ಬಿಸಿ ಬಿಸಿ ಸುದ್ದಿ

ಎಡದಡೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ರೈತ ಹೋರಾಟಗಾರರ ಒತ್ತಾಯ

ಸುರಪುರ:ತಾಲೂಕಿನ ಕೆಂಭಾವಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆಯ ಮೂಲಕ ಕೆಳಭಾಗದ ಗ್ರಾಮಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಹರಿಸುವಂತೆ ಆಗ್ರಹಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕೃಷ್ಣಾ ನದಿಯ ನೀರು ನಮ್ಮ ಜಿಲ್ಲೆಯ ಸುರಪುರ,ಶಹಾಪುರ,ಯಾದಗಿರಿ,ವಡಿಗೇರ ತಾಲೂಕಿನ ನೂರಾರು ಗ್ರಾಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ,ಇದನ್ನು ಪರಿಹರಿಸಲು ನೀರು ಹರಿಸುತ್ತಿಲ್ಲ,ಆದರೆ ನಮ್ಮ ನಾರಾಯಣಪುರ ಜಲಾಶಯದ ನೀರು ಸಿಂದಗಿ ತಾಲೂಕಿಗೆ ಹಾಗೂ ಭೀಮಾ ನದಿಗೆ 1 ಟಿ.ಎಮ್.ಸಿ ನೀರು ಹರಿಸುವ ಮೂಲಕ ನವiಗೆ ತಾರತಮ್ಯ ಎಸಗಲಾಗುತ್ತಿದೆ.ಕೂಡಲೇ ಅಧಿಕಾರಿಗಳು ಮತ್ತು ಸರಕಾರ ಎಚ್ಚೆತ್ತು ಕೆಂಭಾವಿ ಬಳಿಯ ಎಡದಂಡೆ ಕಾಲುವೆ ಮೂಲಕ ಕೆಳಭಾಗದ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗಲು ನೀರು ಹರಿಸಬೇಕು ಮತ್ತು ಕೆರೆಗಳನ್ನು ತುಂಬಿಸಬೇಕು ಮತ್ತು ಹಳ್ಳಗಳಿಗೆ ನೀರು ಹರಿಸಬೇಕು,ಸೋಮವಾರದ ವರೆಗೆ ಕಾದು ನೋಡುತ್ತೇವೆ,ಸೋಮವಾರದವರೆಗೆ ನೀರು ಬರದಿದ್ದಲ್ಲಿ ಅನಿವಾರ್ಯವಾಗಿ ರಸ್ತೆ ತಡೆ ಹಾಗೂ ಕಾಲುವೆ ಗೇಟ್‍ಗಳ ಬಳಿಯ ಎಲ್ಲಾ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳ,ತಾ.ಮ.ವಾಲ್ಮೀಕಿ ನಾಯಕ ಸಂಘದ ಪ್ರ.ಕಾ ವೆಂಕಟೇಶ ಬೇಟೆಗಾರ,ರೈತ ಸಂಘದ ಹುಣಸಗಿ ತಾ.ಅಧ್ಯಕ್ಷ ಶರಣಗೌಡ ತಳ್ಳಳ್ಳಿ ಇತರರು ಮಾತನಾಡಿದರು.

ಮನವಿ ಸ್ವೀಕರಿಸಿದ ತಹಸಿಲ್ದಾರ್ ಕೆ.ವಿಜಯಕುಮಾರ ಮಾತನಾಡಿ,ಈಗಾಗಲೇ ಎಡದಂಡೆ ಕಾಲುವೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. 0.18 ಟಿ.ಎಮ್.ಸಿ ನೀರು ಹರಿಸಲು ಮನವಿ ಮಾಡಲಾಗಿದೆ,ಅಲ್ಲದೆ ಕೆಂಭಾವಿ ಬಳಿಯ ಎಸ್ಕೆಪ್ ಗೇಟ್‍ಲ್ಲಿ ಬಿರುಕು ಬಿಡಲಾಗಿದೆ ಎಂದು ತಿಳಿದುಬಂದಿದೆ,ಅದರ ದುರಸ್ಥಿಗಾಗಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರಿಗೆ ವರದಿ ಸಲ್ಲಿಸಲಾಗುವುದು,ಇಂದು ತಾವು ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಸಲ್ಲಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಭೀಮಣ್ಣ ತಿಪ್ಪನಟಗಿ,ನಿಂಗನಗೌಡ ಗುಳಬಾಳ,ರಮೇಶ ದೊರೆ ಆಲ್ದಾಳ,ತಿರುಪತಿ ಸುರಪುರ,ಹಣಮಂತ್ರಾಯ ದೇವರಗೋನಾಲ,ಆನಂದ ಬಾದ್ಯಾಪುರ,ಯಂಕೋಬ ದೊರೆ,ದೇವು ನಂದಿ ಮಾಲಗತ್ತಿ,ಭೀಮಣ್ಣ ಮಕಾಶಿ,ರಾಯಪ್ಪ ಚಿಕ್ಕನಹಳ್ಳಿ,ದೇವಿಂದ್ರಪ್ಪ ಹಳ್ಳಿಗೌಡ ಕಚಕನೂರ,ಚಳಿಗೆಪ್ಪಗೌಡ,ಗ್ಯಾನಪ್ಪಗೌಡ ಲಿಂಗದಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago