡೆ ಸಜ್ಜಾಗಿ ನಿಂತಿದೆ. ಕಲ್ಬುರ್ಗಿಯಲ್ಲಿ ಬಿಜೆಪಿ ಗೆಲ್ಲೋದು ಶತಸಿದ್ದ ಎಂದು ಜಾಧವ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲು ಮತ್ತು ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶಾಸಕರು ಗೆಲ್ಲುವಂತೆ ಅಡಿಪಾಯ ಹಾಕೋಣ ಎಂದು ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡು ಹೇಳಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago